Amethi: ಎಸ್‌ಪಿ ಶಾಸಕನ ಗೂಂಡಾಗಿರಿ, ಬಿಜೆಪಿ ನಾಯಕಿಯ ಪತಿಗೆ ಪೊಲೀಸ್ ಠಾಣೆ ಎದುರು ಥಳಿತ
ಉತ್ತರ ಪ್ರದೇಶ(Uttar Pradesh)ದ ಅಮೇಥಿಯಲ್ಲಿ ಸಮಾಜವಾದಿ(Samajwadi) ಪಕ್ಷದ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಗೂಂಡಾಗಿರಿ ನಡೆಸುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
ಉತ್ತರ ಪ್ರದೇಶ(Uttar Pradesh)ದ ಅಮೇಥಿಯಲ್ಲಿ ಸಮಾಜವಾದಿ(Samajwadi) ಪಕ್ಷದ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಗೂಂಡಾಗಿರಿ ನಡೆಸುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಸಮಾಜವಾದಿ ಪಕ್ಷದ ಕಾರ್ಯಕರ್ತರು ಮೊದಲು ಪೊಲೀಸ್ ಠಾಣೆಯ ಮುಂದೆ ಸಾಗುತ್ತಿದ್ದ ಬಿಜೆಪಿಯ ಪುರಸಭೆ ಅಭ್ಯರ್ಥಿ ರಶ್ಮಿ ಸಿಂಗ್ ಅವರ ಪತಿ ದೀಪಕ್ ಸಿಂಗ್ ಅವರ ವಾಹನವನ್ನು ಸುತ್ತುವರೆದರು. ಇದಾದ ಬಳಿಕ ಎಸ್‌ಪಿ ಶಾಸಕರು ಬಿಜೆಪಿ ಅಭ್ಯರ್ಥಿಯ ಪತಿಯನ್ನು ತೀವ್ರವಾಗಿ ಥಳಿಸಿದ್ದಾರೆ. ಅಮೇಥಿಯಲ್ಲಿ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಅವರ ಬಹಿರಂಗ ಗೂಂಡಾಗಿರಿಯ ವಿಡಿಯೋ ಇದೀಗ ಮುನ್ನೆಲೆಗೆ ಬಂದಿದೆ.
ಮತ್ತಷ್ಟು ಓದಿ: 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಜನರು ಇದಕ್ಕೆ ಉತ್ತರಿಸುತ್ತಾರೆ: ಸಿಸೋಡಿಯಾ ಬಂಧನ ಖಂಡಿಸಿ ಅಖಿಲೇಶ್ ಟ್ವೀಟ್
ದೀಪಕ್ ಸಿಂಗ್ ಅವರನ್ನು ರಕ್ಷಿಸಲು ಪೊಲೀಸರು ಅವರನ್ನು ಠಾಣೆಯೊಳಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಎಸ್‌ಪಿ ಶಾಸಕರು ಅಲ್ಲಿಯೂ ಶಾಂತವಾಗಿರದೆ ದೀಪಕ್ ಸಿಂಗ್ ಜತೆ ಜಗಳವಾಡಿದ್ದಾರೆ, ಈಗಾಗಲೇ ಪೊಲೀಸ್ ಠಾಣೆಯೊಳಗೆ ಹಾಜರಿದ್ದ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್, ದೀಪಕ್ ಸಿಂಗ್‌ಗೆ ತೀವ್ರವಾಗಿ ಥಳಿಸಿದ್ದಾರೆ.
ಇದೀಗ ಸಮಸ್ಯೆ ಬಗೆಹರಿದಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೊದಲು ದೀಪಕ್ ಸಿಂಗ್ ಬೆಂಬಲಿಗರು ನಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ರಾಕೇಶ್ ಸಿಂಗ್ ಕೂಡ ದೂರಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Wed, 10 May 23