ಕೆಲವರು ನಕಾರಾತ್ಮಕತೆಯನ್ನೇ ತುಂಬಿಕೊಂಡಿರುತ್ತಾರೆ: ರಾಜಸ್ಥಾನದಲ್ಲಿ ಮೋದಿ ವಾಗ್ದಾಳಿ
ಇಂದು 5500 ಕೋಟಿ ರೂ.ಗೂ ಹೆಚ್ಚು ಮೊತ್ತದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಿದ್ದೇನೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ರಾಜಸ್ಥಾನದ ಜನರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜಸ್ಥಾನದಲ್ಲಿ (Rajasthan) ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕೆಲವು ಜನರು ನಕಾರಾತ್ಮಕತೆಯಿಂದ ತುಂಬಿದ್ದಾರೆ, ದೇಶದಲ್ಲಿ ಒಳ್ಳೆಯದನ್ನು ನೋಡಲು ಅವರು ಬಯಸುವುದಿಲ್ಲ ಎಂದು ಹೇಳಿದ್ದಾರೆ. ರಾಜಸ್ಥಾನದ ರಾಜ್‌ಸಮಂದ್(Rajsamand) ಜಿಲ್ಲೆಯ ನಾಥದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ₹ 5,500 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ, ಎಲ್ಲವನ್ನು ಮತದಿಂದ ಅಳೆಯುವವರಿಗೆ ದೇಶವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಯಾರನ್ನೂ ಹೆಸರಿಸದೆ ವಾಗ್ದಾಳಿ ನಡೆಸಿದ ಮೋದಿ ದೇಶದಲ್ಲಿ ಕೆಲವರು ಇಂತಹ ವಿಕೃತ ಮನಸ್ಥಿತಿಗೆ ಬಲಿಯಾಗಿದ್ದಾರೆ. ಅವರು ತುಂಬಾ ನಕಾರಾತ್ಮಕತೆಯಿಂದ ತುಂಬಿದ್ದಾರೆ, ಅವರು ದೇಶದಲ್ಲಿ ಒಳ್ಳೆಯದನ್ನು ನೋಡಲು ಬಯಸುವುದಿಲ್ಲ. ಅವರು ವಿವಾದ ಸೃಷ್ಟಿಸಲು ಮಾತ್ರ ಇಷ್ಟಪಡುತ್ತಾರೆ. ಸುಸ್ಥಿರ ಅಭಿವೃದ್ಧಿ ಮತ್ತು ಕ್ಷಿಪ್ರ ಅಭಿವೃದ್ಧಿಗೆ ಮೂಲ ವ್ಯವಸ್ಥೆಯ ಜತೆಗೆ ಆಧುನಿಕ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಅಗತ್ಯ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದಿದ್ದಾರೆ.
Today I have inaugurated and laid the foundation stone of infrastructure projects worth more than Rs 5500 crore. I congratulate the people of Rajasthan for these development projects. Our government is focusing on providing modern infrastructure in Rajasthan: PM Narendra Modi pic.twitter.com/WtIoxyvzex
— ANI (@ANI) May 10, 2023
ಇಂದು 5500 ಕೋಟಿ ರೂ.ಗೂ ಹೆಚ್ಚು ಮೊತ್ತದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಿದ್ದೇನೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ರಾಜಸ್ಥಾನದ ಜನರನ್ನು ಅಭಿನಂದಿಸುತ್ತೇನೆ. ನಮ್ಮ ಸರ್ಕಾರವು ರಾಜಸ್ಥಾನದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನಹರಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಈ ಚಿಂತನೆಯಿಂದಾಗಿ ಈ ಹಿಂದೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಈಗಾಗಲೇ ಸಾಕಷ್ಟು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದ್ದರೆ ವೈದ್ಯರ ಕೊರತೆ ಇರುತ್ತಿರಲಿಲ್ಲ ಎಂದಿದ್ದಾರೆ ಅವರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ