ಪ್ರಯಾಗ್‌ರಾಜ್ ಹತ್ಯೆ ಪ್ರಕರಣ ಆರೋಪಿಯ ಫೋಟೊ ಟ್ವೀಟ್ ಮಾಡಿ ಬಿಜೆಪಿ-ಸಮಾಜವಾದಿ ಪಕ್ಷ ನಡುವೆ ಜಟಾಪಟಿ
Prayagraj murder case 2005ರಲ್ಲಿ ನಡೆದ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್‌ನ ಹತ್ಯೆಗೆ ಯೋಜನೆ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 27 ವರ್ಷದ ಸದಾಕತ್ ಖಾನ್‌ನನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿದ್ದರು
ದೆಹಲಿ: ಕಳೆದ ವಾರ ಕೊಲೆ ಪ್ರಕರಣದಲ್ಲಿ ಸಾಕ್ಷಿಯೊಬ್ಬರನ್ನು ಸಾರ್ವಜನಿಕವಾಗಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ(BJP) ಮತ್ತು ಸಮಾಜವಾದಿ ಪಕ್ಷದ (Samajwadi Party)ನಡುವೆ ರಾಜಕೀಯ ಜಟಾಪಟಿ ನಡೆದಿದೆ. ಬಹುಜನ ಸಮಾಜ ಪಕ್ಷದ (BSP) ಶಾಸಕನ ಹತ್ಯೆ ಪ್ರಕರಣದ ಸಾಕ್ಷಿ ಉಮೇಶ್ ಪಾಲ್ ಅವರನ್ನು ಶುಕ್ರವಾರ ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇತ್ತ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಜೊತೆಗಿನ ಪ್ರಯಾಗ್‌ರಾಜ್ ಹತ್ಯೆಯ ಆರೋಪಿ ಸದಾಕತ್ ಖಾನ್ ಅವರ ದಿನಾಂಕವಿಲ್ಲದ ಫೋಟೋವನ್ನು ಬಿಜೆಪಿ ನಾಯಕರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಸಮಾಜವಾದಿ ಪಕ್ಷವನ್ನು “ಅಪರಾಧಿಗಳ ನರ್ಸರಿ” ಎಂದು ಕರೆದಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಅಪರಾಧದ ವಿರುದ್ಧ ಸರ್ಕಾರವು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದಿದ್ದಾರೆ. ನಮ್ಮ ಸರ್ಕಾರವು ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಸಮಾಜವಾದಿ ಪಕ್ಷವು ಕ್ರಿಮಿನಲ್‌ಗಳ ನರ್ಸರಿ ಎಂದು ಇಡೀ ರಾಜ್ಯಕ್ಕೆ ತಿಳಿದಿದೆ. ಆದರೆ ಯಾವುದೇ ಅಪರಾಧಿಗಳ ವ್ಯಾಪ್ತಿಯು ಏನೇ ಇದ್ದರೂ ನಾವು ಆ ವ್ಯಕ್ತಿಯನ್ನು ಬಿಡುವುದಿಲ್ಲ ಪಾಠಕ್ ಹೇಳಿದ್ದಾರೆ.
ಫೋಟೋಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಯಾರು ಬೇಕಾದರೂ ಬಂದು ಸಾರ್ವಜನಿಕ ಅಧಿಕಾರಿಯೊಂದಿಗೆ ಫೋಟೋ ಕ್ಲಿಕ್ಕಿಸಬಹುದು ಎಂದು ಹೇಳಿದ್ದಾರೆ.
“ಯಾರ ಜೊತೆ ಬೇಕಾದರೂ ಫೋಟೋ ಕ್ಲಿಕ್ಕಿಸಿಕೊಳ್ಳಬಹುದು. ನಿನ್ನೆ ಸಿಎಂ ಮತ್ತು ನಾನು ಒಟ್ಟಿಗೆ ಫೋಟೋ ಹಾಕಿದ್ದೆವು. ಇದು ಸಾಮಾಜಿಕ ಜಾಲತಾಣಗಳ ಯುಗ, ಯಾರಾದರೂ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ” ಎಂದಿದ್ದಾರೆ ಅಖಿಲೇಶ್.
ಅದೇ ವೇಳೆಸಮಾಜವಾದಿ ಪಕ್ಷದ ವಕ್ತಾರ ಅಮೀಕ್ ಜಮೇಯ್ ಅವರು ಮಾಜಿ ಬಿಜೆಪಿ ಶಾಸಕ ಉದಯಭಾನ್ ಕಾರವಾರಿಯಾ ಅವರೊಂದಿಗೆ ಖಾನ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ.
सदाकत वर्तमान में BJP का सदस्य था जिसकी फोटो सपा के साथ जोड़ी जा रही है
BJP की पूर्व विधायिका नीलम करवरिया के घर पर नीलम के पति उदयभान करवरिया के साथ सदाकत की फोटो BJP के साथ इस घटनाक्रम का कनेक्शन बताती हैं
इससे पहले भी एक BJP नेता राहिल इस केस का मास्टरमाइंड पकड़ा जा चुका है pic.twitter.com/SSGc4cVtmO
— Ameeque Jamei (@ameeque_Jamei) February 28, 2023
2005ರಲ್ಲಿ ನಡೆದ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್‌ನ ಹತ್ಯೆಗೆ ಯೋಜನೆ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 27 ವರ್ಷದ ಸದಾಕತ್ ಖಾನ್‌ನನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿದ್ದರು.
ರಾಜ್ಯದ ಬೃಹತ್ ನಗರಗಳಲ್ಲಿ ಒಂದಾದ ಪ್ರಯಾಗ್‌ರಾಜ್‌ನ ಮುಖ್ಯ ರಸ್ತೆಯಲ್ಲಿ ಎಸ್‌ಯುವಿಯ ಹಿಂದಿನ ಸೀಟಿನಿಂದ ಹೊರಬರುತ್ತಿದ್ದಾಗ ಪಾಲ್ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಗುಂಡಿಕ್ಕಿ ಕೊಂದರು. ದಾಳಿಯ ದೃಶ್ಯ ಹಲವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಕಳೆದ ವಾರ, ಸಾರ್ವಜನಿಕ ಹತ್ಯೆಯ ನಂತರ ಎದ್ದ ಕಠಿಣ ಪ್ರಶ್ನೆಗಳ ಬಗ್ಗೆ ಮುಖ್ಯಮಂತ್ರಿ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.ಸಂತ್ರಸ್ತ ಕುಟುಂಬದವರು ಆರೋಪಿಸಿರುವ ಅತೀಕ್ ಅಹ್ಮದ್ ಅವರು ಸಮಾಜವಾದಿ ಪಕ್ಷವು ಪೋಷಿಸಿದ ಮಾಫಿಯಾದ ಭಾಗವಾಗಿದ್ದಾರೆ . ನಾವು ಅದರ ಹೆಡೆಮುರಿ ಕಟ್ಟಲು ಮಾತ್ರ ಕೆಲಸ ಮಾಡಿದ್ದೇವೆ ಎಂಬುದು ನಿಜವಲ್ಲವೇ? ಎಂದು ಯೋಗಿ ಆದಿತ್ಯನಾಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದರು, “ರಾಮ ರಾಜ್ಯ” ದಲ್ಲಿ ರಾಜ್ಯದ ಪೊಲೀಸರು “ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಖಿಲೇಶ್ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ