ಜಮ್ಮು ಕಾಶ್ಮೀರ ಪೊಲೀಸರಿಂದ 9 ಉಗ್ರಗಾಮಿಗಳ ಪಟ್ಟಿ ಬಿಡುಗಡೆ

ಈ ಎಲ್ಲಾ 9 ಉಗ್ರಗಾಮಿಗಳು ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಕ್ರಿಯವಾಗಿದ್ದು, ಅವರ ಕುರಿತು ಮಾಹಿತಿ ನೀಡುವಂತೆ ಕಾಶ್ಮೀರ ವಲಯ ಪೊಲೀಸರ ಟ್ವೀಟ್ ಮನವಿ ಮಾಡಿದೆ.

ಜಮ್ಮು ಕಾಶ್ಮೀರ ಪೊಲೀಸರಿಂದ 9 ಉಗ್ರಗಾಮಿಗಳ ಪಟ್ಟಿ ಬಿಡುಗಡೆ
ಭದ್ರತಾ ಪಡೆ(ಪ್ರಾತಿನಿಧಿಕ ಚಿತ್ರ)

Updated on: Mar 14, 2021 | 3:04 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು 9 ಉಗ್ರಗಾಮಿಗಳ ಪಟ್ಟಿಯನ್ನು ಶನಿವಾರ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ್ದು, ಅವರನ್ನು ಪತ್ತೆಹಚ್ಚಿದವರಿಗೆ ಅಥವಾ ಉಗ್ರಗಾಮಿಗಳ ಕುರಿತು ಮಾಹಿತಿ ಹಂಚಿಕೊಂಡವರಿಗೆ ಸೂಕ್ತ ಬಹುಮಾನ ಪಾರಿತೋಷಕ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಪೊಲೀಸರು ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಉಗ್ರಗಾಮಿಗಳ ಭಾವಚಿತ್ರ ಮತ್ತು ಹೆಸರನ್ನು ಸಹ ನಮೂದಿಸಲಾಗಿದೆ. ಈ ಎಲ್ಲಾ 9 ಉಗ್ರಗಾಮಿಗಳು ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಕ್ರಿಯವಾಗಿದ್ದು, ಅವರ ಕುರಿತು ಮಾಹಿತಿ ನೀಡುವಂತೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಈ 9 ಉಗ್ರಗಾಮಿಗಳಲ್ಲಿ 6 ಮಂದಿ 2020ರ ಈಚೆಗೆ ಸಕ್ರಿಯವಾಗಿ ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಂಡವರಾಗಿದ್ದಾರೆ. ಉಳಿದ ಮೂವರು ಕೆಲ ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ಜಾಲತಾಣವು ವರದಿ ಮಾಡಿದೆ. ಸಾರ್ವಜನಿಕರ ಬಳಿ ಇವರ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ತಿಳಿಸಬೇಕಾದ ಪೊಲೀಸರ ಮೂಲಗಳ ವಿವರಗಳನ್ನೂ ಸಹ ಟ್ವೀಟ್​ನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: West Bengal Assembly Elections 2021: ಧೈರ್ಯದಿಂದಲೇ ಹೋರಾಟ ಮುಂದುವರಿಸುವೆ, ನಾವು ಹೇಡಿಗಳ ಮುಂದೆ ತಲೆಬಾಗಲ್ಲ: ಮಮತಾ ಬ್ಯಾನರ್ಜಿ

Quad Summit 2021: ಪ್ರಜಾಪ್ರಭುತ್ವದ ಮೌಲ್ಯಗಳಿಂದ ನಾವು ಒಂದಾಗಿದ್ದೇವೆ: ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

Published On - 3:02 pm, Sun, 14 March 21