ಜಮ್ಮು ಮತ್ತು ಕಾಶ್ಮೀರದ ಟಿಕ್ ಟಾಕ್ ಮತ್ತು ಟಿವಿ ತಾರೆ ಭಯೋತ್ಪಾದಕರ ಗುಂಡಿಗೆ ಬಲಿ. 10-ವರ್ಷದ ಸಂಬಂಧಿಗೆ ಗಾಯ

| Updated By: shivaprasad.hs

Updated on: May 26, 2022 | 10:02 AM

Kashmiri TV Actor Amreen Bhat: ಕಾಶ್ಮೀರ ವಲಯದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಬುಧವಾರ ಸಾಯಂಕಾಲ ಸುಮಾರು 7:55 ಕ್ಕೆ ಭಯೋತ್ಪಾದಕರು ಅಮ್ರೀನ್ ಭಟ್ ಹೆಸರಿನ ಮಹಿಳೆಯ ಮನೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಟಿಕ್ ಟಾಕ್ ಮತ್ತು ಟಿವಿ ತಾರೆ ಭಯೋತ್ಪಾದಕರ ಗುಂಡಿಗೆ ಬಲಿ. 10-ವರ್ಷದ ಸಂಬಂಧಿಗೆ ಗಾಯ
ಅಮ್ರೀನ್ ಭಟ್, ಕಿರುತೆರೆ ಮತ್ತು ಟಿಕ್ ಟಾಕ್ ತಾರೆ
Follow us on

Budgam (Jammu and Kshmir): ಪಾಕಿಸ್ತಾನಲ್ಲಿ ಟಿಕ್ ಟಾಕ್ ತಾರೆಯರು ತಮ್ಮ ಸಂವೇದನೆಹೀನ ವಿಡಿಯೋಗಳನ್ನು ಶೂಟ್ ಅಲ್ಲಿನ ಜನರಿಂದ ವ್ಯಾಪಕ ಖಂಡನೆಗೆ ಗುರಿಯಾಗುತ್ತಿದ್ದರೆ ಭಾರತದಲ್ಲಿ ಭಯೋತ್ಪಾದಕರ (Terrorists) ಗುಂಡಿಗೆ ಬಲಿಯಾಗುತ್ತಿದ್ದಾರೆ. ಈ ಫೋಟೋನಲ್ಲಿರುವ ಮಹಿಳೆಯನ್ನು ನೋಡಿ. ಅವರ ಹೆಸರು ಅಮ್ರೀನ್ ಭಟ್ (Amreen Bhat), ಹೆಸರಿಂದಲೇ ಗೊತ್ತು ಮಾಡಿಕೊಳ್ಳಬಹುದು ಅವರು ಜಮ್ಮು ಮತ್ತು ಕಾಶ್ಮೀರದವರು ಅನ್ನೋದು. 35-ವರ್ಷ ವಯಸ್ಸಿನ ಅಮ್ರೀನ್ ಅವರನ್ನು ಬುಧವಾರದದಂದು ಕಾಶ್ಮೀರದ ಬುದ್ಗಾಮ್ (Budgam) ಜಿಲ್ಲೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಅವರ ಮೇಲೆ ಹಲ್ಲೆ ನಡೆದಾಗ ಜೊತೆಗಿದ್ದ 10-ವರ್ಷದ ಅಣ್ಣನ ಮಗ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕಾಶ್ಮೀರ ವಲಯದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಬುಧವಾರ ಸಾಯಂಕಾಲ ಸುಮಾರು 7:55 ಕ್ಕೆ ಭಯೋತ್ಪಾದಕರು ಅಮ್ರೀನ್ ಭಟ್ ಹೆಸರಿನ ಮಹಿಳೆಯ ಮನೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ವೈದ್ಯರು ಅವರು ಮರಣಿಸಿರುವೆರೆಂದು ಘೋಷಿಸಿದರು.

ಆಗಲೇ ಹೇಳಿದ ಹಾಗೆ ಅವರು ಟಿಕ್ ಟಾಕ್ ಮತ್ತು ಕಿರುತೆರೆ ಕಲಾವಿದೆಯಾಗಿದ್ದರು ಹಾಗೂ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು.

ಅಮ್ರೀನ್ ಅವರ ಸಂಬಂಧಿ 10-ವರ್ಷದ ಫರ್ಹಾನ್ ಜುಬೇರ್ ಸಹ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ ಮತ್ತು ಉಗ್ರರನ್ನು ಹಿಡಿಯಲು ಜಾಲ ಹಬ್ಬಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಯೋತ್ಪಾದಕರು ನಡೆಸಿರುವ ಎರಡನೇ ದಾಳಿ ಇದಾಗಿದೆ. ಮಂಗಳವಾರದಂದು ಶ್ರೀನಗರದ ಹೊರಭಾಗದಲ್ಲಿ ಭಯೋತ್ಪಾದಕರ ಒಬ್ಬ ಪೊಲೀಸ್ ಪೇದೆ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದರು. ಅವರನ್ನು ಉಳಿಸಲು ಹೋದ ಅವರ 7-ವರ್ಷದ ಮಗಳು ಕೂಡ ದಾಳಿಯಲ್ಇ ಗಾಯಗೊಂಡಿದ್ದಾಳೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:52 pm, Wed, 25 May 22