ಮಹಿಳೆಯೊಬ್ಬಳು ಗಂಡನ ಮನೆ ಲುಟಿ ಮಾಡಿ ಫೇಸ್ಬುಕ್ನಲ್ಲಿ ಪರಿಚಯವಾದ ಸ್ನೇಹಿತನೊಂದಿಗೆ ಓಡಿ ಹೋಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಪತ್ನಿ ಕದ್ದಿದ್ದಾಳೆ ಎಂದು ಆರೋಪಿಸಿ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಿಯಕರನೇ ತನ್ನ ಪತ್ನಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸಿ ಕರೆದೊಯ್ದಿದ್ದಾನೆ ಎಂದೂ ಪತಿ ಹೇಳಿಕೊಂಡಿದ್ದಾನೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಮಹಿಳೆ ಅಬಿರಾಲ್, 2017 ರಲ್ಲಿ ಪಂಜಾಬ್‌ನ ಮೊಹಾಲಿಯ ವಿನೋದ್ ಕುಮಾರ್ ಅವರನ್ನು ವಿವಾಹವಾದರು. ಆದರೆ, ನಂತರ ಅವರು ರಾಯ್ ಬರೇಲಿಯ ಫೈಜಾನ್ ಅಹ್ಮದ್ನೊಂದಿಗೆ ರಿಲೇಷನ್ಶಿಪ್ನಲ್ಲಿದ್ದಳು.
ಡಿಸೆಂಬರ್ 2024 ರಲ್ಲಿ, ಅಬಿರಾಲ್ ತನ್ನ ಪತಿಯನ್ನು ತೊರೆದು ತನ್ನ ಪ್ರೇಮಿ ಅಹ್ಮದ್ ಭೇಟಿಯಾಗಿ, ಎರಡು ದಿನಗಳ ಬಳಿಕ ಮದುವೆಯಾಗಿದ್ದಳು.
ಮತ್ತಷ್ಟು ಓದಿ: ಕನ್ಯೆ ಸಿಗದ ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ ಜಾಲ?
ಮದುವೆ ವಿಚಾರ ತಿಳಿದ ಪತಿ ರಾಯ್ ಬರೇಲಿ ಪೊಲೀಸರಿಗೆ ದೂರು ನೀಡಿದ್ದರು. ಅಹ್ಮದ್ ತನ್ನ ಪತ್ನಿಯನ್ನು ದಾರಿತಪ್ಪಿಸಿದ್ದಾನೆ, ಆಕೆ ಹೋಗುವಾಗ 5 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್ಗಳನ್ನು ಕದ್ದುಹೋಗಿದ್ದಾಳೆ ಎಂದು ಹೇಳಿದ್ದಾರೆ.
ಮಹಿಳೆ ತನ್ನ ಪ್ರೇಮಿಯೊಂದಿಗೆ ಇರಲು ಬಯಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿವಕಾಂತ್ ಪಾಂಡೆ ಹೇಳಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ