ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಂಬನ್ ಸುರಂಗ ಕುಸಿತವಾದ ಸ್ಥಳದಲ್ಲಿ ಅವಶೇಷಗಳಿಂದ ಇದುವರೆಗೆ 5 ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಾಂಬನ್ (Ramban Tunnel) ಜಿಲ್ಲೆಯ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ ಗುರುವಾರ ತಡರಾತ್ರಿ ಕುಸಿದಿತ್ತು. ಇದುವರೆಗೆ ಒಟ್ಟು ಐದು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಐದು ವ್ಯಕ್ತಿಗಳನ್ನು ಪತ್ತೆ ಮಾಡಲು ನಾವು ಕಾರ್ಯಾಚರಣೆಯನ್ನು ಮುಂದುವರಿಸಲು ಕಾಯುತ್ತಿದ್ದೇವೆ. 3 ಮೃತದೇಹಗಳನ್ನು ಗುರುತಿಸಲಾಗಿದ್ದು, ಈ ಮೂವರೂ ಪಶ್ಚಿಮ ಬಂಗಾಳದವರು. ಈ ಕುರಿತು ನಾವು ಪಶ್ಚಿಮ ಬಂಗಾಳದ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ರಾಂಬನ್ ಡಿಸಿ ಮುಸ್ಸರತ್ ಇಸ್ಲಾಂ ಹೇಳಿದ್ದಾರೆ.
ಶುಕ್ರವಾರ ಸಂಜೆ ಮತ್ತೆ ಭೂಕುಸಿತ ಸಂಭವಿಸಿ, ಪರ್ವತದ ಒಂದು ಭಾಗ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಕ್ರಿಯೆಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದರು. ಬಳಿಕ ಅವಶೇಷಗಳ ಅಡಿಯಲ್ಲಿ ಸಿಲುಕಿರುವ 9 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಇಂದು ಮುಂಜಾನೆ ಪುನರಾರಂಭವಾಯಿತು.
#WATCH | A portion of a mountain falls apart in the Makerkote area at Jammu–Srinagar National Highway in Ramban near the site of the recuse operation, where a part of an under-construction tunnel collapsed late last night pic.twitter.com/SAjDhwFgol
— ANI (@ANI) May 20, 2022
ಎಎನ್‌ಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಈ ಕುಸಿತವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಗುರುವಾರ ರಾತ್ರಿ 10.15ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಖೂನಿ ನಲ್ಲಾ ಬಳಿಯ ಹೆದ್ದಾರಿಯಲ್ಲಿ T3ನ ಆಡಿಟ್ ಸುರಂಗವು ಕಾಮಗಾರಿಯ ವೇಳೆ ಕುಸಿದುಬಿದ್ದಿತ್ತು. ಇದರಲ್ಲಿ ಕಾರ್ಮಿಕರು ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಜಮ್ಮುವಿನಲ್ಲಿ ಸುರಂಗ ಕುಸಿತದ ಬೆನ್ನಲ್ಲೇ ಪರ್ವತದ ಒಂದು ಭಾಗ ಕುಸಿದ ವಿಡಿಯೋ ವೈರಲ್
ರಸ್ತೆಯ ಬನಿಹಾಲ್-ರಾಂಬನ್ ಭಾಗದಲ್ಲಿ ಪ್ರಸ್ತುತ ಅನೇಕ ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಹೆದ್ದಾರಿಯ ಮಹತ್ವಾಕಾಂಕ್ಷೆಯ ಚತುಷ್ಪಥದ ಅತ್ಯಂತ ಕಷ್ಟಕರವಾದ ವಿಭಾಗವೆಂದು ಪರಿಗಣಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಅವಶೇಷಗಳು ಭಾರೀ ಪ್ರಮಾಣದಲ್ಲಿ ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳನ್ನು ಆವರಿಸಿರುವುದರಿಂದ ಸಿಕ್ಕಿಬಿದ್ದ ವ್ಯಕ್ತಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ. ಆದರೆ, ರಾತ್ರಿಯ ಸಮಯದಲ್ಲಿ ಖೋನಿ ನಾಲಾದಲ್ಲಿ ಸುರಂಗದ ಒಂದು ಭಾಗವು ಕುಸಿದ ನಂತರ ತಕ್ಷಣವೇ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ