ಕೊರೋನಾ 4ನೇ ಅಲೆ ಜೊತೆ ಮಂಕಿಪಾಕ್ಸ್ ಭೀತಿ, ಹೈ ಅಲರ್ಟ್: ಮಾರ್ಗಸೂಚಿ ಪ್ರಕಟ
ದೇಶದಲ್ಲಿ ಮಂಕಿಪಾಕ್ಸ್ ಭೀತಿ ಹಿನ್ನೆಲೆ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಲಕ್ಷಣ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಿದೆ.
ದೇಶದಲ್ಲಿ ಮಹಾಮಾರಿ ಸೋಂಕು ಕೊರೋನಾದ 3ನೇ ಅಲೆ ಕಡಿಮೆಯಾಗಿ 4ನೇ ಅಲೆ ಭೀತಿ ಎದುರಾಗಿದೆ. ಇದೀಗ ದೇಶಕ್ಕೆ ಮಂಕಿಪಾಕ್ಸ್ (Monkey Pox) ರೋಗದ ಭಯ ಹೆಚ್ಚಿಸಿದೆ. ಈಗಾಗಲೇ ವಿದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆಯಾದ ಹಿನ್ನೆಲೆ ಭಾರತದ ಆರೋಗ್ಯ ಇಲಾಖೆ (Department of Health) ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿ (Guidelines) ಪ್ರಕಟಿಸಿದೆ. ಅಮೆರಿಕ, ಯುರೋಪ್, ಯುಕೆ, ಆಸ್ಟ್ರೇಲಿಯಾ, ಕೆನಡಾ, ಆಫ್ರಿಕಾದಲ್ಲಿ ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದ್ದು, ಭಾರತದಲ್ಲಿ ಪತ್ತೆಯಾಗದಿದ್ದರೂ ಆತಂಕ ಸೃಷ್ಟಿಸಿದ ಹಿನ್ನೆಲೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಮಂಕಿಪಾಕ್ಸ್ ವೈರಸ್ ಬಗ್ಗೆ ಭಾರತದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕಣ್ಣಿಡಲು ಸೂಚಿನೆ ನೀಡಲಾಗಿದೆ. ಮಂಕಿಪಾಕ್ಸ್ ಇರುವ ದೇಶಗಳಿಂದ ಬಂದವರ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚಿಸಲಾಗಿದೆ. ಕಳೆದ 21 ದಿನಗಳಲ್ಲಿ ವಿದೇಶದಿಂದ ಬಂದವರನ್ನು ತಪಾಸಣೆಗೆ ನಡೆಸುವಂತೆ ಹಾಗೂ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರ ಮೇಲೂ ಕಣ್ಣಿಡಲು ಸೂಚನೆ ನೀಡಲಾಗಿದೆ.
ಮೈ ಮೇಲೆ ಗುಳ್ಳೆ ರೋಗದ ಲಕ್ಷಣ
ಮಂಕಿಪಾಕ್ಸ್ ರೋಗದ ಲಕ್ಷಣಗಳ ಬಗ್ಗೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಮೈ ಮೇಲೆ ಗುಳ್ಳೆ, ಜ್ವರ ಬರೋದು ಮಂಕಿಪಾಕ್ಸ್ ಲಕ್ಷಣ ಎಂದು ತಿಳಿಸಿದೆ. ಈ ರೋಗವು 2 ವಾರದಿಂದ 4 ವಾರಗಳ ಕಾಲ ಬಾಧಿಸಲಿದ್ದು, ಇಂಥ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: Flaxseeds: ಅಗಸೆ ಬೀಜಗಳನ್ನು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು..!
ರೋಡಂಟ್ಸ್ ಮತ್ತು ಪ್ರೈಮೆಟ್ಗಳಂತಹ ಕಾಡು ಪ್ರಾಣಿಗಳಲ್ಲಿ ಈ ವೈರಸ್ ಕಂಡುಬರುತ್ತದೆ. ಸೋಂಕಿತ ಪ್ರಾಣಿಗಳು ಕಚ್ಚುವುದರಿಂದ ಅಥವಾ ಅವುಗಳ ರಕ್ತ, ವಿಸರ್ಜಿತ ವಸ್ತುಗಳ ಸಂಪರ್ಕದಿಂದ, ಸೋಂಕಿತ ಪ್ರಾಣಿಗಳ ಮಾಂಸ ತಿನ್ನುವುದರಿಂದ ಈ ವೈರಸ್ ಮನುಷ್ಯರಿಗೂ ಹರಡುತ್ತದೆ. ಅದರಲ್ಲೂ ಯುವಕರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತದೆ. ಬಹುಪಾಲು ಸಿಡುಬನ್ನು ಹೋಲುವ ಈ ರೋಗ ಯುರೋಪ್‌ನ ಸ್ಲೇನ್ ಮತ್ತು ಪೋರ್ಚುಗಲ್‌ನಲ್ಲಿ 40ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಂಡಿದೆ. ಮಂಕಿಪಾಕ್ಸ್ ರೋಗ ವ್ಯಾಪಿಸುತ್ತಿರುವ ಹಿನ್ನೆಲೆ ಡಬ್ಲ್ಯೂಎಚ್ಒ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Monkeypox: ಒಂದೊಂದೇ ದೇಶಕ್ಕೆ ಲಗ್ಗೆ ಇಡುತ್ತಿದೆ ಮಂಕಿಪಾಕ್ಸ್: ವಿಶ್ವಸಂಸ್ಥೆ ಎಚ್ಚರಿಕೆ
ಇದನ್ನೂ ಓದಿ: ಚಾಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯವೇ?: ತಜ್ಞರು ಹೇಳೋದೆ ಬೇರೆ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ