ಮಗಳ ಅಕ್ರಮ ನೇಮಕಾತಿ: ಸತತ ಮೂರನೇ ದಿನ ಸಿಬಿಐ ಅಧಿಕಾರಗಳ ಮುಂದೆ ಹಾಜರಾದರು ಬಂಗಾಳ ಸಚಿವ ಪರೇಶ್ ಅಧಿಕಾರಿ
ಮೇಕ್ಲಿಗಂಜ್ ಕ್ಷೇತ್ರದ ಶಾಸಕರಾಗಿರುವ ಅಧಿಕಾರಿ ಅವರನ್ನು ಗುರುವಾರದಂದು 9 ಗಂಟೆಗಳಿಗಿಂತ ಹೆಚ್ಚು ಮತ್ತು ಶುಕ್ರವಾರದಂದು ಸುಮಾರು 4 ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜೀ(Mamata Banerjee) ಅವರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಪರೇಶ್ ಅಧಿಕಾರಿ (Paresh Adhikari) ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) (CBI) ಶನಿವಾರದಂದು ಸತತ ಮೂರನೇ ದಿನ ವಿಚಾರಣೆ ನಡೆಸಿದರು. ಅಧಿಕಾರಿ ಅವರು ತಮ್ಮ ಮಗಳಿಗೆ ಕಾನೂನುಬಾಹಿರವಾಗಿ ಒಬ್ಬ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ (primary school teacher) ನೇಮಕಾತಿ ಮಾಡಿಸಿರುವ ಆರೋಪ ಎದುರಿಸುತ್ತಿದ್ದಾರೆ. ಕೊಲ್ಕತ್ತಾದ ಹೈಕೋರ್ಟ್ ಶುಕ್ರವಾರದಂದು ಸಚಿವರ ಪುತ್ರಿ ಅಂಕಿತಾ ಅಧಿಕಾರಿ ಅವರನ್ನು ಸರ್ಕಾರದ ಅನುದಾನಿತ ಶಾಲೆಯೊಂದರ ಶಿಕ್ಷಕಿಯು ಹುದ್ದೆಯಿಂದ ವಜಾಗೊಳಿಸಿದೆ ಮತ್ತು ಅವರು ಕೆಲಸ ಮಾಡಿದ 41-ತಿಂಗಳ ಅವಧಿಯಲ್ಲಿ ಪಡೆದ ಸಂಬಳವನ್ನು ಹಿಂತಿರುಗಿಸುವಂತೆ ಆದೇಶವನ್ನೂ ನೀಡಿದೆ.
ಮಮತಾ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿರುವ ಪರೇಶ್ ಅಧಿಕಾರಿ ಅವರು ಕೊಲ್ಕತ್ತಾದ ಸಿಬಿಐ ಕಚೇರಿಯನ್ನು ಶನಿವಾರ ಬೆಳಗ್ಗೆ 10:35 ಕ್ಕೆ ತಲುಪಿದರು. ಅವರ ಆಪ್ತ ಮೂಲಗಳಿಂದ ಪ್ರಾಪ್ತವಾಗಿರುವ ಮಾಹಿತಿ ಪ್ರಕಾರ ಅಂಕಿತಾ ಅವರ ನೇಮಕಾತಿಗೆ ಸಂಬಂಧಿಸಿದ ಹಲವಾರು ಪ್ರಮುಖ ದಾಖಲೆಗಳ ಫೈಲ್ ಒಂದನ್ನು ಸಚಿವರು ಕಚೇರಿಗೆ ತೆಗೆದುಕೊಂಡು ಹೋದರು.
ಶನಿವಾರ ವಿಚಾರಣೆ ಅರಂಭವಾಗುವ ಮೊದಲು ಸಿಬಿಐ ಆಧಿಕಾರಿಯೊಬ್ಬರು ಮಾಧ್ಯಮಗಳಿಗೆ ಒದಗಿಸಿದ ಮಾಹಿತಿಯ ಪ್ರಕಾರ ತಮ್ಮ ಮಗಳು ಅಂಕಿತಾಳ ನೇಮಕಾತಿಯ ಸಲುವಾಗಿ ಪರೇಶ್ ಆಧಿಕಾರಿ ತಮ್ಮ ಮೊಬೈಲ್ ಫೋನಿಂದ ಮಾಡಿದ ಹಲವಾರು ಫೋನ್ ಕರೆಗಳ ಬಗ್ಗೆ ಪ್ರಶ್ನಿಸಲಾಗಲಿದೆ.
ಸಚಿವರು ಮಾಡಿದ ಕರೆಗಳು ಅವರ ಮಗಳು ಅಂಕಿತಾ ಸರ್ಕಾರದ ಅನುದಾನಿತ ಶಾಲೆಯೊಂದರಲ್ಲಿ ಸಹಾಯಕ ಶಿಕ್ಷಕಿಯಾಗಿ ನೇಮಕಾತಿ ಹೊಂದಿದ ಅಂಶದ ಜೊತೆ ಸಂಬಂಧ ಹೊಂದಿರುವ ಸಾಧ್ಯತೆ ಇದೆ. ಶುಕ್ರವಾರದ ಹಾಗೆ ಶನಿವಾರ ನಡೆದ ವಿಚಾರಣೆಯನ್ನು ವಿಡಿಯೋಗ್ರಾಫ್ ಮಾಡಲಾಗುತ್ತದೆ ಎಂದು ಸಿಬಿಐ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದರು.
ಮೇಕ್ಲಿಗಂಜ್ ಕ್ಷೇತ್ರದ ಶಾಸಕರಾಗಿರುವ ಅಧಿಕಾರಿ ಅವರನ್ನು ಗುರುವಾರದಂದು 9 ಗಂಟೆಗಳಿಗಿಂತ ಹೆಚ್ಚು ಮತ್ತು ಶುಕ್ರವಾರದಂದು ಸುಮಾರು 4 ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.
ಸಿಬಿಐ ಆಂತರಿಕ ಮೂಲಗಳಿಂದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿ ಸಂಸ್ಥೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅದರ ಅಧಿಕಾರಿಗಳು ಮುಂದಿನ ವಾರ ಅಂಕಿತಾ ಅಧಿಕಾರಿಯನ್ನು ವಿಚಾರಣೆಗೆ ಕರೆಸಲಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ