ಈ ಕಾಲೇಜಿನಲ್ಲಿ ನಿತ್ಯ ವಿದ್ಯಾರ್ಥಿಗಳು ಹೆಲ್ಮೆಟ್​ ಧರಿಸಿಯೇ ಕುಳಿತು ಪಾಠ ಕೇಳ್ತಾರೆ ಏಕೆ? ಇಲ್ಲಿದೆ ಮಾಹಿತಿ

|

Updated on: Mar 12, 2024 | 12:07 PM

ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿತ್ಯವೂ ಹೆಲ್ಮೆಟ್ ಧರಿಸಿಯೇ ತರಗತಿಗೆ ಬರಬೇಕು. ಇಲ್ಲವಾದರೆ ಎಲ್ಲಿ ಪ್ರಾಣ ಹೋಗಿಬಿಡುತ್ತದೋ ಎನ್ನುವ ಭಯ ಅವರನ್ನು ಕಾಡುತ್ತಲೇ ಇರುತ್ತದೆ. ಹಾಗಾದರೆ ಪ್ರತಿಯೊಂದು ವಿದ್ಯಾರ್ಥಿಯೂ ನಿತ್ಯ ಯಾಕೆ ಹೆಲ್ಮೆಟ್​ ಧರಿಸಿ ಶಾಲೆಗೆ ಬರುತ್ತಾರೆ ಈ ಕುರಿತು ಮಾಹಿತಿ ಇಲ್ಲಿದೆ.

ಈ ಕಾಲೇಜಿನಲ್ಲಿ ನಿತ್ಯ ವಿದ್ಯಾರ್ಥಿಗಳು ಹೆಲ್ಮೆಟ್​ ಧರಿಸಿಯೇ ಕುಳಿತು ಪಾಠ ಕೇಳ್ತಾರೆ ಏಕೆ? ಇಲ್ಲಿದೆ ಮಾಹಿತಿ
ಕಾಲೇಜು
Follow us on

ಸಾಮಾನ್ಯವಾಗಿ ವಿದ್ಯಾರ್ಥಿಗಳ ಪೋಷಕರು ಕಾಲೇಜುಗಳಲ್ಲಿರುವ ಶಿಕ್ಷಕರು ಹಾಗೂ ಸೌಲಭ್ಯದ ಆಧಾರದ ಮೇಲೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಅನೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರು ಸರ್ಕಾರಿ ಕಾಲೇಜುಗಳಲ್ಲೇ ಓದಲು ಬಯಸುತ್ತಾರೆ. ಖಾಸಗಿ ಕಾಲೇಜುಗಳು ಉತ್ತಮ ಸೌಲಭ್ಯವನ್ನು ಒದಗಿಸುತ್ತವೆ ಆದರೆ ಸರ್ಕಾರಿ ಕಾಲೇಜುಗಳು ಹಾಗಲ್ಲ, ಕಟ್ಟಡದಿಂದ ಹಿಡಿದು ಶೌಚಾಲಯದವರೆಗೂ ವಿದ್ಯಾರ್ಥಿಗಳು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.

ಹಾಗೆಯೇ ಜೆಮ್​ಶೆದ್​ಪುರದ ವರ್ಕರ್ಸ್​ ಕಾಲೇಜ್​ ಆಫ್​ ಮ್ಯಾಂಗೋ ಕಾಲೇಜಿನ ಪರಿಸ್ಥಿತಿ ಕೂಡ ವಿಭಿನ್ನವಾಗಿದೆ.
ಈ ವರ್ಕರ್ ಕಾಲೇಜಿನಲ್ಲಿ ಓದಲು ಬರುವ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಇದು ವಿಶಿಷ್ಟವಾದ ಡ್ರೆಸ್ ಕೋಡ್ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು.

ವಾಸ್ತವವಾಗಿ, ಈ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸುವುದರ ಹಿಂದೆ ವಿಶೇಷ ಕಾರಣವಿದೆ. ಈ ವಿದ್ಯಾರ್ಥಿಗಳು ತರಗತಿಯಲ್ಲಿ ಹೆಲ್ಮೆಟ್ ಧರಿಸಿ ಓದುತ್ತಿರುವ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಲ್ಲಿಂದಲೇ ವೈರಲ್ ಆಗಿದೆ. ಈ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಲು ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ.

ಮತ್ತಷ್ಟು ಓದಿ: ಕೊಪ್ಪಳ: ಪದೇ ಪದೇ ಉದುರಿ ಬೀಳುತ್ತಿದೆ ಅಂಗನವಾಡಿಯ ಮೇಲ್ಛಾವಣಿ ಸಿಮೆಂಟ್, ಬಯಲಲ್ಲಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ

ಕಟ್ಟಡ ತುಂಬಾ ಶಿಥಿಲಗೊಂಡಿದ್ದು, ಈ ವಿದ್ಯಾರ್ಥಿಗಳು ತರಗತಿಯಲ್ಲಿ ಹೆಲ್ಮೆಟ್ ಧರಿಸಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ವಾಸ್ತವವಾಗಿ, ಈ ಕಾಲೇಜಿನ ಕಟ್ಟಡವು ಸಾಕಷ್ಟು ಹಳೆಯದಾಗಿದೆ. ಛಾವಣಿ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗಾಗಿ ತರಗತಿಯೊಳಗೆ ಹೆಲ್ಮೆಟ್ ಧರಿಸಿ ಕುಳಿತುಕೊಳ್ಳುತ್ತಾರೆ. ಹಲವು ವಿದ್ಯಾರ್ಥಿಗಳ ಮೇಲೆ ಛಾವಣಿಯ ಕೆಲ ಭಾಗ ಬಿದ್ದಿದೆ. ಇದರಿಂದಾಗಿ ತರಗತಿಗಳಿಗೆ ಹಾಜರಾಗಬೇಕಾದರೆ ಒಂದೇ ಒಂದು ಆಯ್ಕೆ ಉಳಿದಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಪ್ರಾಂಶುಪಾಲರು ಹೇಳಿದ್ದೇನು?
ಕಟ್ಟಡ ನಿರ್ಮಾಣವಾಗಿ ಎಪ್ಪತ್ತು ವರ್ಷಗಳೇ ಕಳೆದಿವೆ. ಇದರ ದುಸ್ಥಿತಿ ಕುರಿತು ಹಲವು ಬಾರಿ ಉನ್ನತ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಅದೇ ಸ್ಥಿತಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಪ್ರಾಂಶುಪಾಲರಾದ ಎಸ್​ಪಿ ಮಹಾಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:06 pm, Tue, 12 March 24