AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಪದೇ ಪದೇ ಉದುರಿ ಬೀಳುತ್ತಿದೆ ಅಂಗನವಾಡಿಯ ಮೇಲ್ಛಾವಣಿ ಸಿಮೆಂಟ್, ಬಯಲಲ್ಲಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ

ಕೊಪ್ಪಳ ನಗರದ ರೈಲ್ವೇ ಸ್ಟೇಷನ್ ಏರಿಯಾದಲ್ಲಿರುವ ಅಂಗನವಾಡಿ ಕಟ್ಟಡ ಬೀಳುವ ಹಂತದಲ್ಲಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆ ಮಕ್ಕಳನ್ನು ಬಯಲಲ್ಲಿ ಕೂರಿಸಿ ಪಾಠ ಹೇಳಿಕೊಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಮಕ್ಕಳು ಬಯಲಲ್ಲೇ ಆಟ-ಪಾಠ ಕೇಳುವಂತಾಗಿದೆ. ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಪೋಷಕರು ಭಯ ಪಡ್ತಿದ್ದಾರೆ. 28 ಮಕ್ಕಳ ಪೈಕಿ ಇದೀಗ ಅಂಗನವಾಡಿಗೆ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಬರ್ತಿದ್ದಾರೆ.

ಕೊಪ್ಪಳ: ಪದೇ ಪದೇ ಉದುರಿ ಬೀಳುತ್ತಿದೆ ಅಂಗನವಾಡಿಯ ಮೇಲ್ಛಾವಣಿ ಸಿಮೆಂಟ್, ಬಯಲಲ್ಲಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ
ಕೊಪ್ಪಳ ನಗರದ ರೈಲ್ವೆ ಸ್ಟೇಷನ್ ಏರಿಯಾದಲ್ಲಿರುವ ಅಂಗನವಾಡಿ
ಸಂಜಯ್ಯಾ ಚಿಕ್ಕಮಠ
| Updated By: ಆಯೇಷಾ ಬಾನು|

Updated on:Dec 16, 2023 | 12:55 PM

Share

ಕೊಪ್ಪಳ, ಡಿ.16: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಅಂಗನವಾಡಿ ಮಕ್ಕಳು ಬೀಡಾ ಅಂಗಡಿಯಲ್ಲಿ (Anganwadi) ಪಾಠ ಕಲಿತ್ತಿದ್ದ ದುಸ್ಥಿತಿ ಬಗ್ಗೆ ಟಿವಿ9 ವಿಸ್ತೃತ ವರದಿಯನ್ನ ಬಿತ್ತರಿಸಿತ್ತು. ಟಿವಿ9 ವರದಿ ಬಿತ್ತರ ಆಗ್ತಿದ್ದಂತೆ ಎಚ್ಚೆತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಕೂಡಲೇ ಅಧಿಕಾರಿಗಳಿಗೆ ಅಂಗನವಾಡಿ ಕೇಂದ್ರ ಬೇರೆಡೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದರು. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಕೊಪ್ಪಳದಲ್ಲಿ (Koppal) ಬೆಳಕಿಗೆ ಬಂದಿದೆ. ಕೊಪ್ಪಳ ನಗರದ ರೈಲ್ವೆ ಸ್ಟೇಷನ್ ಏರಿಯಾದಲ್ಲಿರುವ ಅಂಗನವಾಡಿ ಕಟ್ಟಡ ಬೀಳುವ ಹಂತದಲ್ಲಿದ್ದು ಜೀವ ಭಯದಲ್ಲಿ ಮಕ್ಕಳು ಪಾಠ ಕೇಳುವಂತ ಸ್ಥಿತಿ ಇದೆ.

ಕೊಪ್ಪಳ ನಗರದ ರೈಲ್ವೇ ಸ್ಟೇಷನ್ ಏರಿಯಾದಲ್ಲಿರುವ ಅಂಗನವಾಡಿ ಕಟ್ಟಡ ಬೀಳುವ ಹಂತದಲ್ಲಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆ ಮಕ್ಕಳನ್ನು ಬಯಲಲ್ಲಿ ಕೂರಿಸಿ ಪಾಠ ಹೇಳಿಕೊಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಮಕ್ಕಳು ಬಯಲಲ್ಲೇ ಆಟ-ಪಾಠ ಕೇಳುವಂತಾಗಿದೆ. ಅಂಗನವಾಡಿಯ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರಿಟ್ ಪದೇ ಪದೇ ಉದುರಿ ಬೀಳುತ್ತಿದೆ. ಕಬ್ಬಿಣದ ಸರಳುಗಳು ಹೊರ ಬಂದಿವೆ. ಹೀಗಾಗಿ ಜೀವ ಭಯದಿಂದ ಬಯಲಲ್ಲೇ ಮಕ್ಕಳಿಗೆ ಪಾಠ ಮಾಡುವಂತಾಗಿದೆ. ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಪೋಷಕರು ಭಯ ಪಡ್ತಿದ್ದಾರೆ. 28 ಮಕ್ಕಳ ಪೈಕಿ ಇದೀಗ ಅಂಗನವಾಡಿಗೆ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಬರ್ತಿದ್ದಾರೆ.

ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್: ಬೀಡಾ ಅಂಗಡಿ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ಬೇರೆಡೆಗೆ ಶಿಫ್ಟ್

ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲಾ ಕಟ್ಟಡ

ಇನ್ನು ಮತ್ತೊಂದೆಡೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶೇಷೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯೊಂದು ಶಿಥಿಲ ವ್ಯವಸ್ಥೆ ತಲುಪಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ತೀವ್ರ ಶಿಥಿಲಾವ್ಯಸ್ಥೆಗೆ ತಲುಪಿದೆ‌. ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು ಇಂದು ಅಥವಾ ನಾಳೆ ಬೀಳುವ ಆತಂಕ ಎದುರಾಗಿದೆ. ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೂ ಪಾಠ ಪ್ರವಚನ ನಡೆಯುತ್ತಿದ್ದು, ಶಾಲೆಯಲ್ಲಿ ಒಟ್ಟು 60 ಮಕ್ಕಳು ಇದ್ದಾರೆ. ಸದ್ಯ ಭಯದಿಂದ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ‌‌. ಇನ್ನೂ ಒಟ್ಟು ನಾಲ್ಕು ಕೊಠಡಿಯಲ್ಲಿ ಒಂದು ತೀವ್ರ ಹಾಗೂ ಮತ್ತೊಂದು ಕೊಠಡಿ ಸ್ವಲ್ಪ ಮಟ್ಟಿಗೆ ಹಾಳಾಗಿದೆ. ಇನ್ನುಳಿದ ಎರಡು ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ‌. ಸರ್ಕಾರ ಇತ್ತ ಗಮನ ಹರಿಸಿ ಕೊಠಡಿ ನೂತನವಾಗಿ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:54 pm, Sat, 16 December 23