ಟಿವಿ9 ಇಂಪ್ಯಾಕ್ಟ್: ಬೀಡಾ ಅಂಗಡಿ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ಬೇರೆಡೆಗೆ ಶಿಫ್ಟ್

ಟಿವಿ9 ವಿಸ್ತೃತ ವರದಿ ಬಿತ್ತರಿಸಿದ ಬೆನ್ನಲೆ ಬೀಡಾ ಅಂಗಡಿ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿಯನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿರುವ ಮೂರನೇ ಅಂಗನವಾಡಿಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಬೆನ್ನಲೆ ಖಾಸಗಿ ಕಟ್ಟಡದಲ್ಲಿ 2,000 ರೂ. ಬಾಡಿಗೆಗೆ ಅಂಗನವಾಡಿ ಕೇಂದ್ರ ಆರಂಭ ಮಾಡಲಾಗಿದೆ. 

ಟಿವಿ9 ಇಂಪ್ಯಾಕ್ಟ್: ಬೀಡಾ ಅಂಗಡಿ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ಬೇರೆಡೆಗೆ ಶಿಫ್ಟ್
ಸ್ಥಳಾಂತರಗೊಂಡ ಅಂಗನವಾಡಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Dec 13, 2023 | 8:50 PM

ಬೆಳಗಾವಿ, ಡಿಸೆಂಬರ್​​​ 13: ಬೀಡಾ ಅಂಗಡಿ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ (Anganwadi)  ಯನ್ನು ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿರುವ ಮೂರನೇ ಅಂಗನವಾಡಿಗೆ ಶಿಫ್ಟ್ ಮಾಡಲಾಗಿದೆ. ಒಂದೂವರೆ ವರ್ಷದಿಂದ ಬೀಡಾ ಅಂಗಡಿಯಲ್ಲಿ ಸಿಬ್ಬಂದಿಗಳು ಅಂಗನವಾಡಿ ನಡೆಸುತ್ತಿದ್ದರು. ಇಂದು ಬೆಳಗ್ಗೆ ಈ ಕುರಿತು ಟಿವಿ9 ವಿಸ್ತೃತ ವರದಿ ಬಿತ್ತರಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೆ ಬರ್ತಿದ್ದಂತೆ ಅಂಗನವಾಡಿ ಸ್ಥಳಾಂತರ ಮಾಡಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಶ್ವತ ಪರಿಹಾರಕ್ಕೆ ಸಿಡಿಪಿಒ ಸುನೀತಾ ಪಾಟೀಲ್‌ಗೆ ಸೂಚನೆ ನೀಡಿದ್ದರು. ಸದ್ಯ ಸೂಚನೆ ಬೆನ್ನಲೆ ಖಾಸಗಿ ಕಟ್ಟಡದಲ್ಲಿ 2,000 ರೂ. ಬಾಡಿಗೆಗೆ ಅಂಗನವಾಡಿ ಕೇಂದ್ರ ಆರಂಭ ಮಾಡಲಾಗಿದೆ.

ಇದನ್ನೂ ಓದಿ: ಬೀಡಾ ಅಂಗಡಿಯಲ್ಲಿ ಅಂಗನವಾಡಿ! ಇದು ಸೆಷನ್​​ನಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತುರ್ತು ಗಮನಕ್ಕೆ…

ಸೂಕ್ತ ಕಟ್ಟಡವಿಲ್ಲದೆ ಸಿಬ್ಬಂದಿಗಳು ಬೀಡಾ ಅಂಗಡಿಯಲ್ಲಿ ಅಂಗನವಾಡಿ ನಡೆಸುತ್ತಿದ್ದರು. ಮುಂದೆ ಚರಂಡಿ ನೀರು, ದೊಡ್ಡ ಗುಂಡಿ ಇದ್ದರೂ ಸಹ ಅಲ್ಲಿಯೇ ಮಕ್ಕಳಿಗೆ ಕಲಿಸಲಾಗುತ್ತಿತ್ತು. ಇದ್ದ ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಹೋದರು ಡೊಂಟ್ ಕೇರ್. ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜವಾಗಿರಲಿಲ್ಲ.

ಅನಿವಾರ್ಯವಾಗಿ ಬೀಡಾ ಅಂಗಡಿಯಲ್ಲೇ ಅಂಗನವಾಡಿ ನಡೆಸಲಾಗುತ್ತಿತ್ತು. ಜೀವ ಕೈಯಲ್ಲಿ ಹಿಡಿದು ಮಕ್ಕಳು ಅಂಗನವಾಡಿಗೆ ಹೋಗುವ ಸ್ಥಿತಿ ಎದುರಾಗಿತ್ತು.

ಅಂಗನವಾಡಿ ಶಿಫ್ಟ್ 

ಮೈಸೂರು: ಟಿವಿ9 ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ನಗರದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ಯಲ್ಲಮ್ಮ ಬಡಾವಣೆಯಲ್ಲಿದ್ದ ಅಂಗನವಾಡಿಯನ್ನು ಶಿಫ್ಟ್ ಮಾಡಿಸಿದ್ದಾರೆ. ಹೆಸರಿಗಷ್ಟೇ ಅಂಗನವಾಡಿ ರೂಪದಲ್ಲಿದ್ದ ಇಲ್ಲಿ 40 ಮಕ್ಕಳ ಸಂಖ್ಯಾಬಲ ಇತ್ತು. ಆದರೆ ಬರುತ್ತಾ ಇದ್ದಿದ್ದು ಮಾತ್ರ 25 ಮಕ್ಕಳು. ಈ ರೀತಿಯ ಶೋಚನೀಯ ಸ್ಥಿತಿಯಲ್ಲಿ ಮಕ್ಕಳು ಅಂಗನವಾಡಿಯಲ್ಲಿ ಶಿಕ್ಷಣ ಕಲಿಯುತ್ತಿದ್ದ ಬಗ್ಗೆ ಟಿವಿ9 ವರದಿ ಬಿತ್ತರಿಸಿತ್ತು‌.

ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ- ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ -ಬೀದರ್​ ಅಂಗನವಾಡಿ ಕಾರ್ಯಕರ್ತೆಯರ ಅಳಲು

ವರದಿ ಪ್ರಸಾರವಾಗುತ್ತಲೇ ಸ್ಥಳಕ್ಕೆ ದೌಡಾಯಿಸಿ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕೇಂದ್ರದಲ್ಲಿದ್ದ ಅಂಗನವಾಡಿಯನ್ನ ಪಕ್ಕದಲ್ಲೇ ಇದ್ದ ದೇವಾಲಯದ ಹಾಲ್ ಗೆ ಶಿಫ್ಟ್ ಮಾಡಿಸಿದ್ದಾರೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.