Belagavi Session: ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ವಿಧೇಯಕ ಅಂಗೀಕಾರ: ಏನಿದು?
savadatti yellamma: ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಬಳಹ ಪುರಾತನ ಮತ್ತು ಪ್ರಸಿದ್ಧ. ಹಾಗಾಗಿ ಈ ಕ್ಷೇತ್ರದ ಪಾವಿತ್ರ್ಯವನ್ನು ಕಾಡುವ ಮೂಲ ಉದ್ದೇಶದಿಂದ 2023ನೇ ಸಾಲಿನ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.
ಬೆಳಗಾವಿ, ಡಿಸೆಂಬರ್ 13: 2023ನೇ ಸಾಲಿನ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ (yellamma) ಪ್ರವಾಸೋದ್ಯಮ ಅಭಿವೃದ್ಧಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಸವದತ್ತಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಬಳಹ ಪುರಾತನ ಮತ್ತು ಪ್ರಸಿದ್ಧ. ಹಾಗಾಗಿ ಈ ಕ್ಷೇತ್ರದ ಪಾವಿತ್ರ್ಯವನ್ನು ಕಾಡುವ ಮೂಲ ಉದ್ದೇಶದಿಂದ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ವಿಧೇಯಕವನ್ನು ಅಂಗೀಕರಿಸಲಾಗಿದೆ.
ಬನದ ಹುಣ್ಣಿಮೆ ಮತ್ತು ಕಾರ್ತಿಕ ಹೆಣ್ಣುಮೆಯಂದು ಈ ಕ್ಷೇತ್ರಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಹೀಗಾಗಿ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ.
ಇದನ್ನೂ ಓದಿ: ಬೆಳಗಾವಿ ಸದನದಲ್ಲೂ ಪ್ರತಿಧ್ವನಿಸಿದ ಲೋಕಸಭಾ ಭದ್ರತಾ ಲೋಪ, ಕಾಂಗ್ರೆಸ್ ಎಂಪಿ ಪಾಸ್ ಕೊಟ್ಟಿದ್ರೆ ಏನಾಗ್ತಿತ್ತು?
ಈ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಮತ್ತು ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಸಲುವಾಗಿ ಯಲ್ಲಮ್ಮ ಕ್ಷೇತ್ರದ ಪುರಾತತ್ವ ಅವಶೇಷ ಮತ್ತು ನೈಸರ್ಗಿಕ ಪರಿಸರಗಳೊಂದಿಗೆ ಪರಂಪರೆ ಸಂರಕ್ಷಿಸಲು, ಸಾಂಸ್ಕೃತಿಕ ಅಸ್ಮಿತೆ ರಕ್ಷಿಸಲು ಸರ್ಕಾರ ಮುಂದಾಗಿದೆ.
ಯಾತ್ರಾ ಕೇಂದ್ರ ಮತ್ತು ಪ್ರವಾಸಿ ಕೇಂದ್ರ ಅಭಿವೃದ್ಧಿಪಡಿಸಲು ಹಾಗೂ ಈ ಪ್ರದೇಶದ ಅನಿಯಂತ್ರಿತ ಅಭಿವೃದ್ಧಿ ಮತ್ತು ಪ್ರದೇಶದ ವಾಣಿಜ್ಯ ನಿಬಿಡತೆಯನ್ನು ತಡೆಗಟ್ಟು ನಿಟ್ಟಿನಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚಿಸುವುದು ಅಗತ್ಯ ಎಂದು ಪರಿಗಣಿಸಲಾಗಿತ್ತು.
ಇದನ್ನೂ ಓದಿ: ಈ ವಾರದ ಅಂತ್ಯದಿಂದ ರೈತರ ಖಾತೆ 2 ಸಾವಿರ ರೂ. ಬೆಳೆ ಪರಿಹಾರ: ಕೃಷ್ಣ ಭೈರೇಗೌಡ
ಭಾರತ ಹುಣ್ಣಿಮೆಗೆ ಕೇವಲ ರಾಜ್ಯದ ಭಕ್ತರು ಅಷ್ಟೇ ಅಲ್ಲದೇ ಮಹಾರಾಷ್ಟ್ರದಿಂದಲೂ ಅತೀ ಹೆಚ್ಚು ಭಕ್ತರು ಯಲ್ಲಮ್ಮ ದೇವಸ್ಥಾನಕ್ಕೆ ಬಂದು ದೇವಿ ದರ್ಶನ ಪಡೆದುಕೊಳ್ಳುತ್ತಾರೆ. ಪ್ರತಿ ವರ್ಷ ಭಾರತ ಹುಣ್ಣಿಮೆ ಮತ್ತು ಬಣದ ಹುಣ್ಣಿಮೆಯಂದು ದೇವಿಯ ಜಾತ್ರೆ ನಡೆಯುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.