ಚಿಕಿತ್ಸೆಗಾಗಿ ಜಯಲಲಿತಾರನ್ನ ಏಕೆ ವಿದೇಶಕ್ಕೆ ಕರೆದೊಯ್ದಿಲ್ಲ ಗೊತ್ತಾ? ಕೊನೆಗೂ ರಹಸ್ಯ ಬಿಚ್ಚಿಟ್ಟ ಶಶಿಕಲಾ

| Updated By: ವಿವೇಕ ಬಿರಾದಾರ

Updated on: Dec 23, 2022 | 10:59 PM

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಆರೋಗ್ಯ ಸ್ಥಿತಿ ಗಂಭೀರವಾದಾಗ ಬಳಲುತ್ತಿದ್ದಾಗ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದರು ಎಂದು ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ ಹೇಳಿದ್ದಾರೆ.

ಚಿಕಿತ್ಸೆಗಾಗಿ ಜಯಲಲಿತಾರನ್ನ ಏಕೆ ವಿದೇಶಕ್ಕೆ ಕರೆದೊಯ್ದಿಲ್ಲ ಗೊತ್ತಾ? ಕೊನೆಗೂ ರಹಸ್ಯ ಬಿಚ್ಚಿಟ್ಟ ಶಶಿಕಲಾ
ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ
Follow us on

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ (Jayalalithaa) ಅವರು ಆರೋಗ್ಯ ಸ್ಥಿತಿ ಗಂಭೀರವಾದಾಗ ಬಳಲುತ್ತಿದ್ದಾಗ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದರು ಎಂದು ಎಐಎಡಿಎಂಕೆಯ (AIADMK) ಉಚ್ಚಾಟಿತ ನಾಯಕಿ ಶಶಿಕಲಾ (Sasikala) ಹೇಳಿದ್ದಾರೆ. ಚೈನೈ (Chennai) ನಗರ ಸಾಕಷ್ಟು ಆಸ್ಪತ್ರೆಗಳನ್ನು ಒಳಗೊಂಡಿದ್ದು, ಎಲ್ಲ ಸೌಲಭ್ಯವುಳ್ಳ ಆಸ್ಪತ್ರೆಗಳಿವೆ ಹೀಗಾಗಿ ಚಿಕ್ಸೆಗಾಗಿ ವಿದೇಶಕ್ಕೆ ಹೋಗುವುದು ಬೇಡ. ಒಂದು ವೇಳೆ ಅವಶ್ಯಕತೆ ಇದ್ದರೇ ವೈದ್ಯರನ್ನು ಇಲ್ಲಿಗೆ ಕರೆಸೋಣ ಎಂದು ಜಯಲಲಿತಾ ಹೇಳಿದ್ದರು ಎಂದು ಶಶಿಕಲಾ ನೆನಪಿಸಿಕೊಂಡಿದ್ದಾರೆ.

ಜಯಲಲಿತಾ ಅವರು ವಿದೇಶಕ್ಕೆ ಹೋಗಲು ನಿರಾಕರಿಸಲು ಕಾರಣ ಅವರು ಗುಣಮುಖರಾಗುತ್ತಿದ್ದರು. ಆಸ್ಪತ್ರೆಯಲ್ಲಿ ಜಯಲಲಿತಾ ಅವರಿಗೆ ವೈದ್ಯರು ಮತ್ತು ನರ್ಸ್​​​ಗಳು ಬಹಳ ಚೆನ್ನಾಗಿ ಆರೈಕೆ ಮಾಡಿದ್ದರು. ಈ ಹಿನ್ನೆಲೆ ಜಯಲಲಿತಾ ಅವರು ಡಿ. 19 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಮೇಲೆ ವೈದ್ಯರಿಗೆ ಮತ್ತು ನರ್ಸ್​​​ಗಳಿಗೆ ಉಡುಗೊರೆಯನ್ನು ಕೊಡಲು ತೀರ್ಮಾನಿಸಿದ್ದರು ಎಂದು ಶಶಿಕಲಾ ತಿಳಿಸಿದರು.

ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ರಾಜಕೀಯ ಆರೋಪಗಳು ಕೇಳಿಬಂದವು. ಹೀಗಾಗಿ ಅಂದಿನ ಎಐಎಡಿಎಂಕೆ ಸರ್ಕಾರ ತನಿಖೆಗೆಂದು ನಿವೃತ್ತ ನ್ಯಾಯಮೂರ್ತಿ ಆರುಮುಗಸ್ವಾಮಿ ನೇತೃತ್ವದ ಆಯೋಗ ರಚನೆ ಮಾಡಲಾಯಿತು.

ಜಯಲಲಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾದಾಗ ಹೆಚ್ಚಿನ ಚಿಕಿತ್ಸೆಗೆಂದು ಶಶಿಕಲಾ ಅವರು ವಿದೇಶಕ್ಕೆ ಕರೆದುಕೊಂಡು ಹೋಗಲಿಲ್ಲ ಎಂದು ಜಯಲಲಿತಾ ಅವರ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತಾಗುತ್ತದೆ ಎಂದು ವರದಿಯಲ್ಲಿ ಹೇಳಿದೆ.

ಆಯೋಗ ಶಶಿಕಲಾರನ್ನು ಸೇರಿ ಮೂವರ ವಿರುದ್ಧ ಆರೋಪ ಮಾಡಿದೆ. ಡಾ. ಕೆಎಸ್​ ಶಿವಕುಮಾರ್​, ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣ, ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್​ ಈ ಮೂವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಆಯೋಗ ಹೇಳಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 pm, Fri, 23 December 22