ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿದ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ

| Updated By: ರಶ್ಮಿ ಕಲ್ಲಕಟ್ಟ

Updated on: Mar 14, 2022 | 1:46 PM

ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಅಧ್ಯಕ್ಷ ಚೌಧರಿ ಜಯಂತ್ ಸಿಂಗ್ ಅವರ ಸೂಚನೆಯಂತೆ ರಾಜ್ಯ, ಪ್ರಾದೇಶಿಕ ಮತ್ತು ಜಿಲ್ಲಾ ಘಟಕಗಳು ಮತ್ತು ಎಲ್ಲಾ ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗುತ್ತಿದೆ

ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿದ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ
ಜಯಂತ್ ಚೌಧರಿ
Follow us on

ಲಖನೌ: ಭಾರೀ ಬಹುಮತದೊಂದಿಗೆ ಬಿಜೆಪಿ ಎರಡನೇ ಅವಧಿಗೆ ಉತ್ತರಪ್ರದೇಶವನ್ನು(Uttar  Pradesh) ಗೆದ್ದ ಕೆಲವು ದಿನಗಳ ನಂತರ, ಜಯಂತ್ ಚೌಧರಿ(Jayant Chaudhary)  ಅವರ ಆರ್‌ಎಲ್‌ಡಿ(RLD) ಸೋಮವಾರ ರಾಜ್ಯದಲ್ಲಿ ಪಕ್ಷದ ಘಟಕಗಳನ್ನು ವಿಸರ್ಜಿಸುವ ಕುರಿತು ದೊಡ್ಡ ಘೋಷಣೆ ಮಾಡಿದೆ. ಚೌಧರಿ ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. “ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಅಧ್ಯಕ್ಷ ಚೌಧರಿ ಜಯಂತ್ ಸಿಂಗ್ ಅವರ ಸೂಚನೆಯಂತೆ ರಾಜ್ಯ, ಪ್ರಾದೇಶಿಕ ಮತ್ತು ಜಿಲ್ಲಾ ಘಟಕಗಳು ಮತ್ತು ಎಲ್ಲಾ ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗುತ್ತಿದೆ” ಎಂದು ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಿಂದಿಯಲ್ಲಿ ಟ್ವೀಟ್ ಮಾಡಲಾಗಿದೆ. ಆದಾಗ್ಯೂ ಈ ನಿರ್ಧಾರಕ್ಕೆ ಕಾರಣ ಏನು ಎಂದು ತಿಳಿದಿಲ್ಲ. ರಾಜ್ಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಗೆದ್ದರೆ ಆರ್‌ಎಲ್‌ಡಿ ಎಂಟು ಸ್ಥಾನಗಳನ್ನು ಗೆದ್ದಿದೆ. ರಾಜ್ಯದಲ್ಲಿ ಜಯಂತ್ ಚೌಧರಿ ಅವರ ಪಕ್ಷದ ಮತಗಳಿಕೆ ಶೇ.2.89 ಆಗಿದ್ದು, ಸಮಾಜವಾದಿ ಪಕ್ಷ ಶೇ.32.1ರಷ್ಟು ಮತಗಳನ್ನು ದಾಖಲಿಸಿದೆ.
ರಾಜ್ಯ ಚುನಾವಣೆಗೆ ಮುನ್ನ ಚೌಧರಿ ಅವರು ಬಿಜೆಪಿ ಮೈತ್ರಿಕೂಟಕ್ಕೆ ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದರು. “ನಾವು ತಿರುಗುವ ‘ಚವನ್ನಿ’ (ನಾಣ್ಯ) ಅಲ್ಲ. ಬಿಜೆಪಿಯವರು ನಮ್ಮನ್ನು ಹಗುರವಾಗಿ ಪರಿಗಣಿಸಬಾರದು. ನಾವು ನಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಅವರು ಆ ಸಮಯದಲ್ಲಿ ಹೇಳಿದ್ದರು.

ಲಖಿಂಪುರ ಖೇರಿಯಲ್ಲಿ ಘಟನೆ ನಡೆದಾಗ ಅವರು ಎಲ್ಲಿದ್ದರು? ಜನರನ್ನು ಲಾಠಿಚಾರ್ಜ್ ಮಾಡಿ ಹಾಥರಸ್ ಗ ಹೋಗುವುದನ್ನು ನಿಲ್ಲಿಸಿದಾಗ ಅವರು ಎಲ್ಲಿದ್ದರು? ”ಎಂದು ಅವರು ಲಖಿಂಪುರದಲ್ಲಿ ರೈತರ ಹತ್ಯೆ ಮತ್ತು ಹಾಥರಸ್ ಅತ್ಯಾಚಾರವನ್ನು ಉಲ್ಲೇಖಿಸಿ ಕೇಳಿದ್ದರು.

43 ವರ್ಷದ ಜಾಟ್ ನಾಯಕ ಈ ಹಿಂದೆ ರೈತರ ಪ್ರತಿಭಟನೆಯ ಬಗ್ಗೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ಥೂಲ ಅಂದಾಜಿನ ಪ್ರಕಾರ ಜಾಟ್‌ಗಳು ರಾಜ್ಯದ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಹೆಚ್ಚು ಇದ್ದಾರೆ ಮತ್ತು ಪಶ್ಚಿಮ ಯುಪಿ ಆರ್ ಎಲ್ ಡಿ ಪಕ್ಷದಯ ಭದ್ರಕೋಟೆ ಎಂದು ನಂಬಲಾಗಿದೆ.
ಕಳೆದ ವಾರ ಅಖಿಲೇಶ್ ಯಾದವ್ ಅವರು ಈ ಬಾರಿಯ ರಾಜ್ಯ ಚುನಾವಣಾ ಫಲಿತಾಂಶಗಳು ಬಿಜೆಪಿಯ ಸ್ಥಾನಗಳನ್ನು ಕಡಿಮೆ ಮಾಡಬಹುದು ಎಂದು ಸಾಬೀತುಪಡಿಸಿದೆ ಎಂದು ಹೇಳಿದ್ದರು. ಕಳೆದ ಬಾರಿ ಮಿತ್ರಪಕ್ಷಗಳೊಂದಿಗೆ 325 ಸ್ಥಾನಗಳನ್ನು ಗೆದ್ದಿದ್ದ ಸಮಾಜವಾದಿ ಪಕ್ಷದ ಸೀಟು ಈಗ 273ಕ್ಕೆ ಇಳಿದಿದೆ.

ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ ಸೋಲಿಗೆ ಸೋನಿಯಾರನ್ನು ದೂರಿ ಪ್ರಯೋಜನವಿಲ್ಲ: ಮಲ್ಲಿಕಾರ್ಜುನ ಖರ್ಗೆ

Published On - 1:28 pm, Mon, 14 March 22