ಫಾರ್ಮುಲಾ-2 ರೇಸ್ ಇತಿಹಾಸದಲ್ಲೇ ದಾಖಲೆ ಬರೆದ ಭಾರತೀಯ.. ಇದು 22ರ ಪೋರನ ಯಶೋಗಾಥೆ

|

Updated on: Dec 07, 2020 | 10:58 AM

ಇದೇ ಮೊದಲ ಬಾರಿಗೆ ಫಾರ್ಮುಲಾ ರೇಸ್​-2ನಲ್ಲಿ ಭಾರತೀಯನೊಬ್ಬ ಇತಿಹಾಸ ಸೃಷ್ಟಿಸಿದ್ದಾನೆ. 22 ವರ್ಷದ ಜೆಹನ್ ದಾರುವಾಲಾ ಎಫ್​-2 ರೇಸ್​ ಗೆದ್ದು ಚೊಚ್ಚಲ ಭಾರತೀಯನಾಗಿ ದಾಖಲೆ ನಿರ್ಮಿಸಿದ್ದಾನೆ.

ಫಾರ್ಮುಲಾ-2 ರೇಸ್ ಇತಿಹಾಸದಲ್ಲೇ ದಾಖಲೆ ಬರೆದ ಭಾರತೀಯ.. ಇದು 22ರ ಪೋರನ ಯಶೋಗಾಥೆ
ಜೆಹನ್ ದಾರುವಾಲಾ
Follow us on

ಇದೇ ಮೊದಲ ಬಾರಿಗೆ ಫಾರ್ಮುಲಾ ರೇಸ್​-2ನಲ್ಲಿ ಭಾರತೀಯನೊಬ್ಬ ಇತಿಹಾಸ ಸೃಷ್ಟಿಸಿದ್ದಾನೆ. 22 ವರ್ಷದ ಜೆಹನ್ ದಾರುವಾಲಾ F​-2 ರೇಸ್​ ಗೆದ್ದು ಚೊಚ್ಚಲ ಭಾರತೀಯನಾಗಿ ದಾಖಲೆ ನಿರ್ಮಿಸಿದ್ದಾನೆ. ಭಾನುವಾರ ಬಹ್ರೇನ್​ನಲ್ಲಿ ನಡೆದ ಸಖ್ಹೀರ್ ಗ್ರ್ಯಾಂಡ್ ಪ್ರಿಕ್ಸ್​ ಎಫ್​-2 ರೇಸ್​ನಲ್ಲಿ ಮೈಕ್ ಶೂಮಾಕರ್, ಡೇನಿಯಲ್‌ರನ್ನೇ ಹಿಂದಿಕ್ಕಿ ದಾರುವಾಲಾ ಪ್ರಶಸ್ತಿ ಗೆದ್ದಿದ್ದಾನೆ.

22 ವರ್ಷದ ಜೆಹನ್ ದಾರುವಾಲಾನ ಈ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೂ ತನ್ನ ಗೆಲುವಿನ ಬಗ್ಗೆ ಜೆಹನ್ ದಾರುವಾಲಾ ಟ್ವೀಟ್ ಮಾಡಿದ್ದಾರೆ. ಎಫ್​-2 ರೇಸ್ ಮುಗಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ.

ಇದು ನಿಜಕ್ಕೂ ಹೆಮ್ಮೆಯ ವಿಚಾರ. ನನ್ನ ಟೀಂನ ಎಲ್ಲರಿಗೂ ದೊಡ್ಡ ಧನ್ಯವಾದ. ಹಾಗೂ ರೇಸ್​ ವೇಳೆ ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ. ಮುಂದಿನ ವರ್ಷ ಮತ್ತೆ ಸಿಗೋಣಾ ಎಂದು ಬರೆದುಕೊಂಡಿದ್ದಾರೆ.

 

ಬೈಕ್ ರೇಸ್ ನೋಡ್ತಿದ್ರೆ ಮೈ ಜುಮ್ಮೆನ್ನುತ್ತೆ, ಹಾಸನದಲ್ಲಿ ಮೋಡಿ ಮಾಡಿದ ಬೊಂಬಾಟ್ ಬೈಕ್ ರೇಸ್

Published On - 10:55 am, Mon, 7 December 20