ಪದೇ ಪದೇ ಕರೆ ಮಾಡುವುದನ್ನು ನಿಲ್ಲಿಸಿ, ವೊಡಾಫೋನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೆಟ್ ಏರ್‌ವೇಸ್ ಸಿಇಒ; ಹೀಗಿದೆ ಕಾರಣ

|

Updated on: Feb 13, 2023 | 8:01 PM

ಇಷ್ಟಾದರೂ ಕರೆಗಳು ನಿಂತಿಲ್ಲ. ಇದು ‘ಸ್ವೀಕಾರಾರ್ಹವಲ್ಲ’ ಮತ್ತು ‘ಅಸಂಬದ್ಧ’ ಎಂದು ಹೇಳಿದ ಕಪೂರ್, ವೊಡಾಫೋನ್ ಕಂಪನಿಯ ಹಿರಿಯ ಮ್ಯಾನೇಜ್‌ಮೆಂಟ್‌ನಿಂದ ಯಾರಾದರೂ ಟ್ವಿಟರ್‌ನಲ್ಲಿದ್ದಾರೆಯೇ ಎಂದು ಕೇಳಿದ್ದಾರೆ.

ಪದೇ ಪದೇ ಕರೆ ಮಾಡುವುದನ್ನು ನಿಲ್ಲಿಸಿ, ವೊಡಾಫೋನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೆಟ್ ಏರ್‌ವೇಸ್ ಸಿಇಒ; ಹೀಗಿದೆ ಕಾರಣ
ಸಂಜೀವ್ ಕಪೂರ್
Follow us on

ವೊಡಾಫೋನ್‌ ಬಗ್ಗೆ ತನ್ನ ಅಸಮಾಧನ ವ್ಯಕ್ತಪಡಿಸಿದ ಜೆಟ್ ಏರ್‌ವೇಸ್ ಸಿಇಒ ಸಂಜೀವ್ ಕಪೂರ್ ( Jet Airways CEO Sanjiv Kapoor)ಭಾನುವಾರ ಟೆಲಿಕಾಂ ಆಪರೇಟರ್‌ಗೆ ‘ವಾಹಕಗಳನ್ನು ಬದಲಾಯಿಸದಂತೆ ನನಗೆ ಮನವರಿಕೆ ಮಾಡಲು’ ಪದೇ ಪದೇ ಕರೆ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.ಈ ವಿಷಯದ ಬಗ್ಗೆ ನಾನು ತನ್ನನ್ನು ಸಂಪರ್ಕಿಸುತ್ತೇನೆ ಎಂದು ಹೇಳಿದ ಗ್ರಾಹಕ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ಕಪೂರ್, ಕಂಪನಿಯು ತನಗೆ ಕರೆ ಮಾಡಬಾರದು ಎಂದಿದ್ದಾರೆ.ಡಿಯರ್ @ViCustomerCare: ಕ್ಯಾರಿಯರ್‌ಗಳನ್ನು ಬದಲಾಯಿಸಬೇಡಿ ಎಂದು ನನಗೆ ಮನವರಿಕೆ ಮಾಡಲು ದಯವಿಟ್ಟು ನನಗೆ ಪದೇ ಪದೇ ಕರೆ ಮಾಡುವುದನ್ನು ನಿಲ್ಲಿಸಿ. 9 ವರ್ಷಗಳ ನಂತರ ನಾನು ಏಕೆ ಬದಲಾಯಿಸುತ್ತಿದ್ದೇನೆ ಎಂದು ನಾನು ನಿಮಗೆ ಹೇಳಿದ್ದೇನೆ: 1. ಭಾರತದ ಕೆಲವು ಭಾಗಗಳಲ್ಲಿ ಕಳಪೆ ಕವರೇಜ್, 2. ಕೆಲವು ದೇಶಗಳಿಗೆ ಕೆಳಮಟ್ಟದ ಅಂತಾರಾಷ್ಟ್ರೀಯ ರೋಮಿಂಗ್ ಯೋಜನೆಗಳು. ಅಷ್ಟೇ. ಧನ್ಯವಾದಗಳು” ಎಂದು ಕಪೂರ್ ಟ್ವೀಟ್ ಮಾಡಿದ್ದಾರೆ.


ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವಂದನಾ ಎಂಬ ಗ್ರಾಹಕ ಪ್ರತಿನಿಧಿ, ವೊಡಾಫೋನ್ ನಿಮ್ಮ ಕಷ್ಟಗಳನ್ನು ಅರ್ಥಮಾಡಿಕೊಂಡಿದೆ. ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದಿದ್ದಾರೆ.

“ದಯವಿಟ್ಟು ನನ್ನೊಂದಿಗೆ ಸಂಪರ್ಕದಲ್ಲಿರಬೇಡಿ. ನಾನು ಹೇಳುತ್ತಿರುವುದು ಇಷ್ಟೇ. ನಿನ್ನೆಯಿಂದ ನನಗೆ ಹತ್ತಾರು ಕರೆಗಳು ಬಂದಿವೆ” ಎಂದು ಜೆಟ್ ಸಿಇಒ ಪ್ರತಿಕ್ರಿಯಿಸಿದ್ದಾರೆ.


ಇಷ್ಟಾದರೂ ಕರೆಗಳು ನಿಂತಿಲ್ಲ. ಇದು ‘ಸ್ವೀಕಾರಾರ್ಹವಲ್ಲ’ ಮತ್ತು ‘ಅಸಂಬದ್ಧ’ ಎಂದು ಹೇಳಿದ ಕಪೂರ್, ವೊಡಾಫೋನ್ ಕಂಪನಿಯ ಹಿರಿಯ ಮ್ಯಾನೇಜ್‌ಮೆಂಟ್‌ನಿಂದ ಯಾರಾದರೂ ಟ್ವಿಟರ್‌ನಲ್ಲಿದ್ದಾರೆಯೇ ಎಂದು ಕೇಳಿದ್ದಾರೆ. ಅವರ ಸಂಭಾಷಣೆಯ ಕೆಳಗಿನ ಕಾಮೆಂಟ್‌ಗಳಲ್ಲಿ ನಾನು ಕೂಡಾ ವೊಡಾಫೋನ್‌ನಿಂದ ಪೋರ್ಟ್ ಮಾಡಲು ಬಯಸಿದ್ದೆ. ನನಗೆ ಅರ್ಥವಾಗದ ಭಾಷೆಯಲ್ಲಿ ಆಪರೇಟರ್‌ನಿಂದ ಐದು ಕರೆಗಳು ಬಂದಿತ್ತು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ,

ಆದಾಗ್ಯೂ, ಇನ್ನೊಬ್ಬ ಬಳಕೆದಾರರು ಟೆಲಿಕಾಂ ದೈತ್ಯ ಅತ್ಯುತ್ತಮ ಅಂತರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದು ಅದಕ್ಕೆ ಪ್ರತಿಕ್ರಿಯಿಸಿದ ಕಪೂರ್, ಅದು ಇತ್ತು ಆದರೆ ಈಗ ಇಲ್ಲ ಎಂದಿದ್ದಾರೆ.

ವೊಡಾಫೋನ್ ಭಾರತದಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ನಂತರ ಮೂರನೇ ಅತಿ ಹೆಚ್ಚು ಚಂದಾದಾರರನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Mon, 13 February 23