ಎಂಸಿಡಿ ನಾಮನಿರ್ದೇಶಿತ ಸದಸ್ಯರು ದೆಹಲಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದ ಸುಪ್ರೀಂ; ಫೆ. 17ರಂದು ವಿಚಾರಣೆ
Delhi Mayor Election: ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ಉನ್ನತ ನ್ಯಾಯಾಲಯದ ಪೀಠ, ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ. ಸಾಂವಿಧಾನಿಕ ನಿಬಂಧನೆಯು ತುಂಬಾ ಸ್ಪಷ್ಟವಾಗಿದೆ ಎಂದು ಹೇಳಿದೆ ಎಂದಿದೆ
ದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ (MCD) ನಾಮನಿರ್ದೇಶಿತ ಸದಸ್ಯರು ದೆಹಲಿ ಮೇಯರ್ (Delhi Mayor) ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ಸೋಮವಾರ ಮೌಖಿಕವಾಗಿ ಹೇಳಿದ್ದು, ಆಮ್ ಆದ್ಮಿ ಪಕ್ಷ ನಿರಾಳವಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ಉನ್ನತ ನ್ಯಾಯಾಲಯದ ಪೀಠ, ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ. ಸಾಂವಿಧಾನಿಕ ನಿಬಂಧನೆಯು ತುಂಬಾ ಸ್ಪಷ್ಟವಾಗಿದೆ ಎಂದು ಹೇಳಿದೆ. ಫೆ. 17ರಂದು ರಂದು ಸುಪ್ರೀಂಕೋರ್ಟ್ ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲಿದ್ದು ಮೇಯರ್ ಚುನಾವಣೆಗಾಗಿ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಮತ್ತಷ್ಟು ಕಾಯಬೇಕಿದೆ. ಈ ಹಿಂದೆ ಫೆ. 16ರಂದು ಮೇಯರ್ ಚುನಾವಣೆ ನಿಗದಿಯಾಗಿತ್ತು.
ದೆಹಲಿಯ ಆಡಳಿತಾರೂಢ ಎಎಪಿ ಡಿಸೆಂಬರ್‌ನಲ್ಲಿ ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿ ನಾಗರಿಕ ಸಂಸ್ಥೆಯನ್ನು ಗೆದ್ದುಕೊಂಡಿತು. ಬಿಜೆಪಿಯ 104 ಗೆದ್ದಿದ್ದು ಎಎಪಿ 134 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿತ್ತು.ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಯ ಹಲವು ಸದಸ್ಯರ ಆಯ್ಕೆಗೆ ಚುನಾವಣೆಗಾಗಿ ಇಲ್ಲಿವರೆಗೆ ಮೂರು ಪ್ರಯತ್ನಗಳು ನಡೆದಿತ್ತು. ಜನವರಿ6, 24 ಮತ್ತು ಫೆಬ್ರವರಿ 6ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದರೂ ಬಿಜೆಪಿ- ಆಪ್ ನಡುವಿನ ಜಗಳದಿಂದ ಚುನಾವಣೆ ನಡೆಯಲಿಲ್ಲ.
ಇದನ್ನೂ ಓದಿ: ಪದೇ ಪದೇ ಕರೆ ಮಾಡುವುದನ್ನು ನಿಲ್ಲಿಸಿ, ವೊಡಾಫೋನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೆಟ್ ಏರ್‌ವೇಸ್ ಸಿಇಒ; ಹೀಗಿದೆ ಕಾರಣ
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನಾಮನಿರ್ದೇಶಿತ ಸದಸ್ಯರು ಮತದಾನದ ಹಕ್ಕುಗಳನ್ನು ಬಲವಾಗಿ ವಿರೋಧಿಸಿದ್ದಾರೆ. ನಾಮನಿರ್ದೇಶಿತ ಸದಸ್ಯರು ಅಥವಾ ಆಲ್ಡರ್ ಮೆನ್ಬಿಜೆಪಿಯನ್ನು ಬೆಂಬಲಿಸಲು ಒಲವು ತೋರುತ್ತಿದ್ದಾರೆ ಎಂದು ಎಎಪಿ ವಾದಿಸಿದೆ.
ಫೆಬ್ರವರಿ 6 ರಂದು ವಿಫಲವಾದ ಮೂರನೇ ಪ್ರಯತ್ನದ ನಂತರ, ಎಎಪಿಯ ಮೇಯರ್ ಅಭ್ಯರ್ಥಿಯು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ನ್ಯಾಯಾಲಯದ ಮೇಲ್ವಿಚಾರಣೆಯ ಚುನಾವಣೆ ಮತ್ತು ಸಮಯೋಚಿತ ಚುನಾವಣೆಯನ್ನು ಕೋರಿದರು.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯಿದೆ, 1957 ರ ಪ್ರಕಾರ, ನಾಗರಿಕ ಚುನಾವಣೆಯ ನಂತರ ಸದನದ ಮೊದಲ ಅಧಿವೇಶನದಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾಗಬೇಕು. ಡಿಸೆಂಬರ್ 4 ರಂದು ಚುನಾವಣೆ ನಡೆದು ಎರಡು ತಿಂಗಳು ಕಳೆದಿದೆ. ಬಿಜೆಪಿಯು “ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನವನ್ನು ಕತ್ತು ಹಿಸುಕುತ್ತಿದೆ” ಎಂದು ಎಎಪಿ ಆರೋಪಿಸಿದೆ. ಇತ್ತ ಬಿಜೆಪಿ ಎಎಪಿ ಚುನಾವಣೆಯನ್ನು ನಿಲ್ಲಿಸಲು ಶ್ರಮಿಸುತ್ತಿದೆ ಎಂದು ಆರೋಪಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Mon, 13 February 23