ಜಾರ್ಖಂಡ್ ಆಸ್ಪತ್ರೆಯಲ್ಲಿ ರಕ್ತ ಪಡೆದ ಐವರು ಮಕ್ಕಳಿಗೆ ಎಚ್​ಐವಿ

ಜಾರ್ಖಂಡ್​ನ ಆಸ್ಪತ್ರೆಯೊಂದರಲ್ಲಿ ರಕ್ತ ಪಡೆದ ಐವರು ಮಕ್ಕಳು ಎಚ್​ಐವಿ(HIV)ಗೆ ತುತ್ತಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್​ ಜಿಲ್ಲೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚೈಬಾಸಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡಿದ ನಂತರ ಏಳು ವರ್ಷದ ಥಲಸ್ಸೆಮಿಯಾ ರೋಗಿ ಸೇರಿದಂತೆ ಕನಿಷ್ಠ ಐದು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಜಾರ್ಖಂಡ್ ಆಸ್ಪತ್ರೆಯಲ್ಲಿ ರಕ್ತ ಪಡೆದ ಐವರು ಮಕ್ಕಳಿಗೆ ಎಚ್​ಐವಿ
ಆಸ್ಪತ್ರೆ
Image Credit source: India Today

Updated on: Oct 26, 2025 | 10:05 AM

ಜಾರ್ಖಂಡ್, ಅಕ್ಟೋಬರ್ 26: ಜಾರ್ಖಂಡ್​ನ ಆಸ್ಪತ್ರೆಯೊಂದರಲ್ಲಿ ರಕ್ತ ಪಡೆದ ಐವರು ಮಕ್ಕಳು ಎಚ್​ಐವಿ(HIV)ಗೆ ತುತ್ತಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್​ ಜಿಲ್ಲೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚೈಬಾಸಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡಿದ ನಂತರ ಏಳು ವರ್ಷದ ಥಲಸ್ಸೆಮಿಯಾ ರೋಗಿ ಸೇರಿದಂತೆ ಕನಿಷ್ಠ ಐದು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಈ ಘಟನೆಯು ರಾಜ್ಯದ ಆರೋಗ್ಯ ಇಲಾಖೆಯಾದ್ಯಂತ ಆಕ್ರೋಶ ಮತ್ತು ಭೀತಿಯನ್ನು ಹುಟ್ಟುಹಾಕಿದ್ದು, ರಾಂಚಿಯ ಉನ್ನತ ಮಟ್ಟದ ವೈದ್ಯಕೀಯ ತಂಡವು ತಕ್ಷಣದ ತನಿಖೆಗೆ ಆದೇಶಿಸಿದೆ. ಶುಕ್ರವಾರ ಥಲಸ್ಸೆಮಿಯಾ ಪೀಡಿತ ಮಗುವಿನ ಕುಟುಂಬವು ಚೈಬಾಸಾ ಸದರ್ ಆಸ್ಪತ್ರೆಯ ರಕ್ತ ನಿಧಿಯಲ್ಲಿ ಎಚ್‌ಐವಿ ಸೋಂಕಿತ ರಕ್ತವನ್ನು ಮಗುವಿಗೆ ನೀಡಲಾಗಿತ್ತು .ಮೊದಲನೆಯದಾಗಿ ಈ ಘಟನೆ ಬೆಳಕಿಗೆ ಬಂದಿತ್ತು.

ದೂರಿನ ನಂತರ, ಜಾರ್ಖಂಡ್ ಸರ್ಕಾರವು ಆರೋಗ್ಯ ಸೇವೆಗಳ ನಿರ್ದೇಶಕ ಡಾ. ದಿನೇಶ್ ಕುಮಾರ್ ನೇತೃತ್ವದಲ್ಲಿ ಐದು ಸದಸ್ಯರ ವೈದ್ಯಕೀಯ ತಂಡವನ್ನು ಆರೋಪಗಳ ತನಿಖೆಗಾಗಿ ಕಳುಹಿಸಿತು.
ಆರಂಭಿಕ ಸಂಶೋಧನೆಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿವೆ.

ಮತ್ತಷ್ಟು ಓದಿ: HIV AIDS: ಎಚ್‌ಐವಿ ಏಡ್ಸ್ ಕುರಿತು ಈಗಲೂ ತಿಳಿದುಕೊಳ್ಳಬೇಕಾದ ಅಂಶಗಳಿವು

ಶನಿವಾರ ತಂಡದ ತಪಾಸಣೆಯ ಸಮಯದಲ್ಲಿ, ಥಲಸ್ಸೆಮಿಯಾದಿಂದ ಬಳಲುತ್ತಿರುವ ಬಾಲಕನ ಜತೆ ಇನ್ನೂ ನಾಲ್ಕು ಮಕ್ಕಳು ಎಚ್‌ಐವಿ-ಪಾಸಿಟಿವ್ ಎಂದು ಕಂಡುಬಂದಿದ್ದು, ಒಟ್ಟು ಪೀಡಿತ ಅಪ್ರಾಪ್ತ ಮಕ್ಕಳ ಸಂಖ್ಯೆ ಐದಕ್ಕೆ ಏರಿದೆ. ಎಲ್ಲಾ ಮಕ್ಕಳು ಒಂದೇ ಆಸ್ಪತ್ರೆಯಲ್ಲಿ ರಕ್ತ ಪಡೆದಿದ್ದರು.

ಈ ಘಟನೆ ವ್ಯಾಪಕ ಆತಂಕವನ್ನುಂಟುಮಾಡಿದೆ. ಆರಂಭಿಕ ತನಿಖೆಯಲ್ಲಿ ಥಲಸ್ಸೆಮಿಯಾ ರೋಗಿಗೆ ಕಲುಷಿತ ರಕ್ತವನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯ ಸಮಯದಲ್ಲಿ ರಕ್ತ ಬ್ಯಾಂಕಿನಲ್ಲಿ ಕೆಲವು ವ್ಯತ್ಯಾಸಗಳು ಪತ್ತೆಯಾಗಿದ್ದು, ಅವುಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಡಾ. ದಿನೇಶ್ ಕುಮಾರ್ ತಿಳಿಸಿದ್ದಾರೆ.

ಮೊದಲ ಸೋಂಕಿತ ಮಗುವಿನ ಕುಟುಂಬವು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದು,  ನ್ಯಾಯವನ್ನು ಕೋರಿದೆ. ಸ್ಥಳೀಯ ಪ್ರತಿನಿಧಿಗಳು ಸಹ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ರಕ್ತ ಬ್ಯಾಂಕಿನ ಕಾರ್ಯನಿರ್ವಹಣೆಯಲ್ಲಿ ಹಲವಾರು ಅಕ್ರಮಗಳು ಕಂಡುಬಂದಿವೆ. ರಕ್ತದ ಮಾದರಿ ಪರೀಕ್ಷೆ, ದಾಖಲೆ ನಿರ್ವಹಣೆ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳ ಅನುಸರಣೆಯಲ್ಲಿನ ದೋಷಗಳು ಸೇರಿದಂತೆ, ಈ ಅಕ್ರಮಗಳನ್ನು ವಿವರಿಸುವ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಸಲ್ಲಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ