Farooq Abdullah Dance: ಪಂಜಾಬ್​ ಸಿಎಂ​ ಮೊಮ್ಮಗಳ ವಿವಾಹದಲ್ಲಿ ಫಾರೂಕ್​ ಅಬ್ದುಲ್ಲಾ ಸಖತ್​ ಡ್ಯಾನ್ಸ್, ವಿಡಿಯೋ ವೈರಲ್

|

Updated on: Mar 05, 2021 | 2:26 PM

Farooq Abdullah Dance | ಅಮರೀಂದರ್ ಸಿಂಗ್ ಅವರ ಮೊಮ್ಮಗಳಾದ ಸೆಹೆರೀಂದರ್​ ಕೌರ್​ ಅವರು ದೆಹಲಿ ಉದ್ಯಮಿ ಆದಿತ್ಯ ನಾರಂಗ್​ ಜೊತೆ ವಿವಾಹವಾದರು. ಕಳೆದ ಭಾನುವಾರದಂದು ಚಂಡೀಗಢದಲ್ಲಿರುವ ರಾಜಕಾರಣಿಯೊಬ್ಬರ ಫಾರ್ಮ್​ಹೌಸ್​ನಲ್ಲಿ ಈ ಮದುವೆ ಸಮಾರಂಭ ನೆರವೇರಿತು. ಈ ವೇಳೆ, ತಮ್ಮ ರಾಜಕೀಯ ಜಂಜಾಟವನ್ನು ಪಕ್ಕಕ್ಕಿಟ್ಟು ಫಾರೂಕ್​ ಅಬ್ದುಲ್ಲಾ ಮತ್ತು ಅಮರೀಂದರ್ ಸಿಂಗ್ ಅವರಿಬ್ಬರೂ ವಿಶೇಷ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.

Farooq Abdullah Dance: ಪಂಜಾಬ್​ ಸಿಎಂ​ ಮೊಮ್ಮಗಳ ವಿವಾಹದಲ್ಲಿ ಫಾರೂಕ್​ ಅಬ್ದುಲ್ಲಾ ಸಖತ್​ ಡ್ಯಾನ್ಸ್, ವಿಡಿಯೋ ವೈರಲ್
ಫಾರೂಕ್​ ಅಬ್ದುಲ್ಲಾ, ಕ್ಯಾಪ್ಟನ್​ ಅಮರೀಂದರ್ ಮೊಮ್ಮಗಳ ವಿವಾಹ ಮಹೋತ್ಸವದಲ್ಲಿ ‘ಆಜ್​ ಕಲ್​ ತೇರೆ ಮೇರೆ ಪ್ಯಾರ್​​ ಕೆ ಚರ್ಚೆ..’ ಎಂದು ಡ್ಯಾನ್ಸ್​ ಮಾಡಿದರು!
Follow us on

ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರು ಪಂಜಾಬ್​ ಹಾಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಮೊಮ್ಮಗಳ ವಿವಾಹ ಮಹೋತ್ಸವದಲ್ಲಿ ಬಾಲಿವುಡ್​ ಹಾಡಿಗೆ ಸಖತ್​ ಸ್ಟೆಪ್ಸ್​ ಹಾಕಿ ಡ್ಯಾನ್ಸ್​ ಮಾಡಿದ್ದಾರೆ. ಈ ವೇಳೆ ಮೊಮ್ಮಗಳ ಮದುವೆ ಖುಷಿಯಲ್ಲಿದ್ದ ಕ್ಯಾಪ್ಟನ್​ ಅಮರೀಂದರ್ ಸಹ ಫಾರೂಕ್​ ಅಬ್ದುಲ್ಲಾ ಜೊತೆ ಹೆಜ್ಜೆ ಹಾಕಿದ್ದಾರೆ.

ಅಮರೀಂದರ್ ಸಿಂಗ್ ಅವರ ಮೊಮ್ಮಗಳಾದ ಸೆಹೆರೀಂದರ್​ ಕೌರ್​ ಅವರು ದೆಹಲಿ ಉದ್ಯಮಿ ಆದಿತ್ಯ ನಾರಂಗ್​ ಜೊತೆ ವಿವಾಹವಾದರು. ಕಳೆದ ಭಾನುವಾರದಂದು ಚಂಡೀಗಢದಲ್ಲಿರುವ ರಾಜಕಾರಣಿಯೊಬ್ಬರ ಫಾರ್ಮ್​ಹೌಸ್​ನಲ್ಲಿ ಈ ಮದುವೆ ಸಮಾರಂಭ ನೆರವೇರಿತು. ಈ ವೇಳೆ, ತಮ್ಮ ರಾಜಕೀಯ ಜಂಜಾಟವನ್ನು ಪಕ್ಕಕ್ಕಿಟ್ಟು ಫಾರೂಕ್​ ಅಬ್ದುಲ್ಲಾ ಮತ್ತು ಅಮರೀಂದರ್ ಸಿಂಗ್ ಅವರಿಬ್ಬರೂ ವಿಶೇಷ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.

ಅರ್ಧ ಶತಮಾಣಕ್ಕೂ ಹಿಂದಿನ ಬಾಲಿವುಡ್​ನ ಬ್ರಹ್ಮಚಾರಿ ಸಿನಿಮಾದ ಸೂಪರ್​ ಡ್ಯೂಪರ್​ ಹಿಟ್​ ಸಾಂಗ್​ ‘ಆಜ್​ ಕಲ್​ ತೆರೆ ಮೇರೆ ಪ್ಯಾರ್​​ ಕೆ ಚರ್ಚೆ..’ ಹಾಡಿಗೆ 83 ವರ್ಷದ ಹಿರಿಯ ರಾಜಕಾರಣಿ, ಸಂಸದ ಫಾರೂಕ್​ ಅಬ್ದುಲ್ಲಾ ಅವರು ಚಿತ್ರದ ಹೀರೋ ಶಮ್ಮಿ ಕಪೂರ್ ಅವರನ್ನೇ ಆವಾಹನೆ ಮಾಡಿಕೊಂಡವರಂತೆ ಫಾರೂಕ್​ ಹಾಡನ್ನು ಗುನಗುತ್ತಾ ತಮ್ಮ ಕೈ-ಕಾಲು ಆಡಿಸಿದ್ದಾರೆ. ಮಧ್ಯೆ ಮಧ್ಯೆ ವಧುವಿನ ತಾತ, ರಾಜಕೀಯದಲ್ಲಿ ತಮ್ಮ ಆತ್ಮೀಯನೆನಿಸಿಕೊಂಡಿರುವ ಅಮರೀಂದರ್​ರನ್ನು ತಮ್ಮೊಟ್ಟಿಗೆ ಹೆಜ್ಜೆ ಹಾಕಲು ಪ್ರೇರೇಪಿಸುತ್ತಾರೆ. ಮದುವೆ ಆಮಂತ್ರಿತರು ಎಂಜಾಯ್​ ಮಾಡಿದ್ದಾರೆ. ಆ ಮದುವೆ ಮನೆಯಲ್ಲಿ ಫಾರೂಕ್​ ಹೀಗೆ ಹಾಡಿಗೆ ಹೆಜ್ಜೆ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್​ ಆಗಿದೆ.

ಸಾಮಾಜಿಕ ಕಾರ್ಯಕರ್ತ ನಾಸೀರ್​ ಖುಹಾಮಿ, ಮತ್ತಿತರ ನಾಯಕರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಯಸ್ಸು ಎಂಬುದು ಒಂದು ಸಂಖ್ಯೆಯಷ್ಟೇ! ಅದರಾಚೆಗೂ ಭಾವ-ಭಾವನೆಗಳು ಅಸಂಖ್ಯಾತ. ಇದು ಸಂಸದ ಫಾರೂಕ್​ ಅಬ್ದುಲ್ಲಾ ಅವರ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ ಎಂದು ಇನ್ನೂ ಅನೇಕ ಮಂದಿ ನೆಟ್ಟಿಗರು ವಿಡಿಯೋ ಹಂಚಿಕೊಂಡು, ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.