AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇಶದ ಕಂಪನಿಗಳಿಗೆ ಜಾಗತಿಕವಾಗಿ ಬೆಳೆಯಲು ಸಹಕಾರ ನೀಡಲು ಹಗಲಿರುಳು ಶ್ರಮಿಸುತ್ತಿದ್ದೇವೆ’; ಪ್ರಧಾನಿ ನರೇಂದ್ರ ಮೋದಿ

ಚಿಕ್ಕ ಗಾತ್ರದ ಸರ್ಕಾರ ಮತ್ತು ದೋಷರಹಿತ ಆಡಳಿತ ನೀಡುವತ್ತ ಕೇಂದ್ರೀಕೃತವಾಗಿದ್ದು, ಅತ್ಯುತ್ತಮ ಆಡಳಿತ ನೀಡಲು ಎಲ್ಲ ತೆರನಾದ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ಬಿತ್ತಿದರು.

‘ದೇಶದ ಕಂಪನಿಗಳಿಗೆ ಜಾಗತಿಕವಾಗಿ ಬೆಳೆಯಲು ಸಹಕಾರ ನೀಡಲು ಹಗಲಿರುಳು ಶ್ರಮಿಸುತ್ತಿದ್ದೇವೆ’; ಪ್ರಧಾನಿ ನರೇಂದ್ರ ಮೋದಿ
ಈ ಬಾರಿಯ ಬಜೆಟ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಕೇಳಿಬಂದಿದೆ: ನರೇಂದ್ರ ಮೋದಿ
guruganesh bhat
|

Updated on: Mar 05, 2021 | 1:20 PM

Share

ದೆಹಲಿ: ದೇಶೀಯ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು. ದೇಶದ ಬಜೆಟ್ ಮತ್ತು ನೀತಿ ನಿಯಮ ರೂಪಿಸುವಿಕೆ ಕೇವಲ ಸರ್ಕಾರದ ಪಾತ್ರವೊಂದೇ ಆಗಬಾರದು. ದೇಶದ ಬೆಳವಣಿಗೆ ಬಯಸುವ ಪ್ರತಿಯೊಬ್ಬ ಪ್ರಜೆಯೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸರ್ಕಾರದ ಗಮನ ಚಿಕ್ಕ ಗಾತ್ರದ ಸರ್ಕಾರ ಮತ್ತು ದೋಷರಹಿತ ಆಡಳಿತ ನೀಡುವತ್ತ ಕೇಂದ್ರೀಕೃತವಾಗಿದ್ದು, ಅತ್ಯುತ್ತಮ ಆಡಳಿತ ನೀಡಲು ಎಲ್ಲ ತೆರನಾದ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ನಡೆಸಲಿದೆ ಎಂದು ಆಶ್ವಾಸನೆ ಬಿತ್ತಿದರು. ಅವರು 2021ನೇ ಸಾಲಿನ ಬಜೆಟ್​ನ್ನು ಅನುಷ್ಠಾನಗೊಳಿಸುವಲ್ಲಿ ಉದ್ಯಮಿಗಳ ಪ್ರತಿಕ್ರಿಯೆ ಕುರಿತು ಹಮ್ಮಿಕೊಂಡಿದ್ದ ವೆಬಿನಾರ್​ನಲ್ಲಿ ಬಜೆಟ್ ಅನುಷ್ಠಾನದಲ್ಲಿ ವಿವಿಧ ವಲಯಗಳ ಪಾತ್ರದ ಕುರಿತು ಮಾತನಾಡಿದರು.

ಇತ್ತೀಚಿಗಷ್ಟೇ ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ, ‘ ಕೇಂದ್ರ ಸರ್ಕಾರದ ಪ್ರಮುಖ ಪ್ರತಿನಿಧಿಗಳಾದ ಪ್ರಧಾನಿ ನರೇಂದ್ರ ಮೊದಿ ಮತ್ತು ಗೃಹ ಸಚಿವ ಅಮಿತ್ ಶಾ, ‘ನಾವಿಬ್ಬರು ನಮಗಿಬ್ಬರು’ ಎಂಬ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದರು. ದೇಶದ ಇಬ್ಬರು ಉದ್ಯಮಪತಿಗಳನ್ನುದ್ದೇಶಿ ರಾಹುಲ್ ಗಾಂಧಿ ಮಾಡಿದ್ದ ಟೀಕೆಗೆ ನೇರವಾಗಿ ಪ್ರತಿ ಕ್ರಿಯಿಸದ ಪ್ರಧಾನಿ ನರೇಂದ್ರ ಮೋದಿ ಇಂದಿನ ವೆಬಿನಾರ್​ನಲ್ಲಿ ಎಲ್ಲಾ ಉದ್ಯಮಿಗಳನ್ನೂ ವಿಶ್ವಾಸದ ಹಾದಿಯಲ್ಲಿ ಒಯ್ದು ಜಾಗತಿಕ ಮಟ್ಟದಲ್ಲಿ ದೇಶದ ಕಂಪನಿಗಳನ್ನು ಬೆಳೆಸಲು ಸಹಕರಿಸುವುದಾಗಿ ತಿಳಿಸಿದ್ದಾರೆ.

ಕೊರೊನಾ ನಂತರ ಉತ್ಪಾದಕ ವಲಯದಲ್ಲಿನ ಅಭಿವೃದ್ಧಿ ಸಾಧಿಸಲು ನಮ್ಮ ವೇಗ ಪ್ರಮಾಣ ಹೆಚ್ಚಳವಾಗಬೇಕಿದೆ. ಆದಷ್ಟು ತ್ವರಿತವಾಗಿ ಹೆಚ್ಚು ಪ್ರಮಾಣದ ಉತ್ಪನ್ನಗಳನ್ನು ದೇಶದ ಉತ್ಪಾದನಾ ವಲಯ ತಯಾರಿಸಬೇಕಿದ್ದು, ಈ ಮೂಲಕ ಬಜೆಟ್ 2021ರಲ್ಲಿ ಹೇಳಲಾದ ಅಂಶಗಳು ಸಾಕಾರಗೊಳ್ಳಲು ಸಾಧ್ಯ ಎಂದು ಅವರು ದೇಶದ ವಿವಿಧ ಉದ್ಯಮಿಗಳು ಪಾಲ್ಗೊಂಡಿದ್ದ ವೆಬಿನಾರ್​ನಲ್ಲಿ ಆಶಯ ವ್ಯಕ್ತಪಡಿಸಿದರು. ಕಳೆದ ಒಂದು ವರ್ಷದಲ್ಲಿ ಕೊರೊನಾದಿಂದ ಉದ್ಯಮ ವಲಯ ಅನುಭವಿಸಿದ ಕಷ್ಟಗಳನ್ನು ನಾವು ನೋಡಿದ್ದೇವೆ. ಕೊರೊನಾ ಉಂಟುಮಾಡಿದ ಪರಿಸ್ಥಿತಿ ದೇಶದ ಪಾಲಿಗೆ ಬೃಹತ್ ಅವಕಾಶವೂ ಹೌದು ಎಂದು ವ್ಯಾಖ್ಯಾನಿಸಿದ ಪ್ರಧಾನಿ, ಆರ್ಥಿಕ ವಲಯದ ಎಲ್ಲ ದಿಕ್ಕುಗಳಲ್ಲೂ ಪುನಃಶ್ಚೇತನ ಕಾಣಲು ಉತ್ಪಾದನಾ ವಲಯದಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳಬೇಕಿದೆ ಎಂದು ವಿವರಿಸಿದರು.

ಪ್ರಶಸ್ತಿ ಸ್ವೀಕರಿಸಲಿದ್ದಾರೆ ಪ್ರಧಾನಿ ಇಂದು ಸಂಜೆ 7 ಗಂಟೆಗೆ ನಡೆಯಲಿರುವ ಸೆರಾ ವೀಕ್ ಗ್ಲೋಬಲ್ ಎನರ್ಜಿ ಮತ್ತು ಎನ್ವಿರಾನ್ಮೆಂಟ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮ ಹೂಸ್ಟನ್​ನಲ್ಲಿ ಜರುಗಲಿದ್ದು, ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೊದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಶಸ್ತಿ ಸ್ವೀಕಾರದ ನಂತರ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Central Vista Tunnels | ಪ್ರಧಾನಿ ಸೇರಿದಂತೆ ಗಣ್ಯರ ಸಂಚಾರಕ್ಕೆ ಹೊಸ ಸಂಸತ್​ ಭವನದ ಬಳಿ 3 ಸುರಂಗ ನಿರ್ಮಾಣ

2015ರಿಂದ 2035ರ ಮಧ್ಯೆ ಸಾಗರ ವಲಯದಲ್ಲಿ 6 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ: ನರೇಂದ್ರ ಮೋದಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!