Central Vista Tunnels | ಪ್ರಧಾನಿ ಸೇರಿದಂತೆ ಗಣ್ಯರ ಸಂಚಾರಕ್ಕೆ ಹೊಸ ಸಂಸತ್ ಭವನದ ಬಳಿ 3 ಸುರಂಗ ನಿರ್ಮಾಣ
New Parliament: ಸೌತ್ ಬ್ಲಾಕ್ ಬಳಿ ಪ್ರಧಾನ ಮಂತ್ರಿಗಳ ನೂತನ ನಿವಾಸ ನಿರ್ಮಾಣ ಮತ್ತು ಕಚೇರಿ ನಿರ್ಮಿಸಲು ಚಿಂತಿಸಲಾಗಿದೆ. ಅಂತೆಯೇ ನಾರ್ತ್ ಬ್ಲಾಕ್ ಬಳಿ ಉಪರಾಷ್ಟ್ರಪತಿಗಳ ನೂತನ ನಿವಾಸ ತಲೆ ಎತ್ತಲಿದೆ. ಹೊಸದಾಗಿ ನಿರ್ಮಿಸಲಾಗುವ ಸುರಂಗ ಮಾರ್ಗಗಳಿಂದಾಗಿ ಈ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಅನುಕೂಲವಾಗಲಿದೆ.
ದೆಹಲಿ: ದೆಹಲಿಯಲ್ಲಿ ₹862 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸಂಸತ್ ಭವನದ ಸುತ್ತ ಮೂರು ಸುರಂಗ ಮಾರ್ಗ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅತಿಗಣ್ಯ (VVIP) ವ್ಯಕ್ತಿಗಳ ಸಂಚಾರಕ್ಕೆ ಅನುಕೂಲವಾಗುವ ಸಲುವಾಗಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದ್ದು, ಈ ಮಾರ್ಗಗಳು ಪ್ರಧಾನ ಮಂತ್ರಿಗಳ ನೂತನ ನಿವಾಸ, ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಜೊತೆಗೆ ಸಂಸದರು ತಮ್ಮ ಕಚೇರಿಗೆ ತೆರಳಲು ಸಹ ಸಹಕಾರಿಯಾಗಲಿವೆ ಎಂದು ತಿಳಿದು ಬಂದಿದೆ.
ಈಗಿರುವ ಸೌತ್ ಬ್ಲಾಕ್ ಬಳಿ ಪ್ರಧಾನ ಮಂತ್ರಿಗಳ ನೂತನ ನಿವಾಸ ನಿರ್ಮಾಣ ಮಾಡಲಾಗುತ್ತಿದ್ದು, ಅವರ ಕಚೇರಿಯನ್ನೂ ಅಲ್ಲಿಯೇ ನಿರ್ಮಿಸಲು ಚಿಂತಿಸಲಾಗಿದೆ. ಅಂತೆಯೇ ನಾರ್ತ್ ಬ್ಲಾಕ್ ಬಳಿ ಉಪರಾಷ್ಟ್ರಪತಿಗಳ ನೂತನ ನಿವಾಸ ತಲೆ ಎತ್ತಲಿದೆ. ಹೊಸದಾಗಿ ನಿರ್ಮಿಸಲಾಗುವ ಸುರಂಗ ಮಾರ್ಗಗಳಿಂದಾಗಿ ಈ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಅನುಕೂಲವಾಗುವ ಜೊತೆಗೆ ಭದ್ರತೆಯ ದೃಷ್ಟಿಯಿಂದಲೂ ಸಹಾಯವಾಗಲಿದೆ.
ಇದನ್ನೂ ಓದಿ: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗಕ್ಕೆ ಪ್ರಧಾನಿ ಚಾಲನೆ