ಓಟಿಟಿ ಕಂಟೆಂಟ್ ಪ್ರಸಾರಕ್ಕೂ ಮುನ್ನ ಪರಿಶೀಲನೆ ಅಗತ್ಯ; ಸುಪ್ರೀಕೋರ್ಟ್
OTT Regulation: ಪ್ರಸ್ತುತ ಓಟಿಟಿ ವೇದಿಕೆಗಳನ್ನು ಬಳಸುವುದು ಸರ್ವಸಾಮಾನ್ಯವಾಗಿದೆ. ಎಲ್ಲರೂ ಓಟಿಟಿ ಫ್ಲಾಟ್ಫಾರ್ಮ್ಗಳನ್ನು ವೀಕ್ಷಿಸುವುದರಿಂದ ಕಂಟೆಂಟ್ ಪ್ರಸಾರಕ್ಕೂ ಮುನ್ನ ‘ಸ್ಕ್ರೀನಿಂಗ್’ ನಡೆಸಲೇಬೇಕು. ಇತ್ತೀಚಿಗೆ ಓಟಿಟಿ ವೇದಿಕೆಗಳಲ್ಲಿ ಫೋರ್ನೋಗ್ರಫಿ ಸಹ ಪ್ರಸಾರವಾಗುತ್ತಿದೆ" ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ತಿಳಿಸಿದ್ದಾರೆ.
ದೆಹಲಿ: ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವ ಮುನ್ನ ಕಂಟೆಂಟ್ ಪರಿಶೀಲನೆ ನಡೆಸಬೇಕು . ಪರಿಶೀಲನೆ ನಡೆಸದೇ ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ನಾಳೆ ಓಟಿಟಿ ಕಂಟೆಂಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ನೂತನ ಮಾರ್ಗದರ್ಶಿ ನಿಯಮಾವಳಿಗಳನ್ನು (OTT Regulation) ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
“ಪ್ರಸ್ತುತ ಇಂಟರ್ನೆಟ್ ಮತ್ತು ಓಟಿಟಿ ವೇದಿಕೆಗಳಲ್ಲಿ ಸಿನಿಮಾ ವೀಕ್ಷಣೆ ಸಾಮಾನ್ಯವಾಗಿದೆ. ಎಲ್ಲರೂ ಓಟಿಟಿ ಫ್ಲಾಟ್ಫಾರ್ಮ್ಗಳನ್ನು ವೀಕ್ಷಿಸುವುದರಿಂದ ಕಂಟೆಂಟ್ ಪ್ರಸಾರಕ್ಕೂ ಮುನ್ನ ‘ಸ್ಕ್ರೀನಿಂಗ್’ ನಡೆಸಲೇಬೇಕು. ಇತ್ತೀಚಿಗೆ ಓಟಿಟಿ ವೇದಿಕೆಗಳಲ್ಲಿ ಫೋರ್ನೋಗ್ರಫಿ ಸಹ ಪ್ರಸಾರವಾಗುತ್ತಿದೆ” ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ತಿಳಿಸಿದ್ದಾರೆ.
Supreme Court asks Centre to submit before it the regulations on Over The Top (OTT) platforms like Netflix and Amazon Prime while stressing that there should be some screening of programs shown on such platforms. pic.twitter.com/F0Cslx2gUc
— ANI (@ANI) March 4, 2021
ಅಮೆಜಾನ್ ಇಂಡಿಯಾದ ಮುಖ್ಯಸ್ಥ, ಅಪರ್ಣಾ ಪುರೋಹಿತ್ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ತಾಂಡವ್ ವೆಬ್ ಸಿರೀಸ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆಯೆಂದು ಆರೋಪಿಸಿ ಓಟಿಟಿ ವೇದಿಕೆ ಅಮೆಜಾನ್ ಪ್ರೈಮ್ನ ಭಾರತ ವಿಭಾಗದ ಮುಖ್ಯಸ್ಥ ಅಪರ್ಣಾ ಪುರೋಹಿತ್ ವಿರುದ್ಧ ದೂರು ದಾಖಲಾಗಿತ್ತು. ಅಪರ್ಣಾ ಪುರೋಹಿತ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ವೆಬ್ ಸಿರೀಸ್ ಪ್ರಸಾರ ಮಾಡಿದ ಸಂಸ್ಥೆಯ ಉದ್ಯೋಗಿಯ ಮೇಲೆ 10 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಆರೋಪಿಸಿದ್ದರು.
ತಾಂಡವ್ ವೆಬ್ ಸಿರೀಸ್ ವಿರುದ್ಧ ಬಿಜೆಪಿ ನಾಯಕರು ದೂರು ದಾಖಲಿಸಿದ್ದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಮೆಜಾನ್ ಪ್ರೈಮ್ ವಿಡಿಯೋ ವತಿಯಿಂದ ವಿವರಣೆ ಕೇಳಿತ್ತು. ಮಹಾರಾಷ್ಟ್ರ ಬಿಜೆಪಿ ನಾಯಕ ರಾಮ್ ಕದಮ್ ಅವರು ತಾಂಡವ್ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಜತೆಗೆ, ಬಿಜೆಪಿ ಸಂಸದ ಮನೋಜ್ ಕೊಟಾಕ್ ಅವರು ತಾಂಡವ್ ವೆಬ್ ಸರಣಿಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ಗೆ ಪತ್ರ ಬರೆದಿದ್ದರು.
ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ತಾಂಡವ್ ವೆಬ್ ಸಿರೀಸ್ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ ಎಂದು ಬಿಜೆಪಿ ಸಂಸದ ಮನೋಜ್ ಕೊಟಾಕ್ ಪತ್ರದಲ್ಲಿ ಉಲ್ಲೇಖಿಸಿದ್ದರು. ದೇಶದ ಹಲವು ನಾಗರಿಕರು ಈ ವೆಬ್ ಸಿರೀಸ್ ಬಗ್ಗೆ ನನ್ನಲ್ಲಿ ನಕಾರಾತ್ಮಕ ಅಭಿಪ್ರಾಯ ಹಂಚಿಕೊಂಡಿದ್ದರು.. ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಕುರಿತು ಬೇಕೆಂದೇ ಕೀಳಾಗಿ ಈ ವೆಬ್ ಸಿರೀಸ್ನಲ್ಲಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: ಓಟಿಟಿ ವೇದಿಕೆಗಳಿಗೆ ನಿಯಂತ್ರಣ ವಿಧಿಸುವ ಯೋಚನೆ ಸರ್ಕಾರಕ್ಕಿದೆ: ಕೇಂದ್ರ ಸರ್ಕಾರ
ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು
Published On - 2:05 pm, Thu, 4 March 21