ಕೊವಿಡ್ 19 ಲಸಿಕೆ ತಯಾರಿಕೆಗಾಗಿ ತೆಲಂಗಾಣ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ ಜಾನ್ಸನ್ ಆ್ಯಂಡ್​ ಜಾನ್ಸನ್​..

|

Updated on: May 19, 2021 | 4:13 PM

ಭಾರತದಲ್ಲಿ ನಮ್ಮ ಕಂಪನಿಯ ಕೊವಿಡ್​ 19 ಲಸಿಕೆಯ ಕ್ಲಿನಿಕಲ್​ ಪ್ರಯೋಗಗಳಿಗೆ ಅನುಮೋದನೆ ನೀಡುವ ಬಗ್ಗೆ ಇಲ್ಲಿನ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದೂ ಜಾನ್ಸನ್ ಆ್ಯಂಡ್​ ಜಾನ್ಸನ್​ ಕಂಪನಿ ತಿಳಿಸಿದೆ.

ಕೊವಿಡ್ 19 ಲಸಿಕೆ ತಯಾರಿಕೆಗಾಗಿ ತೆಲಂಗಾಣ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ ಜಾನ್ಸನ್ ಆ್ಯಂಡ್​ ಜಾನ್ಸನ್​..
ಕೊವಿಡ್ 19 ಲಸಿಕೆ ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ಕೊವಿಡ್​ 19 ಲಸಿಕೆ ತಯಾರಿಕೆಗಾಗಿ ಯುಎಸ್​ ಮೂಲದ ಜಾನ್ಸನ್​ ಆ್ಯಂಡ್​ ಜಾನ್ಸನ್ ಕಂಪನಿ, ತೆಲಂಗಾಣ ಮೂಲದ ಬಯಲಾಜಿಕಲ್​​​ ಇ ಲಿಮಿಟೆಡ್​​ನೊಂದಿಗೆ ಕೈಜೋಡಿಸಿದೆ. ಈ ಲಸಿಕೆಗೆ ಜಾನ್ಸೆನ್​ ಎಂದು ಹೆಸರಿಡಲಾಗಿದ್ದು, ಈಗಾಗಲೇ ಯುಎಸ್​, ಯುರೋಪ್​, ಥೈಲ್ಯಾಂಡ್​, ಸೌತ್​ ಆಫ್ರಿಕಾಗಳಲ್ಲಿ ಬಳಕೆಗೆ ಅನುಮೋದನೆಯೂ ಸಿಕ್ಕಿದೆ. ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯು, ಬಯೋಲಜಿಕಲ್ ಇ ಲಿಮಿಟೆಡ್​​ನೊಂದಿಗೆ ಸೇರಿ ಜಾನ್ಸೆನ್ ಕೊವಿಡ್​ 19 ಲಸಿಕೆ ತಯಾರಿಕೆ ಮಾಡಲಾಗಿದೆ. ಜಗತ್ತಿನಾದ್ಯಂತ ವಿವಿಧ ವ್ಯವಸ್ಥೆ, ಸಂಸ್ಥೆಗಳು ನಮ್ಮ ಕಂಪನಿಯ ಲಸಿಕೆ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಹಾಗೇ ಈ ಭಾರತದ ಬಯೋಲಜಿಕಲ್​ ಇ ಲಿಮಿಟೆಡ್​ ಕೂಡ ನಮ್ಮ ಲಸಿಕೆಯ ಜಾಗತಿಕ ಪೂರೈಕೆ ಜಾಲದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ಇದೆ ಎಂದು ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ನಮ್ಮ ಕಂಪನಿಯ ಲಸಿಕೆ ಉತ್ಪಾದನಾ ಸಮಾರ್ಥ್ಯ ಹೆಚ್ಚಿಸಲು, ಜಗತ್ತಿನಾದ್ಯಂತ ಕೊವಿಡ್​ 19 ಲಸಿಕೆಯನ್ನು ಪೂರೈಸಲು ಶ್ರಮವಹಿಸಿ ಕೆಲಸ ಮಾಡಲಾಗುತ್ತಿದೆ. ಈ ಸಾಂಕ್ರಾಮಿಕವನ್ನು ಹೋಗಲಾಡಿಸಲು ನಾವು ಸರ್ಕಾರಗಳು, ಆರೋಗ್ಯ ವ್ಯವಸ್ಥೆಗಳು, ಇನ್ನಿತರ ಕಂಪನಿಗಳೊಂದಿಗೆ ಸಹಭಾಗಿತ್ವ, ಸಹಯೋಗವನ್ನು ಹೊಂದಿದ್ದೇವೆ. ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದೂ ಜಾನ್ಸನ್​ ಆ್ಯಂಡ್ ಜಾನ್ಸನ್​ ಹೇಳಿಕೊಂಡಿದೆ.

ಇನ್ನು ಭಾರತದಲ್ಲಿ ನಮ್ಮ ಕಂಪನಿಯ ಕೊವಿಡ್​ 19 ಲಸಿಕೆಯ ಕ್ಲಿನಿಕಲ್​ ಪ್ರಯೋಗಗಳಿಗೆ ಅನುಮೋದನೆ ನೀಡುವ ಬಗ್ಗೆ ಇಲ್ಲಿನ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದೂ ಔಷಧೀಯ ಕಂಪನಿ ಮಾಹಿತಿ ನೀಡಿದೆ. ಭಾರತದಲ್ಲಿ ಸದ್ಯ ಕೊವಿಶೀಲ್ಡ್​, ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳ ಬಳಕೆಗೆ ಸರ್ಕಾರ ಅನುಮೋದನೆ ನೀಡಿದೆ. ಇನ್ನು ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಲಸಿಕೆಗೆ ಅನುಮತಿ ಸಿಕ್ಕರೆ, ದೇಶದಲ್ಲಿ ಇನ್ನೊಂದು ಲಸಿಕೆ ಬಳಕೆಗೆ ಅವಕಾಶ ಸಿಗುತ್ತದೆ.

ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಅಭ್ಯಾಸದಲ್ಲಿನ ಈ ಕೆಲವು ಬದಲಾವಣೆ ಬಹಳ ಮುಖ್ಯ

Viral: ಕೊರೊನಾ ಸೋಂಕಿತರಿಗೆ ಈ ಪುಟ್ಟ ಬಾಲಕನ ವಿಶೇಷ ಸಂದೇಶ

(Johnson and Johnson Joins Hand with Telangana based Company to Manufacture Covid 19 Vaccine)