AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೊರೊನಾ ಸೋಂಕಿತರಿಗೆ ಈ ಪುಟ್ಟ ಬಾಲಕನ ವಿಶೇಷ ಸಂದೇಶ

ಬಾಲಕ ಸಂದೇಶ ಬರೆಯುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗುತ್ತಿದ್ದು, ಬಾಲಕನ ಪ್ರಾರ್ಥನೆಗೆ ಮತ್ತು ಸೋಂಕಿತರು ಬೇಗ ಚೇತರಿಸಿಕೊಳ್ಳಲಿ ಎಂಬ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Viral: ಕೊರೊನಾ ಸೋಂಕಿತರಿಗೆ ಈ ಪುಟ್ಟ ಬಾಲಕನ ವಿಶೇಷ ಸಂದೇಶ
ಕೊರೊನಾ ಸೋಂಕಿತರಿಗೆ ಬಾಲಕನ ಸಂದೇಶ
Follow us
shruti hegde
|

Updated on:May 19, 2021 | 3:42 PM

ಕೊರೊನಾ ಸೋಂಕಿತರಿಗಾಗಿ ತನ್ನ ತಾಯಿ ಸಿದ್ಧಪಡಿಸಿದ ಊಟದ ಡಬ್ಬಿಯ ಮೇಲೆ ಬಾಲಕ ಬರೆದ ವಿಶೇಷ ಸಂದೇಶ ಇದೀಗ ನೆಟ್ಟಿಗರ ಹೃದಯ ಗೆದ್ದಿದೆ. ಬಾಲಕ ಸಂದೇಶ ಬರೆಯುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗುತ್ತಿದ್ದು, ಬಾಲಕನ ಪ್ರಾರ್ಥನೆಗೆ ಮತ್ತು ಸೋಂಕಿತರು ಬೇಗ ಚೇತರಿಸಿಕೊಳ್ಳಲಿ ಎಂಬ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪುಟ್ಟ ಬಾಲಕನಿಗೆ ಸಮಾಜದಲ್ಲಿ ಎದುರಾಗುತ್ತಿರುವ ಸಮಸ್ಯೆಯ ಕುರಿತು ಅರಿವಿದೆ. ಆತನೂ ಕೂಡಾ ಈ ಕುರಿತಂತೆ ಚಿಂತಿಸಿದ್ದಾನೆ. ಏನೂ ಅರಿಯದ ಆ ತಿಳಿ ವಯಸ್ಸಿನಲ್ಲಿ ಸೋಂಕಿನಿಂದ ಬಳಲುತ್ತಿರುವವರ ಕಷ್ಟದ ಅರಿವು ಆ ಬಾಲಕಿನಿಗೆ ಆಯಿತಲ್ಲಾ ಎಂಬುದು ಆಶ್ಚರ್ಯವೆನಿಸುತ್ತದೆ. ಆ ಬಾಲಕನ ಮನಸ್ಸಿನಿಂದ ಬಂದ ಸಂದೇಶ ಎಲ್ಲರ ಮನಮುಟ್ಟುವಂತಿದೆ.

ಹಚ್ಚಹಸಿರು ಶರ್ಟ್​ ಧರಿಸಿದ ಬಾಲಕ, ತನ್ನ ಅಮ್ಮ ಕೊರೊನಾ ಸೋಂಕಿತರಿಗಾಗಿ ತಯಾರಿಸಿದ ಊಟದ ಡಬ್ಬಿಯ ಮೇಲೆ ‘ ಖುಷ್​ ರಹೀಯೆ’ (ಖುಷಿಯಾಗಿರಿ) ಎಂಬ ಸಂದೇಶವನ್ನು ಬರೆಯುತ್ತಾನೆ. ಮೇಜಿನ ಮೇಲಿರುವ ಎಲ್ಲಾ ಡಬ್ಬಿಯ ಮೇಲೂ ಈ ಎರಡು ಪದಗಳನ್ನು ಬರೆದು ನಗುಮುಖದ ಇಮೋಜಿ ಚಿತ್ರವನ್ನು ಬಿಡಿಸುತ್ತಾನೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಆದ ಈ ಬಾಲಕನ ವಿಡಿಯೋ 12,000ಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ. ನೂರಾರು ಕಾಮೆಂಟ್ಸ್​ಗಳು ಕೂಡಾ ಬಂದಿವೆ. ಬಾಲಕನ ವಿಶೇಷ ಸಂದೇಶ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ವಾಹ್​.. ಎಂತಹ ಮುದ್ದಾದ ಬಾಲಕ, ಸುಂದರವಾದ ಕೈ ಬರಹ’ ಎಂದು ಶ್ಲಾಘಿಸಿದ್ದಾರೆ. ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದು, ‘ಸೋ ಸ್ವೀಟ್​.. ಇವನ ಮುಂದಿನ ಭವಿಷ್ಯ ಉಜ್ವಲವಾಗಲಿ’ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಈ ಪುಟ್ಟ ಬಾಲಕನ ಮಾನವೀಯತೆ ಎಲ್ಲಾ ಸುದ್ದಿ ವಾಹಿನಗಳಲ್ಲಿ ಮುಖ್ಯಾಂಶವಾಗಿದೆ.!

Published On - 3:37 pm, Wed, 19 May 21