AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆ.ಕೆ ಶೈಲಜಾ ನಿರ್ವಹಿಸಿದ್ದ ಕೇರಳದ ಆರೋಗ್ಯ ಸಚಿವರ ಸ್ಥಾನಕ್ಕೆ ಮಾಜಿ ಪತ್ರಕರ್ತೆ ವೀಣಾ ಜಾರ್ಜ್

Veena George: ಆರನ್ಮುಳಂ ವಿಧಾನಸಭಾ ಕ್ಷೇತ್ರದ ಶಾಸಕಿ, ಮಾಜಿ ಪತ್ರಕರ್ತೆ ವೀಣಾ ಜಾರ್ಜ್ ಅವರಿಗೆ ಕೇರಳದ ಆರೋಗ್ಯ ಸಚಿವೆಯ ಸ್ಥಾನ ನೀಡಲಾಗಿದೆ. ಬುಧವಾರ ನಡೆದ ಸಿಪಿಎಂ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೆ.ಕೆ ಶೈಲಜಾ ನಿರ್ವಹಿಸಿದ್ದ ಕೇರಳದ ಆರೋಗ್ಯ ಸಚಿವರ ಸ್ಥಾನಕ್ಕೆ ಮಾಜಿ ಪತ್ರಕರ್ತೆ ವೀಣಾ ಜಾರ್ಜ್
ವೀಣಾ ಜಾರ್ಜ್ (ಕೃಪೆ: ಫೇಸ್​ಬುಕ್)
Follow us
ರಶ್ಮಿ ಕಲ್ಲಕಟ್ಟ
|

Updated on:May 19, 2021 | 1:42 PM

ತಿರುವನಂತಪುರಂ: ಪಿಣರಾಯಿ ವಿಜಯನ್ ಎರಡನೇ ಬಾರಿ ಅಧಿಕಾರಕ್ಕೇರುತ್ತಿರುವ ಕೇರಳದ ನೂತನ ಸಚಿವ ಸಂಪುಟದಲ್ಲಿ ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರನ್ನು ಕೈಬಿಟ್ಟಿದ್ದಕ್ಕೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಲ್​ಡಿಎಫ್ ನೂತನ ಆರೋಗ್ಯ ಸಚಿವರ ಹೆಸರು ಘೋಷಣೆ ಮಾಡಿದೆ. ಆರನ್ಮುಳಂ ವಿಧಾನಸಭಾ ಕ್ಷೇತ್ರದ ಶಾಸಕಿ, ಮಾಜಿ ಪತ್ರಕರ್ತೆ ವೀಣಾ ಜಾರ್ಜ್ ಅವರಿಗೆ ಆರೋಗ್ಯ ಸಚಿವೆಯ ಸ್ಥಾನ ನೀಡಲಾಗಿದೆ.

ಪಕ್ಷವು ವಹಿಸಿಕೊಟ್ಟಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ನಾನು ಪ್ರಯತ್ನಿಸುತ್ತೇನೆ .ಯಾವುದೇ ಇಲಾಖೆ ಇರಲಿ ಅದು ಪಕ್ಷದ ನಿರ್ಧಾರ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಆರನ್ಮುಳ ವಿಧಾನಸಭಾ ಕ್ಷೇತ್ರದಲ್ಲಿ ವೀಣಾ ಎರಡು ಬಾರಿ ಸ್ಪರ್ಧಿಸಿ ಎರಡು ಬಾರಿಯೂ ಗೆಲುವು ಸಾಧಿಸಿದ್ದರು.

2016 ರ ಚುನಾವಣೆಯಲ್ಲಿ ಅವರು ಹತ್ತಿರದ ಪ್ರತಿಸ್ಪರ್ಧಿ ಶಿವದಾಸನ್ ನಾಯರ್ ಅವರನ್ನು 7,646 ಮತಗಳ ಅಂತರದಿಂದ ಸೋಲಿಸಿದ್ದರು. 2021ರ ಚುನಾವಣೆಯಲ್ಲಿ ಮತ್ತೆ ಶಿವದಾಸನ್ ನಾಯರ್ ವಿರುದ್ಧ ಸ್ಪರ್ಧಿಸಿದ್ದ ವೀಣಾ 19,003 ಮತಗಳ ಅಂತರದಿಂದ ಗೆದ್ದಿದ್ದರು. ಇಬ್ಬರು ಮಕ್ಕಳ ತಾಯಿಯಾದ ವೀಣಾ ಜಾರ್ಜ್ ಸಿಪಿಐ (ಎಂ) ಪತ್ತನಂತಿಟ್ಟ ಪ್ರದೇಶ ಸಮಿತಿಯ ಸದಸ್ಯರಾಗಿದ್ದಾರೆ.

ಎಂಎಸ್ಸಿ (ಭೌತಶಾಸ್ತ್ರ) ಮತ್ತು ಬಿಇಡಿ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರು 45 ವರ್ಷದ ವೀಣಾ ಜಾರ್ಜ್ ಸಿಪಿಐ (ಎಂ) ನ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ನ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.

ಅವರ ಪತಿ ಡಾ. ಜಾರ್ಜ್ ಜೋಸೆಫ್, ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ, ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವೀಣಾ ಜಾರ್ಜ್ ಜೊತೆಗೆ ಇತರ ಇಬ್ಬರು ಮಹಿಳೆಯರು ಸಹ ಹೊಸ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ.

ಸಿಪಿಐ (ಎಂ) ಸಿಪಿಐ (ಎಂ) ಕಾರ್ಯಕಾರಿ ಕಾರ್ಯದರ್ಶಿ ಎ ವಿಜಯರಾಘವನ್ ಅವರ ಪತ್ನಿ ಪ್ರೊ. ಆರ್ ಬಿಂದು ಮತ್ತು ಸಿಪಿಐ ಚಡಯಮಂಗಲಂ ಶಾಸಕಿ ಜೆ ಚಿಂಜು ರಾಣಿಯನ್ನು ಸಚಿವ ಸಂಪುಟದಲ್ಲಿರಲಿದ್ದಾರೆ.

ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟದಲ್ಲಿರು ಸಚಿವರಿವರು ಕೆ.ಎನ್. ಬಾಲಗೋಪಾಲ್ ಎರಡನೇ ಪಿಣರಾಯಿ ವಿಜಯನ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾರೆ. ಉನ್ನತ ಶಿಕ್ಷಣ ಖಾತೆ ಆರ್. ಬಿಂದು ಅವರಿಗೆ ನೀಡಲಾಗಿದೆ. ವಿದ್ಯುತ್ ಸಚಿವ ಕೆ.ಕೃಷ್ಣಂ ಕುಟ್ಟಿ ಆಗಲಿದ್ದಾರೆ.

ಪಿಣರಾಯಿ ವಿಜಯನ್ – ಸಾರ್ವಜನಿಕ ಆಡಳಿತ, ಗೃಹ ವ್ಯವಹಾರ, ವಿಜಿಲೆನ್ಸ್, ಐಟಿ ಮತ್ತು ಪರಿಸರ ಕೆ.ಎನ್. ಬಾಲಗೋಪಾಲ್- ವಿತ್ತ  ಸಚಿವ ವೀಣಾ ಜಾರ್ಜ್- ಆರೋಗ್ಯ ಪಿ. ರಾಜೀವ್- ಕೈಗಾರಿಕೆ ಕೆ.ರಾಧಾಕೃಷ್ಣನ್ – ದೇವಸ್ವಂ, ಸಂಸದೀಯ ವ್ಯವಹಾರ, ಹಿಂದುಳಿದ ಕಲ್ಯಾಣ ಆರ್. ಬಿಂದು- ಉನ್ನತ ಶಿಕ್ಷಣ ವಿ.ಶಿವಂಕುಟ್ಟಿ –  ಶಿಕ್ಷಣ, ಉದ್ಯೋಗ ಎಂ.ವಿ. ಗೋವಿಂದನ್- ಸ್ಥಳೀಯ ಸಂಸ್ಧೆ,ಅಬಕಾರಿ ಪಿ.ಎ. ಮೊಹಮ್ಮದ್ ರಿಯಾಜ್- ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ವಿ.ಎನ್. ವಾಸವನ್- ಸಹಕಾರ ಕೆ. ಕೃಷ್ಣಂಕುಟ್ಟಿ- ವಿದ್ಯುತ್ ಆಂಟನಿ ರಾಜು- ಸಾರಿಗೆ ಎ.ಕೆ. ಶಶೀಂದ್ರನ್ – ಅರಣ್ಯ ಇಲಾಖೆ ರೋಶಿ ಅಗಸ್ಟೀನ್- ಜಲಸಂಪನ್ಮೂಲ ಇಲಾಖೆ ಅಹ್ಮದ್ ದೇವರ್ ಕೋವಿಲ್- ಬಂದರು ಸಜಿ ಚೆರಿಯನ್- ಮೀನುಗಾರಿಕೆ ಮತ್ತು ಸಂಸ್ಕೃತಿ ವಿ. ಅಬ್ದುರೆಹಿಮಾನ್ – ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಲಸಿಗ ವ್ಯವಹಾರಗಳು ಜೆ.ಚಿಂಜುರಾಣಿ – ಡೈರಿ ಇಲಾಖೆ, ಪಶುಸಂಗೋಪನೆ ಕೆ.ರಾಜನ್ – ರೆವೆನ್ಯೂ ಪಿ.ಪ್ರಸಾದ್- ಕೃಷಿ ಜಿ.ಆರ್.ಅನಿಲ್ – ಸಿವಿಲ್ ಸಪ್ಲೈ

ಇದನ್ನೂ ಓದಿ: Explainer: ಕೇರಳದ ಸಚಿವ ಸಂಪುಟದಲ್ಲಿ ಶೈಲಜಾ ಟೀಚರ್​ಗೆ ಸಚಿವ ಸ್ಥಾನ ಇಲ್ಲ ಯಾಕೆ?

Published On - 1:15 pm, Wed, 19 May 21

ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ