Explainer: ಕೇರಳದ ಸಚಿವ ಸಂಪುಟದಲ್ಲಿ ಶೈಲಜಾ ಟೀಚರ್​ಗೆ ಸಚಿವ ಸ್ಥಾನ ಇಲ್ಲ ಯಾಕೆ?

K K Shailaja: ಈ ನಿರ್ಧಾರವು ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ವಿಜಯನ್ ಅವರ ಪ್ರಾಬಲ್ಯ ಮತ್ತು ಪ್ರಶ್ನಾತೀತ ಪ್ರಭಾವವನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಸತತ ಎರಡು ಅವಧಿಗಳನ್ನು ಪೂರೈಸಿದ ಯಾವುದೇ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರಲು ವಿಜಯನ್ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದ್ದರು

Explainer: ಕೇರಳದ ಸಚಿವ ಸಂಪುಟದಲ್ಲಿ ಶೈಲಜಾ ಟೀಚರ್​ಗೆ ಸಚಿವ ಸ್ಥಾನ ಇಲ್ಲ ಯಾಕೆ?
ಕೆ.ಕೆ,.ಶೈಲಜಾ (ಕೃಪೆ: ಫೇಸ್​ಬುಕ್)
Follow us
ರಶ್ಮಿ ಕಲ್ಲಕಟ್ಟ
|

Updated on:May 18, 2021 | 5:30 PM

ತಿರುವನಂತಪುರಂ: ಪಿಣರಾಯಿ ವಿಜಯನ್ ಮತ್ತೊಮ್ಮೆ ಕೇರಳದ ಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇರಳದ ಸಚಿವ ಸಂಪುಟದಲ್ಲಿ ಹೊಸಬರಿಗೆ ಮಣೆ ಹಾಕಿದ್ದು ಈ ಹಿಂದೆ ಕೇರಳದ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರಿಗೂ ಈ ಬಾರಿ ಸ್ಥಾನ ನೀಡಿಲ್ಲ. 2021 ವಿಧಾನಸಭಾ ಚುನಾವಣೆಯಲ್ಲಿ ಕಣ್ಣೂರು ಜಿಲ್ಲೆಯ ಮಟ್ಟನ್ನೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೈಲಜಾ 60,000 ಮತಗಳ ಅಂತರದಿಂದ ಗೆದ್ದಿದ್ದರು.

ಶೈಲಜಾ ಅವರನ್ನು ಕೈಬಿಟ್ಟಿದ್ದೇಕೆ? ಶೈಲಜಾ ಅವರನ್ನು ಸಚಿವ ಸಂಪುಟದಿಂದ ಹೊರಗಿರಿಸಿದ್ದು ಸದ್ಯ ಭಾರೀ ಚರ್ಚೆಯನ್ನುಂಟುಮಾಡಿದೆ. ಕೇರಳದಲ್ಲಿ ಎಲ್‌ಡಿಎಫ್ ಗಮನಾರ್ಹ ಸಾಧನೆ ಮಾಡಿದ ಕ್ಷೇತ್ರವಾಗಿತ್ತು ಆರೋಗ್ಯ ವಲಯ. ನಿಫಾ ವೈರಸ್​ನ್ನು ನಿಭಾಯಿಸಿದ ನಂತರ ಕೊವಿಡ್ ಸಾಂಕ್ರಾಮಿಕವನ್ನು ಶೈಲಜಾ ನಿಭಾಯಿಸಿದ ರೀತಿಗೆ ಶ್ಲಾಘನೆ ವ್ಯಕ್ತವಾಗಿತ್ತು. ಆರೋಗ್ಯ ವಲಯದ ಬಿಕ್ಕಟ್ಟಿನ ದಿನಗಳಲ್ಲಿ ಶೈಲಜಾ ಅವರ ನಾಯಕತ್ವವನ್ನು ಪ್ರಶಂಸಿಸಲಾಯಿತು. ಅಲ್ಲದೆ, ಆರೋಗ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ, ರಾಜ್ಯವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಯಿತು. ತಳಮಟ್ಟದಲ್ಲಿನ ಸುಧಾರಣೆಗಳಿಂದಾಗಿಯೇ ಈಗ ಕೇರಳವು ಕೊವಿಡ್ -19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡಿದೆ. ಒಂದು ಹೊತ್ತಲ್ಲಿ ಪಕ್ಷದ ವಲಯಗಳು ಶೈಲಜಾ ಟೀಚರ್​ನ್ನು ಪಿಣರಾಯಿ ವಿಜಯನ್ ಅವರ ಉತ್ತರಾಧಿಕಾರಿಯಾಗಿ ಬಿಂಬಿಸಿದ್ದವು.

ನೂತನ ಸಚಿವ ಸಂಪುಟದ ಅನಧಿಕೃತ ಚರ್ಚೆಗಳಲ್ಲಿ ಶೈಲಜಾ ಅವರ ಹೆಚ್ಚು ಮೆಚ್ಚುಗೆ ಪಡೆದ ನಾಯಕತ್ವವನ್ನು ಪರಿಗಣಿಸಿ ಸಿಪಿಐ (ಎಂ) ಎಂದಿಗೂ ಹೊರಗುಳಿಯುವ ಬಗ್ಗೆ ಯಾವುದೇ ಸುಳಿವನ್ನು ನೀಡಿಲ್ಲ. ಸಾಂಕ್ರಾಮಿಕ ದಿನಗಳಲ್ಲಿ ರಾಕ್​ಸ್ಟಾರ್ ಎಂದು ಕರೆಯಲ್ಪಟ್ಟ ಶೈಲಜಾ ಅವರು ಆರೋಗ್ಯ ಸಚಿವರಾಗಿ ಮುಂದುವರಿಯುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

ಯಾವುದೇ ಸಚಿವರಿಗೆ ಎರಡನೇ ಅವಕಾಶ ನೀಡಿಲ್ಲ ಹಿಂದಿನ ಎಲ್​ಡಿಎಫ್ ಸರ್ಕಾರದಲ್ಲಿದ್ದ ಯಾವುದೇ ಸಚಿವರಿಗೆ ಎರಡನೇ ಅವಧಿ ನೀಡದಿರಲು ಪಕ್ಷದ ನಿರ್ಧರಿಸಿತ್ತು. ಇದರಂತೆ ಗುರುವಾರ ಅಧಿಕಾರ ಸ್ವೀಕರಿಸುವ ಪಿಣರಾಯಿ ವಿಜಯನ್ ಸರ್ಕಾರದ ಎರಡನೇ ಇನ್ನಿಂಗ್ಸ್​ನಲ್ಲಿ ಶೈಲಜಾ ಸೇರಿದಂತೆ ಹಲವರನ್ನು ಅವರನ್ನು ಹೊರಗಿಡಲಾಯಿತು. ಕ್ಯಾಪ್ಟನ್ ಸ್ಥಾನಮಾನವನ್ನು ಪಡೆದ ವಿಜಯನ್ ಮಾತ್ರ ಇದಕ್ಕೆ ಅಪವಾದ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತು ಪಡಿಸಿ ಬಾಕಿ ಉಳಿದವರೆಲ್ಲರೂ ಹೊಸಬರಾಗಿದ್ದಾರೆ. ಶೈಲಜಾ ಸೇರಿದಂತೆ ಸಿಪಿಐ (ಎಂ) ಇತರ ಸಚಿವರಾದ ಎ. ಸಿ ಮೊಯ್ದೀನ್ ಮತ್ತು ಎಂ. ಎಂ. ಮಣಿಯನ್ನೂ ಕೈಬಿಟ್ಟಿದೆ.

Pinarayi Vijayan

ಪಿಣರಾಯಿ ವಿಜಯನ್ (ಕೃಪೆ: ಫೇಸ್​ಬುಕ್)

ವಿಜಯನ್ ಅವರ ಪ್ರಾಬಲ್ಯ ಈ ನಿರ್ಧಾರವು ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ವಿಜಯನ್ ಅವರ ಪ್ರಾಬಲ್ಯ ಮತ್ತು ಪ್ರಶ್ನಾತೀತ ಪ್ರಭಾವವನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಸತತ ಎರಡು ಅವಧಿಗಳನ್ನು ಪೂರೈಸಿದ ಯಾವುದೇ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರಲು ವಿಜಯನ್ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದ್ದರು. ಇದು ಎರಡನೇ ಹಂತದ ನಾಯಕರು ಸೇರಿದಂತೆ ಹಲವಾರು ಮಂತ್ರಿಗಳನ್ನು ಚುನಾವಣಾ ಕಣದಿಂದ ಹೊರಗಿಡಲು ಕಾರಣವಾಯಿತು. ಅನೇಕ ಹಿರಿಯ ಸಿಪಿಐ (ಎಂ) ಮಂತ್ರಿಗಳು ಈ ಕ್ರಮದಿಂದಾಗಿ ಹೊರಗುಳಿದರು. ಈ ನಿರ್ಧಾರವು ಅನೇಕ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಪಕ್ಷಕ್ಕೆ ಹಿನ್ನಡೆಗೆ ಕಾರಣವಾಗಬಹುದು ಎಂದು ಪಕ್ಷದ ಕೆಲವು ನಾಯಕರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಚುನಾವಣಾ ಫಲಿತಾಂಶ ಈ ಆತಂಕವನ್ನು ದೂರ ಮಾಡಿತು.

ಈ ಐತಿಹಾಸಿಕ ಚುನಾವಣಾ ಫಲಿತಾಂಶದಲ್ಲಿ ಎಲ್ಡಿ​ಫ್ 140 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆದ್ದಿದ್ದು, ವಿಜಯನ್ ಅವರ ಕಾರ್ಯತಂತ್ರವು ಕಾರ್ಯನಿರ್ವಹಿಸಿದೆ ಎಂಬುದನ್ನು ಸಾಬೀತುಪಡಿಸಿದೆ. ಆ ಗೆಲುವು ವಿಜಯನ್ ತನ್ನ ಸತತ ಎರಡನೇ ಅವಧಿಗೆ ಹೊಸಬರವನ್ನು ತರುವ ನಿರ್ಧಾರಕ್ಕೆ ಪುಷ್ಠಿ ನೀಡಿತ್ತು.

ವ್ಯಕ್ತಿಗಿಂತ ಮೇಲು ಪಕ್ಷ ಮತ್ತು ಪಕ್ಷದ ನೀತಿ ಶೈಲಜಾ ಅವರನ್ನು ಹೊರತುಪಡಿಸುವ ಮೂಲಕ ಯಾವುದೇ ಸಚಿವರ ವೈಯಕ್ತಿಕ ಸಾಧನೆಗಳು ಮತ್ತು ವ್ಯಕ್ತಿತ್ವದ ಮೇಲೆ ಮೇಲೆ ಎಲ್‌ಡಿಎಫ್ ಮತ ಕೇಳಬಾರದು ಸಂದೇಶವನ್ನು ನೀಡಲು ಸಿಪಿಐ (ಎಂ) ಬಯಸಿದೆ. ಬದಲಾಗಿ,ಎಲ್​ಡಿಎಫ್ ಒಟ್ಟಾರೆಯಾಗಿ ಸರ್ಕಾರದ ಕಾರ್ಯಕ್ಷಮತೆಯನ್ನು ಅವಲಂಬಿಸಿದೆ ಮತ್ತು ಆದ್ದರಿಂದ ಎರಡನೇ ಅವಧಿಯ ಜನಾದೇಶವು ಎಲ್​ಡಿಎಫ್ ಪರವಾಗಿ ಇತ್ತು. ಸಿಪಿಐ (ಎಂ) ನಲ್ಲಿ ಅದರ ನೀತಿಯು ಪಕ್ಷವು ನಾಯಕರ ಜನಪ್ರಿಯತೆ ಮತ್ತು ವ್ಯಕ್ತಿಗಿಂತ ಹೆಚ್ಚಿನದಾಗಿದೆ ಎಂದು ನಿರ್ಧಾರವು ತೋರಿಸುತ್ತದೆ. ಹಿಂದಿನ ಸರ್ಕಾರದಲ್ಲಿ ಆರೋಗ್ಯ ಕ್ಷೇತ್ರದ ಸಾಧನೆಗಳಿಗಾಗಿ ವೈಯಕ್ತಿಕ ರೀತಿಯಲ್ಲಿ ಶೈಲಜಾ ಅವರಿಗೆ ಯಾವುದೇ ಮನ್ನಣೆ ನೀಡಲು ಪಕ್ಷ ಬಯಸುವುದಿಲ್ಲ.

ಸಾರ್ವಜನಿಕ ಭಾವನೆಗಳಿಗೆ ಕಡಿಮೆ ಗೌರವ ಈ ನಿರ್ಧಾರವು ಪಕ್ಷವು ಸಮಾಜದ ಭಾವನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಸಂದೇಶವಾಗಿದೆ. ಶೈಲಜಾ ಅವರು ಆರೋಗ್ಯ ಮಂತ್ರಿಯಾಗಿದ್ದಾಗ ರಾಜಕೀಯವನ್ನು ಮೀರಿ ಸಮಾಜದಲ್ಲಿ ಮನ್ನಣೆ ಗಳಿಸಿದ್ದಾರೆ. ಕೇರಳದ ಸಮಾಜಕ್ಕಾಗಿ, ಅವರು ಆರೋಗ್ಯ ಸಚಿವಾಲಯವನ್ನು ಮುನ್ನಡೆಸಲು ಅವರು ತಮ್ಮದೇ ಆದ ತೀರ್ಮಾನಗಳನ್ನು ಕೈಗೊಂಡರು. ಈ ಬಾರಿ ಶೈಲಜಾ ಅವರಿಗೆ ಮತ್ತೊಂದು ನಿರ್ಣಾಯಕ ಪದವಿ ಸಿಗಬಹುದೆಂದು ಕೆಲವರು ಭಾವಿಸಿದ್ದರು.

ವಿಜಯನ್‌ಗೆ ಸವಾಲು ಸಾಂಕ್ರಾಮಿಕ ರೋಗದಿಂದ ರಾಜ್ಯ ತತ್ತರಿಸುತ್ತಿರುವ ಹೊತ್ತಲ್ಲಿ ಪಿಣರಾಯಿ ವಿಜಯನ್ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಾರೆ. ಆರೋಗ್ಯ ಇಲಾಖೆ ಮತ್ತು ಅದರ ಕಾರ್ಯಕ್ಷಮತೆ ನಾಗರಿಕ ಸಮಾಜದಲ್ಲಿ ಪ್ರಭಾವ ಬೀರಲಿದೆ. ಹೊಸ ಆರೋಗ್ಯ ಮಂತ್ರಿಯನ್ನು ಆಯ್ಕೆ ಮಾಡುವ ಅವರ ನಿರ್ಧಾರವು ತಪ್ಪಾಗದಂತೆ ನೋಡಿಕೊಳ್ಳುವುದು ವಿಜಯನ್ ಅವರ ಜವಾಬ್ದಾರಿಯಾಗಿದೆ. ಹೊಸಬರು ಮತ್ತು ಅನುಭವಿಗಳ ತಂಡದೊಂದಿಗೆ ಸರ್ಕಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಮುನ್ನಡೆಸಬಹುದು ಎಂದು ವಿಜಯನ್ ಸಾಬೀತುಪಡಿಸಬೇಕೀದೆ. ಶೈಲಜಾ ಅವರನ್ನು ಹೊರಗಿಟ್ಟಿರುವುದು ವಿಜಯನ್‌ಗೆ ಹೊಸ ಸವಾಲನ್ನು ಒಡ್ಡಿದೆ.

ಇದನ್ನೂ ಓದಿ:  ಕೇರಳ ವಿಧಾನಸಭೆ: ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದಲ್ಲಿ ಕೆ.ಕೆ.ಶೈಲಜಾಗಿಲ್ಲ ಸಚಿವ ಸ್ಥಾನ, ಹೊಸಬರಿಗೆ ಮಣೆ

(Why Exclusion of senior leader K K Shailaja in Kerala’s second cabinet led by Pinarayi Vijayan )

Published On - 5:25 pm, Tue, 18 May 21

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್