ರಾಜೀವ ಗಾಂಧಿ ಹಂತಕನಿಂದ ಕೊವಿಡ್ ಫಂಡ್​ಗೆ 5 ಸಾವಿರ ದೇಣಿಗೆ

ಈ ಮಾಹಿತಿಯನ್ನು ರವಿಚಂದ್ರನ್ ಪರ ವಕೀಲ ಟಿ.ತಿರುಮುರುಗನ್ ಬಹಿರಂಗಪಡಿಸಿದ್ದಾರೆ. ಈ ಹಿಂದೆಯೂ ಆರ್.ಪಿ.ರವಿಚಂದ್ರನ್ ಗಾಜಾ ಚಂಡಮಾರುತದ ನಿರಾಶ್ರಿತರ ಪುನರ್ವಸತಿಗಾಗಿ 5 ಸಾವಿರ ಹಣವನ್ನು ದೇಣಿಗೆ ನೀಡಿದ್ದರು.

ರಾಜೀವ ಗಾಂಧಿ ಹಂತಕನಿಂದ ಕೊವಿಡ್ ಫಂಡ್​ಗೆ 5 ಸಾವಿರ ದೇಣಿಗೆ
ಸಾಂಕೇತಿಕ ಚಿತ್ರ
Follow us
guruganesh bhat
|

Updated on: May 18, 2021 | 4:38 PM

ಚೆನ್ನೈ: ರಾಜೀವ್ ಗಾಂಧಿ ಹತ್ಯೆಯ 7 ಆರೋಪಿಗಳಲ್ಲಿ ಓರ್ವ ಆರ್.ಪಿ.ರವಿಚಂದ್ರನ್, ಮಧುರೈಯ ಕೇಂದ್ರೀಯ ಕಾರಾಗೃಹದಲ್ಲಿದ್ದು, ಅಲ್ಲಿ ದುಡಿದ ಹಣದಲ್ಲಿ 5 ಸಾವಿರ ಹಣವನ್ನು ಆನ್​ಲೈನ್ ಮೂಲಕ ಕೊವಿಡ್ ಫಂಡ್​ಗೆ ನೀಡಿದ್ದಾರೆ. ಈ ಮಾಹಿತಿಯನ್ನು ರವಿಚಂದ್ರನ್ ಪರ ವಕೀಲ ಟಿ.ತಿರುಮುರುಗನ್ ಬಹಿರಂಗಪಡಿಸಿದ್ದಾರೆ. ಈ ಹಿಂದೆಯೂ ಆರ್.ಪಿ.ರವಿಚಂದ್ರನ್ ಗಾಜಾ ಚಂಡಮಾರುತದ ನಿರಾಶ್ರಿತರ ಪುನರ್ವಸತಿಗಾಗಿ 5 ಸಾವಿರ ಹಣವನ್ನು ದೇಣಿಗೆ ನೀಡಿದ್ದರು.

ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ ಸೋಂಕಿನ ವಿರುದ್ಧ ಹೋರಾಡಲು ದೇಶದ ಖ್ಯಾತನಾಮರೂ ಸೇರಿದಂತೆ ಹಲವರು ದೇಣಿಗೆ ನೀಡುತ್ತಿದ್ದಾರೆ. ಕಳೆದ 28 ವರ್ಷಗಳಿಂದ ರಾಜೀವ್ ಗಾಂಧಿ ಹತ್ಯೆ ಆರೋಪದಲ್ಲಿ ಬಂಧಿತರಾಗಿರುವ ಏಳು ಜನರೂ ಸೇರಿ 5 ಸಾವಿರ ದೇಣಿಗೆ ನೀಡುತ್ತಿದ್ದುದ್ದಾಗಿ ಆರ್.ಪಿ.ರವಿಚಂದ್ರನ್ ತಿಳಿಸಿದಿದ್ದಾರೆ.

ವಿಶ್ವನಾಥ್ ಆನಂದ್ ದೇಣಿಗೆ ಈಗಾಗಲೇ ಚೆಸ್ ಮಾಂತ್ರಿಕ ವಿಶ್ವನಾಥ್ ಆನಂದ್ ಸಹ ಇತ್ತೀಚಿಗೆ ಕೊವಿಡ್ ಫಂಡ್​ಗೆ ದೇಣಿಗೆ ನೀಡಿದ್ದಾರೆ. ಕೊರೊನಾ ರಿಲೀಫ್ ಫಂಡ್‌ಗಾಗಿ ಹಣ ಸಂಗ್ರಹಿಸಲು ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಇತರ ನಾಲ್ಕು ಗ್ರಾಂಡ್‌ಮಾಸ್ಟರ್‌ಗಳು ಇತರ ಚೆಸ್ ಆಟಗಾರರೊಂದಿಗೆ ಗುರುವಾರ ಆನ್‌ಲೈನ್ ಚೆಸ್ ಪಂದ್ಯಗಳನ್ನು ಆಡಿದ್ದಾರೆ. ಚೇಸ್ ಡಾಟ್ ಕಾಮ್ ಬ್ಲಿಟ್ಜ್ ಹೊಂದಿರುವವರು ಅಥವಾ 2000 ಕ್ಕಿಂತ ಕಡಿಮೆ ಫಿಡಾ ರೇಟಿಂಗ್ ಹೊಂದಿರುವ ಆಟಗಾರರು ಸುಮಾರು 11000 ರೂಪಾಯಿಗಳನ್ನು ದಾನ ಮಾಡಬಹುದಾಗಿದೆ.

ಈ ಆನ್‌ಲೈನ್ ಪಂದ್ಯದಿಂದ ಆನಂದ್ 50 ಸಾವಿರ ಡಾಲರ್‌ಗಳನ್ನು ಅಂದರೆ ಸುಮಾರು 37 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಈ ಕಾರ್ಯಕ್ರಮವನ್ನು ಚೆಸ್ ಡಾಟ್ ಕಾಮ್ ಆಯೋಜಿಸಿದೆ. ಅವರಲ್ಲದೆ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ, ಹರಿಕಾ ದ್ರೋಣವಾಲಿ, ನಿಹಾಲ್ ಸೈನಿ ಮತ್ತು ಪ್ರಜ್ಞಾ ರಮೇಶಬಾಬು ಮುಂತಾದ ಅನೇಕ ಆಟಗಾರರು ಭಾಗವಹಿಸಿದ್ದರು.

ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭಾರತೀಯ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಶುಕ್ರವಾರ ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವುದನ್ನು ನೋಡಿ ಹೃದಯ ಆಘಾತಕ್ಕೊಳಗಾಗಿದೆ ಎಂದು ಜಿ. ಸತ್ಯನ್ ಟ್ವೀಟ್ ಮಾಡಿದ್ದಾರೆ. ಜನರು ತುಂಬಾ ತೊಂದರೆಯಲ್ಲಿದ್ದಾರೆ ಮತ್ತು ಪ್ರತಿದಿನ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ. ಪರಸ್ಪರ ಸಹಾಯ ಮಾಡುವ ಸಮಯ ಇದು. ನಾನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಕೊವಿಡ್ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ; ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ತರಾಟೆ

ಕೊವಿಡ್-19 ಮಹಾಮಾರಿ ವಯಸ್ಕರಲ್ಲಿ ಖಿನ್ನತೆ, ಹತಾಶೆ, ಒಂಟಿತನದಂಥ ಮಾನಸಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿದೆ (Rajiv Gandhi Assassination convicts donated 5 thousand for covid fund)

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ