ಕೊವಿಡ್ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ; ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ತರಾಟೆ

ಬಕ್ಸಾರ್ ಸುಮಾರು 17 ಲಕ್ಷ ಜನಸಂಖ್ಯೆಯನ್ನು ಹೊಂದಿದೆ . 10 ದಿನಗಳಲ್ಲಿ ಒಂದು ಶವಾಗಾರದಲ್ಲಿ ಮಾತ್ರ 789 ಮೃತದೇಹಗಳ ಅಂತ್ಯಸಂಸ್ಕಾರ ನಡೆದಿದೆ. ಹೀಗಿರುವಾಗ ಇಡೀ ಜಿಲ್ಲೆಯ ಪರಿಸ್ಥಿತಿ ಏನು ಎಂದು ನ್ಯಾಯಾಲಯ ಪ್ರಶ್ನಿಸಿದೆ .

ಕೊವಿಡ್ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ; ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ತರಾಟೆ
ಪಾಟ್ನಾ ಹೈಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: May 18, 2021 | 1:37 PM

ಪಟನಾ: ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಗಂಗಾ ತೀರದಲ್ಲಿ ಶವಗಳ ತೇಲಿ ಬಂದ ಬೆನ್ನಲ್ಲೇ ಸರ್ಕಾರದ ಸಂಸ್ಥೆಗಳು ಪ್ರಕಟಿಸಿದ ಕೊವಿಡ್ ಸಾವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂದ ಪಾಟ್ನಾ ಹೈಕೋರ್ಟ್ ಹೇಳಿದೆ. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಎರಡು ದಿನಗಳಲ್ಲಿ ಹೊಸ ವರದಿಯನ್ನು ಸಲ್ಲಿಸುವಂತೆ ನ್ಯಾಯಾಧೀಶರು ಪ್ರಧಾನ ಆರೋಗ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಬಿಹಾರದ ಕೋವಿಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಹೈಕೋರ್ಟ್, ರಾಜ್ಯದ ಮುಖ್ಯ ಕಾರ್ಯದರ್ಶಿ ತ್ರಿಪುರಾರಿ ಶರಣ್ ಮತ್ತು ಪಾಟ್ನಾ ವಿಭಾಗೀಯ ಆಯುಕ್ತರು ಕೊವಿಡ್ ಸಾವುಗಳ ಬಗ್ಗೆ ಸಲ್ಲಿಸಿದ್ದ ಅಫಿಡವಿಟ್​ನ್ನು ಹರಿದು ಹಾಕಿದೆ. ಕಳೆದ ವಾರ ಬಕ್ಸಾರ್​ನಲ್ಲಿ 70ಕ್ಕಿಂತಲೂ ಹೆಚ್ಚು ಮೃತದೇಹಗಳು ನದಿಯಲ್ಲಿ ತೇಲಿ ಬಂದಿತ್ತು.

ಅಫಿಡವಿಟ್ ಸಲ್ಲಿಸುವ ವಿಧಾನದ ಬಗ್ಗೆ ನಾವು ಭಯಭೀತರಾಗಿದ್ದೇವೆ. ಸರ್ಕಾರದಿಂದ ಉತ್ತಮ ಪ್ರತಿಕ್ರಿಯೆ ಪಡೆಯಲು ನ್ಯಾಯಪೀಠ ಅರ್ಹವಾಗಿದೆ. ಇದನ್ನು ನಾವು ಪ್ರಶಂಸಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ನ್ಯಾಯಪೀಠ ಹೇಳಿದೆ.

ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಮಾರ್ಚ್ 1 ರಿಂದ ಬಕ್ಸಾರ್ ನಲ್ಲಿ ಕೇವಲ ಎಂಟು ಸಾವುಗಳು ಸಂಭವಿಸಿವೆ. ಆದರೆ ಮೇ 5 ಮತ್ತು ಮೇ 14 ರ ನಡುವೆ ಬಕ್ಸಾರ್‌ನ ಚಾರ್ಧಾಮ್ ಘಾಟ್‌ನಲ್ಲಿ 789 ಶವಸಂಸ್ಕಾರ ನಡೆದಿದೆ ಎಂದು ವಿಭಾಗೀಯ ಆಯುಕ್ತರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊವಿಡ್​ನಿಂದ ಎಷ್ಟು ಸಾವುಗಳು ಸಂಭವಿಸಿವೆ ಎಂದು ದಾಖಲೆಗಳು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆ ವಿವರಗಳನ್ನು ಕೇಳಿದಾಗ, ವಯಸ್ಸಿನ ಪ್ರಕಾರ ಸಾವಿನ ಇತರ ಕಾರಣಗಳನ್ನು ವಿವರಿಸಬೇಕು ಎಂದು ಅದು ಹೇಳಿದೆ.

ಬಕ್ಸಾರ್ ಸುಮಾರು 17 ಲಕ್ಷ ಜನಸಂಖ್ಯೆಯನ್ನು ಹೊಂದಿದೆ . 10 ದಿನಗಳಲ್ಲಿ ಒಂದು ಶವಾಗಾರದಲ್ಲಿ ಮಾತ್ರ 789 ಮೃತದೇಹಗಳ ಅಂತ್ಯಸಂಸ್ಕಾರ ನಡೆದಿದೆ. ಹೀಗಿರುವಾಗ ಇಡೀ ಜಿಲ್ಲೆಯ ಪರಿಸ್ಥಿತಿ ಏನು ಎಂದು ನ್ಯಾಯಾಲಯ ಪ್ರಶ್ನಿಸಿದೆ .

ಆರು ಸಾವುಗಳು ಕೊವಿಡ್‌ನಿಂದ ಮಾತ್ರ ಸಂಭವಿಸಿದೆ ಎಂದು ಮುಖ್ಯ ಕಾರ್ಯದರ್ಶಿ ಹೇಳುವುದಿಲ್ಲ. 789 ಸಾವುಗಳು ಕೊವಿಡ್ ಅಲ್ಲದವು ಎಂದು ಆಯುಕ್ತರು ಹೇಳುವುದಿಲ್ಲ. ಬಕ್ಸಾರ್‌ನ ಒಟ್ಟು ಜನಸಂಖ್ಯೆ 17 ಲಕ್ಷ, ಆದರೆ ಅಂಕಿಅಂಶಗಳು ನಗರ ಪರಿಷತ್‌ ಬಗ್ಗೆ ಮಾತ್ರ ಇದೆ. ಸತ್ತವರ ಧರ್ಮ ಅಥವಾ ವಯಸ್ಸಿನ ಗುಂಪುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೊನೆಯ ವಿಧಿಗಳನ್ನು ಸ್ಮಶಾನದಲ್ಲಿ ಮಾಡಿರಬಹುದು ಎಂದು ನ್ಯಾಯಪೀಠ ಹೇಳಿದೆ. ಸಾವಿನ ಸಂಖ್ಯೆಯ ಬಗ್ಗೆ ಬಿಹಾರ ಸರ್ಕಾರದ ಅಧಿಕೃತ ವೆಬ್‌ಸೈಟ್ ಅನ್ನು ನವೀಕರಿಸಲಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: ಪವಿತ್ರ ಗಂಗಾ ನದಿಯಲ್ಲಿ 2000 ಕೊರೊನಾ ಮೃತದೇಹಗಳು.?

ಗಂಗಾನದಿಯಲ್ಲಿ ಸಾಲುಸಾಲಾಗಿ ತೇಲಿ ಬರುತ್ತಿರುವ ಶವಗಳು; 2 ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದ ಕೇಂದ್ರ ಸರ್ಕಾರ