ದೆಹಲಿ: ಕೆಲವು ಪೂರ್ವ ರಾಜ್ಯಗಳಲ್ಲಿ ಕೊವಿಡ್ ರೋಗಿಗಳಿಗಾಗಿ ಮತ್ತು ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ ಮತ್ತು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಂಚನೆ ಮತ್ತು ಹಣದ ಅವ್ಯವಹಾರ ಸೇರಿದಂತೆ ಹಲವು ಆರೋಪಗಳಲ್ಲಿ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪತ್ರಕರ್ತೆ ರಾಣಾ ಅಯ್ಯೂಬ್ ಮೇಲ ವಿಶ್ವಾಸ ಉಲ್ಲಂಘನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಮೋಸ ಮಾಡಿದ ಆರೋಪವೂ ಇದೆ. ಈ ವಾರದ ಆರಂಭದಲ್ಲಿ ಅಂದರೆ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ.
ಪ್ರಕರಣವನ್ನು ತನಿಖೆ ಮಾಡಿದ ನಂತರ ಮತ್ತು ಆಕೆಯ ವಿರುದ್ಧ ಸಾಕ್ಷ್ಯವನ್ನು ಕಂಡುಕೊಂಡ ನಂತರವೇ ಪೊಲೀಸರು ಪತ್ರಕರ್ತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.
72 ವರ್ಷದ ಬುಲಂದ್‌ಶಹರ್ ನಿವಾಸಿಯೊಬ್ಬರು ಜನರ ಗುಂಪೊಂದು ಅವರನ್ನು ಅಪಹರಿಸಿದ ನಂತರ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವಂತೆ ಹೇಳಿತು ಮತ್ತು ಹಲ್ಲೆ ನಡೆಸಿ ಬಲವಂತವಾಗಿ ಗಡ್ಡವನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿದ ನಕಲಿ ವಿಡಿಯೊ ಪ್ರಸಾರದ ಪ್ರಕರಣದಲ್ಲಿ ಕೂಡಾ ರಾಣಾ ಹೆಸರು ಕೂಡ ಇದೆ.
ಆದಾಗ್ಯೂ, ಗಾಜಿಯಾಬಾದ್ ಪೋಲೀಸರು ನಂತರ ವಯಸ್ಸಾದ ಮುಸ್ಲಿಂ ವ್ಯಕ್ತಿ ಮಾಡಿದ ಕೋಮು ಆರೋಪಗಳು ಸುಳ್ಳೆಂದು ಕಂಡುಕೊಂಡಿದ್ದು. ರಾಜಕೀಯ ಕಾರ್ಯಕರ್ತರ ಒತ್ತಾಯದಿಂದ ಆ ವ್ಯಕ್ತಿ ಹೀಗೆ ಆರೋಪಿಸಿದ್ದರು ಎಂದಿದ್ದಾರೆ.
(Journalist Rana Ayyub booked by the Ghaziabad police fo ‘misappropriating’ funds for Covid patients flood victims)