ದುರ್ಗಮ ಪ್ರದೇಶದ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸಾಗಿಸಲು ಡ್ರೋನ್​ ಬಳಕೆ; ತೆಲಂಗಾಣ ಸರ್ಕಾರದ ವಿನೂತನ ಯೋಜನೆ

TV9 Digital Desk

| Edited By: Lakshmi Hegde

Updated on: Sep 09, 2021 | 6:33 PM

ಲಸಿಕೆ ಸಾಗಣೆಗಾಗಿ ಡ್ರೋನ್​ ಕಾರ್ಯಾಚರಣೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಂತಿಮ ಹಂತದ ಅನುಮೋದನೆಯನ್ನೂ ನೀಡಿದೆ.

ದುರ್ಗಮ ಪ್ರದೇಶದ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸಾಗಿಸಲು ಡ್ರೋನ್​ ಬಳಕೆ; ತೆಲಂಗಾಣ ಸರ್ಕಾರದ ವಿನೂತನ ಯೋಜನೆ
ಡ್ರೋನ್​ ಸಾಂಕೇತಿಕ ಚಿತ್ರ

Follow us on

ಹೈದರಾಬಾದ್​: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್​ 19 ಲಸಿಕೆ(Covid 19 Vaccine)  ಸಿಗಬೇಕು. ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಹಾಗೇ, ದೇಶಕ್ಕೆ ಒಂದು ಕೋಟಿ ಡೋಸ್​ ಲಸಿಕೆ ನೀಡುವ ಬಹುದೊಡ್ಡ ಗುರಿಯನ್ನೂ ಹೊಂದಿದೆ. ಆದರೆ ಕೊವಿಡ್​ 19 ಲಸಿಕೆ ಅಭಿಯಾನ ಅಷ್ಟು ಸುಲಭದ್ದಾಗಿಲ್ಲ. ಭಾರತದ ಕೆಲವು ಮೂಲೆಗಳಲ್ಲಿ, ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಕೊರೊನಾ ಲಸಿಕೆ ಕೊಡುವುದು ಆರೋಗ್ಯ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಗಡಿಭಾಗದ, ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸಿಬ್ಬಂದಿ, ಜಿಲ್ಲಾಡಳಿತದ ಸಿಬ್ಬಂದಿ ಅಲ್ಲಿಗೇ ನಡೆದುಕೊಂಡು ಹೋಗಿ ಲಸಿಕೆ ಕೊಟ್ಟ ಉದಾಹರಣೆಗಳೂ ಬೇಕಾದಷ್ಟಿವೆ. ಹಾಗೇ, ಕೆಲವು ದೂರದ ಪ್ರದೇಶಗಳಲ್ಲಿ ಇರುವ ಆರೋಗ್ಯ ಕೇಂದ್ರಕ್ಕೇ ಲಸಿಕೆಗಳನ್ನು ಹೊತ್ತ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ. 

ಈ ಸಮಸ್ಯೆಗೆ ಪರಿಹಾರವೆಂಬಂತೆ ತೆಲಂಗಾಣ ಸರ್ಕಾರ ಒಂದು ಹೊಸ ಹೆಜ್ಜೆ ಇಟ್ಟಿದೆ. ಅದು ಮೆಡಿಸಿನ್​ ಫ್ರಂ ಸ್ಕೈ (Medicine from the Sky) ಎಂಬ ವಿನೂತನ ಯೋಜನೆ. ಅಂದರೆ ದುರ್ಗಮ ಪ್ರದೇಶಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಡ್ರೋನ್​ ಮುಖಾಂತರ ಕೊವಿಡ್​ 19 ಲಸಿಕೆಗಳನ್ನು ಸಾಗಿಸುವುದು. ಇದರ ಪ್ರಾಯೋಗಿಕ ಹಾರಾಟ ಶನಿವಾರ (ಸೆಪ್ಟೆಂಬರ್​ 11)ದಿಂದ ಪ್ರಾರಂಭವಾಗಲಿದೆ. ಪ್ರಾಯೋಗಿಕ ಸಾಗಣೆಯಲ್ಲಿ ಕೊವಿಡ್​ 19 ಲಸಿಕೆಯನ್ನು ಬಳಸಿಕೊಳ್ಳಲಾಗುವುದಿಲ್ಲ. ಯೋಜನೆಯ ಪ್ರಯೋಗ ಮುಗಿದ ಬಳಿಕ ಡ್ರೋನ್​ ಮೂಲಕ, ಆಸ್ಪತ್ರೆಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೊವಿಡ್​ 19 ಲಸಿಕೆಯನ್ನು ಸಾಗಿಸುವ ಕಾರ್ಯ ಶುರುವಾಗಲಿದೆ.

ಅಂದಹಾಗೆ ಡ್ರೋನ್​ ಕಾರ್ಯಾಚರಣೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಂತಿಮ ಹಂತದ ಅನುಮೋದನೆಯನ್ನೂ ನೀಡಿದೆ. ಈ ಯೋಜನೆ ಬಗ್ಗೆ ಟ್ವೀಟ್ ಮಾಡಿರುವ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತುಂಬ ಶ್ಲಾಘಿಸಿದ್ದಾರೆ. ಡ್ರೋನ್​ ಹಾರಾಟಕ್ಕೆ ಸಂಬಂಧಪಟ್ಟಂತೆ 2021ರಲ್ಲಿ ನಿಯಮಗಳನ್ನು ಉದಾರೀಕರಿಸಲಾಗಿದ್ದು, ಇದರಿಂದ ಹೊಸಹೊಸ ಕ್ರಮಗಳಿಗೆ ಬಾಗಿಲು ತೆರೆದಂತಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸಹಕಾರ ಸಂಘದಲ್ಲಿ ಅವ್ಯವಹಾರ: 4 ಕೋಟಿಗೂ ಹೆಚ್ಚು ವಂಚನೆ ಆರೋಪ

Viral Video: ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗಿದ್ದ ವೃದ್ಧರನ್ನು ಕಾಪಾಡಿದ ಯುವಕರು; ಶಾಕಿಂಗ್ ವಿಡಿಯೋ ಇಲ್ಲಿದೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada