ಮಸೀದಿ ನೆಲಸಮದ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಓವೈಸಿ; ಉತ್ತರ ಪ್ರದೇಶ ಸಿಎಂ ವಿರುದ್ಧ ಕಿಡಿ

TV9 Digital Desk

| Edited By: Lakshmi Hegde

Updated on:Sep 09, 2021 | 7:14 PM

ಮೇ ತಿಂಗಳಲ್ಲಿ ಬಾರಾಬಂಕಿ ಜಿಲ್ಲೆಯಲ್ಲಿರುವ ಗರೀಬ್​ ನವಾಜ್​ ಅಲ್​ ಮರೂಫ್​ ಎಂಬ ಮಸೀದಿಯನ್ನು ಅಕ್ರಮ ಕಟ್ಟಡದ ಹೆಸರಲ್ಲಿ ನೆಲಸಮ ಮಾಡಲಾಗಿತ್ತು. ಆ ಬಗ್ಗೆ ಇದೀಗ ಓವೈಸಿ ಉಲ್ಲೇಖ ಮಾಡಿದ್ದಾರೆ.

ಮಸೀದಿ ನೆಲಸಮದ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಓವೈಸಿ; ಉತ್ತರ ಪ್ರದೇಶ ಸಿಎಂ ವಿರುದ್ಧ ಕಿಡಿ
ಅಸಾದುದ್ದೀನ್​ ಓವೈಸಿ
Follow us

ಬಾರಾಬಂಕಿ: ಮಸೀದಿಗೆ ಸಂಬಂಧಪಟ್ಟಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಇಂದು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು ಬಾರಾಬಂಕಿಯಲ್ಲಿ ರ್ಯಾಲಿ ನಡೆಸಿದರು. ಈ ವೇಳೆ ಮಾತನಾಡಿ, ಒಬ್ಬ ಅಧಿಕಾರಿಗೆ ಆಜಾನ್​ (ಮುಸ್ಲಿಮರ ಪ್ರಾರ್ಥನೆ)ನಿಂದ ತುಂಬ ತೊಂದರೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ಆ ಮಸೀದಿಯನ್ನೇ ಧ್ವಂಸಗೊಳಿಸಲಾಯಿತು ಎಂದು ಓವೈಸಿ ಹೇಳಿದರು.  ಹಾಗೇ, ಯೋಗಿ ಆದಿತ್ಯನಾಥ್​ರನ್ನು ಉಲ್ಲೇಖಿಸಿ, ‘ಅವರಪ್ಪನ ಮಸೀದಿ’ ಎಂದು ವ್ಯಂಗ್ಯವಾಡಿದರು.

ಮೇ ತಿಂಗಳಲ್ಲಿ ಬಾರಾಬಂಕಿ ಜಿಲ್ಲೆಯಲ್ಲಿರುವ ಗರೀಬ್​ ನವಾಜ್​ ಅಲ್​ ಮರೂಫ್​ ಎಂಬ ಮಸೀದಿಯನ್ನು ಅಕ್ರಮ ಕಟ್ಟಡದ ಹೆಸರಲ್ಲಿ ನೆಲಸಮ ಮಾಡಲಾಗಿತ್ತು. ಅದನ್ನು ಸ್ಥಳೀಯ ಜಿಲ್ಲಾಡಳಿತವೇ ಮುಂದಾಗಿ ಮಾಡಿತ್ತು. ಆದರೆ ಆ ಮಸೀದಿ ನೆಲಸಮವಾದ ಬೆನ್ನಲ್ಲೇ ಆಕ್ರೋಶವೂ ವ್ಯಕ್ತವಾಗಿ ಈ ಓವೈಸಿ ಕೂಡ ಅದನ್ನು ಖಂಡಿಸಿದ್ದರು. ಆದರೆ ಅದನ್ನೀಗ ಮತ್ತೆ ಉಲ್ಲೇಖಿಸಿ ಮಾತನಾಡಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಸದ್ಯ ಮೂರು ದಿನಗಳ ಉತ್ತರಪ್ರದೇಶ ಪ್ರವಾಸದಲ್ಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಜಾತ್ಯತೀತತೆ ಎಂಬುದು ದುರ್ಬಲವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: T20 World Cup: ಟಿ 20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಕ್ರಿಸ್ ಮೋರಿಸ್, ಫಾಫ್ ಡು ಪ್ಲೆಸಿಸ್​ಗೆ ತಂಡದಲ್ಲಿಲ್ಲ ಸ್ಥಾನ!

ಅಫ್ಘಾನಿಸ್ತಾನ ಅಕ್ಕಪಕ್ಕದ ದೇಶಗಳಿಗೆ ಆತಂಕ ತರಬಾರದು: ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ತಾಜಾ ಸುದ್ದಿ

Click on your DTH Provider to Add TV9 Kannada