ಸಹಕಾರ ಸಂಘದಲ್ಲಿ ಅವ್ಯವಹಾರ: 4 ಕೋಟಿಗೂ ಹೆಚ್ಚು ವಂಚನೆ ಆರೋಪ

ಗ್ರಾಹಕರಿಗೆ ₹ 4 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಲಾಗಿದೆ ಎಂದು ದೂರಲಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ನಗರದಲ್ಲಿ ಸಹಕಾರ ಸಂಘವು ಕಾರ್ಯನಿರ್ವಹಿಸುತ್ತಿದೆ

ಸಹಕಾರ ಸಂಘದಲ್ಲಿ ಅವ್ಯವಹಾರ: 4 ಕೋಟಿಗೂ ಹೆಚ್ಚು ವಂಚನೆ ಆರೋಪ
ವಿರಾಜಪೇಟೆಯಲ್ಲಿರುವ ಸಹಕಾರ ಸಂಘದ ಕಚೇರಿ

ಮಡಿಕೇರಿ: ಕೊಡಗು ಮುಸ್ಲಿಂ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಗ್ರಾಹಕರಿಗೆ ₹ 4 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಲಾಗಿದೆ ಎಂದು ದೂರಲಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ನಗರದಲ್ಲಿ ಸಹಕಾರ ಸಂಘವು ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರಿಗೆ ಶೇ 11ರಷ್ಟು ಬಡ್ಡಿ ನೀಡುವುದಾಗಿ ಘೋಷಿಸಿದ್ದ ಆಡಳಿತ ಮಂಡಳಿಯ ಮಾತು ಕೇಳಿ ಸಂಘದಲ್ಲಿ ನೂರಾರು ಮಂದಿ ಠೇವಣಿ ಮಾಡಿದ್ದರು.

ಇದೀಗ ಬ್ಯಾಂಕ್​ನ ಕಾರ್ಯನಿರ್ವಹಣಾಧಿಕಾರಿ ಮುಖ್ತಾರ್ ಅಹ್ಮದ್ ಬ್ಯಾಂಕ್ ಬಾಗಿಲು ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಎಸ್​.ಎಚ್.ಮೊಯಿದ್ದೀನ್ ಅವರ ವಿರುದ್ಧವೂ ಹಲವು ಗ್ರಾಹಕರು ಆರೋಪಿಸಿದ್ದಾರೆ. ಈ ಸಂಬಂಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಂದೆ ಮಗಳ ಸಾವು
ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ತಂದೆ ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕು ಉದ್ದೇಬೋರನಹಳ್ಳಿ ಬಳಿ ನಡೆದಿದೆ. ಮುಗುಳವಳ್ಳಿ‌ ಗ್ರಾಮದ ಜಯಣ್ಣ (58) ಮತ್ತು ರಕ್ಷಿತಾ (19) ಮೃತರು. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪಿಳ್ಳೇನಹಳ್ಳಿಯ ದೊಡ್ಡ ಮಗಳ ಮನೆಗೆ ಬಾಗಿನ ಕೊಡಲು ಜಯಣ್ಣ ಹೋಗಿದ್ದರು. ಬಾಗಿನ ಕೊಟ್ಟು ಚಿಕ್ಕ ಮಗಳ ಜೊತೆ ವಾಪಸ್ ಬರುವಾಗ ದುರ್ಘಟನೆ ನಡೆದಿದೆ.

(Corruption Allegation in Cooperative Society Depositors Protest)

ಇದನ್ನೂ ಓದಿ: Crime Update: ಪರಿಹಾರ ಧನಕ್ಕೆ ಲಂಚ, ಬೋರ್​ವೆಲ್ ವೈರ್ ಕಳ್ಳತನ, ಆತ್ಮಹತ್ಯೆ, ಕಳ್ಳರ ಬಂಧನ

ಇದನ್ನೂ ಓದಿ: ಪ್ರತಿಭಟಿಸುತ್ತಿರುವ ಆಫ್ಘನ್ ಮಹಿಳೆಯರ ವಿರುದ್ಧ ತಾಲಿಬಾನ್-ಪರ ಮಹಿಳೆಯರನ್ನೇ ಛೂಬಿಟ್ಟ ತಾಲಿಬಾನಿಗಳು!

Click on your DTH Provider to Add TV9 Kannada