ಚೆನ್ನೈ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (K. Annamalai) ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಆರು ದಿನಗಳ ಯುಕೆ ಭೇಟಿಗಾಗಿ ಇಂದು (ಜೂ22) ಬೆಳಗ್ಗೆ ತೆರಳಿದ್ದಾರೆ. ಬ್ರಿಟನ್ನಲ್ಲಿರುವ ತಮಿಳರು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಒಂಬತ್ತು ವರ್ಷಗಳ ಸಾಧನೆಗಳ ಕುರಿತು ಬ್ರಿಟನ್ನಲ್ಲಿರುವ ಮುಖಂಡ ಜತೆಗೆ ಚರ್ಚೆಯನ್ನು ನಡೆಸಲಿದ್ದಾರೆ. ಅವರು ತಮ್ಮ 6 ದಿನಗಳ ಭೇಟಿಯಲ್ಲಿ ಲಂಡನ್, ಬರ್ಮಿಂಗ್ಹ್ಯಾಮ್ ಮತ್ತು ಹೌನ್ಸ್ಲೋದಲ್ಲಿ ವಾಸಿಸುವ ತಮಿಳರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಅವರು ಜೂನ್ 29 ರಂದು ಮತ್ತೆ ಚೆನ್ನೈಗೆ ಬರಲಿದ್ದಾರೆ.
ಅಣ್ಣಾಮಲೈ ಅವರು ಕಳೆದ ವರ್ಷ 3 ದಿನಗಳ ಕಾಲ ಶ್ರೀಲಂಕಾಕ್ಕೆ ಪ್ರಯಾಣಿಸಿ ಲಂಕಾ ತಮಿಳರೊಂದಿಗೆ ಸಂವಾದ ನಡೆಸಿದ್ದರು. ಆ ವೇಳೆ ಶ್ರೀಲಂಕಾ ತಮಿಳರಿಗೆ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸುವುದಾಗಿ ಭರವಸೆ ನೀಡಿದ್ದರು.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಮೇ 1 2022ರಲ್ಲಿ ನಾಲ್ಕು ದಿನಗಳ ಕಾಲ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು. ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದ್ದು, ಈ ಸಮಯದಲ್ಲಿ ಭಾರತ ಸಾಹಯವನ್ನು ಕೂಡ ಕೇಳಿತ್ತು, ತಮಿಳುನಾಡು ಸರ್ಕಾರ ಅಲ್ಲಿಯ ತಮಿಳರಿಗೆ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ಕಳಿಸುವ ಬಗ್ಗೆ ಕೇಂದ್ರ ಮೌನ ವಹಿಸಿತ್ತು, ಈ ಸಮಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಭೇಟಿ ನೀಡಿದ್ದರು, ಅಲ್ಲಿಯ ತಮಿಳರ ಜತೆಗೆ ಚರ್ಚೆಯನ್ನು ನಡೆಸಿದ್ದರು, ಇದರ ಜತೆಗೆ ಕೇಂದ್ರವು ಶ್ರೀಲಂಕಾಕ್ಕೆ ಅಗತ್ಯ ಸಹಾಯವನ್ನು ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದರು.
ಇದರ ಜತೆಗೆ ತಮಿಳು ಮೀನಾಗಾರ ಜತೆಗೂ ಮಾತನಾಡಿ ಅವರ ಸಮಸ್ಯೆಗಳ ಬಗ್ಗೆಯು ಚರ್ಚೆ ನಡೆಸಿದ್ದರು. ಇದೀಗ ಬ್ರಿಟನ್ನಲ್ಲಿರುವ ತಮಿಳರೊಂದಿಗೆ ಸಂವಾದವನ್ನು ನಡೆಸಲಿದ್ದು. 6 ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Thu, 22 June 23