AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದಿನದ ಹಿಂದಷ್ಟೇ ಎಎಪಿ ತೊರೆದಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿ ಸೇರ್ಪಡೆ

Kailash Gahlot Joins BJP: ಒಂದು ದಿನದ ಹಿಂದಷ್ಟೇ ಆಮ್ ಆದ್ಮಿ ಪಕ್ಷ ತೊರೆದಿದ್ದ ಕೈಲಾಶ್​ ಗಹ್ಲೋಟ್​ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ತಿಂಗಳುಗಳ ಬಾಕಿಯಿರುವಾಗ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆ ಎಂಬಂತೆ ದೆಹಲಿ ಸರ್ಕಾರದ ಹಿರಿಯ ಸಚಿವ ಮತ್ತು ಪಕ್ಷದ ನಾಯಕ ಕೈಲಾಶ್ ಗಹ್ಲೋಟ್ ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಒಂದು ದಿನದ ಹಿಂದಷ್ಟೇ ಎಎಪಿ ತೊರೆದಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿ ಸೇರ್ಪಡೆ
ಕೈಲಾಶ್ Image Credit source: India Today
ನಯನಾ ರಾಜೀವ್
|

Updated on:Nov 18, 2024 | 1:03 PM

Share

ಒಂದು ದಿನದ ಹಿಂದಷ್ಟೇ ಆಮ್ ಆದ್ಮಿ ಪಕ್ಷ ತೊರೆದಿದ್ದ ಕೈಲಾಶ್​ ಗಹ್ಲೋಟ್​ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ತಿಂಗಳುಗಳ ಬಾಕಿಯಿರುವಾಗ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆ ಎಂಬಂತೆ ದೆಹಲಿ ಸರ್ಕಾರದ ಹಿರಿಯ ಸಚಿವ ಮತ್ತು ಪಕ್ಷದ ನಾಯಕ ಕೈಲಾಶ್ ಗಹ್ಲೋಟ್ ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಕೈಲಾಶ್ ಗಹ್ಲೋಟ್ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು, ಕೈಲಾಶ್ ಗಹ್ಲೋಟ್ ಅವರು ಗೃಹ, ಸಾರಿಗೆ, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ದಿಲ್ಲಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದರು. ಎಎಪಿ ಪಕ್ಷವು ಸ್ವಂತ ರಾಜಕೀಯ ಕಾರ್ಯಸೂಚಿಗಾಗಿ ಹೋರಾಡುತ್ತಿದೆ. ಇದರಿಂದಾಗಿ ದಿಲ್ಲಿಯ ಜನರಿಗೆ ಮೂಲಭೂತ ಸೇವೆಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಲಗೊಳಿಸಿದೆ.

ಗಹ್ಲೋಟ್, ದೆಹಲಿಯ ಜನರಿಗೆ ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸಲು ಪಕ್ಷದ ಅಸಮರ್ಥತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಮುನಾ ನದಿಯನ್ನು ಶುಚಿಗೊಳಿಸುವಲ್ಲಿ ವಿಫಲವಾಗಿರುವುದನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

ಮತ್ತಷ್ಟು ಓದಿ: ದೆಹಲಿ: ಎಎಪಿ ಸಚಿವ ಕೈಲಾಶ್ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕ ಪಕ್ಷಕ್ಕೆ ಸೇರ್ಪಡೆ

ಅರವಿಂದ್ ಕೇಜ್ರಿವಾಲ್ ಅವರ ಹೊಸ ಅಧಿಕೃತ ಬಂಗಲೆಯ ಶೀಶ್‌ ಮಹಲ್‌ ವಿಚಾರದಲ್ಲಿ ಹಲವಾರು ಮುಜುಗರದ ಅಂಶಗಳಿವೆ. ಇದು ಸಾಮಾನ್ಯ ಜನರ ಪಕ್ಷವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:01 pm, Mon, 18 November 24