ಮಂಡಿ ಕ್ಷೇತ್ರದಿಂದ ಕಂಗನಾ ಆಯ್ಕೆ ಪ್ರಶ್ನಿಸಿ ಅರ್ಜಿ, ಹೈಕೋರ್ಟ್​ ನೋಟಿಸ್

|

Updated on: Jul 25, 2024 | 11:54 AM

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಸಂಸದೆ ಕಂಗನಾ ರಣಾವತ್ ಅವರ ಗೆಲುವನ್ನು ಪ್ರಶ್ನಿಸಿ ಒಬ್ಬರು ಹಿಮಾಚಲ ಪ್ರದೇಶ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಮಂಡಿ ಕ್ಷೇತ್ರದಿಂದ ಕಂಗನಾ ಆಯ್ಕೆ ಪ್ರಶ್ನಿಸಿ ಅರ್ಜಿ, ಹೈಕೋರ್ಟ್​ ನೋಟಿಸ್
ಕಂಗನಾ ರಣಾವತ್
Follow us on

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್(Kangana Ranaut) ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಆಯ್ಕೆಯನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ, ನಂತರ ನ್ಯಾಯಾಲಯವು ಕಂಗನಾ ಗೆ ನೋಟಿಸ್ ಕಳುಹಿಸಿದೆ. ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ಆಗಸ್ಟ್ 21 ರೊಳಗೆ ಉತ್ತರಿಸುವಂತೆ ಕೇಳಿದ್ದಾರೆ.

ಈ ಅರ್ಜಿಯನ್ನು ಕಿನ್ನೌರ್ ನಿವಾಸಿ ಸ್ವತಂತ್ರ ಅಭ್ಯರ್ಥಿ ಲಾಯಿಕ್ ರಾಮ್ ನೇಗಿ ಸಲ್ಲಿಸಿದ್ದಾರೆ. ನಿಗದಿತ ಮಾನದಂಡಗಳನ್ನು ಪೂರೈಸಿದ್ದರೂ, ತಮ್ಮ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅವರು ಈ ಅರ್ಜಿಯ ಮೂಲಕ ವಾದಿಸಿದ್ದಾರೆ.

ರಾಮ್ ನೇಗಿ ಅರಣ್ಯ ಇಲಾಖೆಯ ಮಾಜಿ ಉದ್ಯೋಗಿ ಎಂಬುದು ಗಮನಾರ್ಹ. ಅವರು ಅಕಾಲಿಕ ನಿವೃತ್ತಿಯನ್ನು ತೆಗೆದುಕೊಂಡಿದ್ದರು. ನಿಗದಿತ ಮಾನದಂಡಗಳನ್ನು ಪೂರೈಸಿದ್ದರೂ ಚುನಾವಣೆಗೆ ಮುನ್ನವೇ ತಮ್ಮ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಮತ್ತಷ್ಟು ಓದಿ: ಕನ್ವರ್ ಯಾತ್ರೆ:ಯುಪಿ ಸರ್ಕಾರದ ‘ಹೆಸರು ಪ್ರದರ್ಶನ’ ಆದೇಶ ಬಗ್ಗೆ ಸೂನು ಸೂದ್ ನಿಲುವು ಪ್ರಶ್ನಿಸಿದ ಕಂಗನಾ ರಣಾವತ್

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 100ರ ಅಡಿಯಲ್ಲಿ ಮಂಡಿಯಲ್ಲಿ ಚುನಾವಣೆಗೆ ಸವಾಲು ಹಾಕಿದರೆ ಅರ್ಜಿದಾರನು ತನ್ನ ನಾಮಪತ್ರವನ್ನು ಅಕ್ರಮವಾಗಿ ತಿರಸ್ಕರಿಸಲಾಗಿದೆ ಎಂದು ಸಾಬೀತುಪಡಿಸಲು ವಿಫಲವಾದಲ್ಲಿ ನ್ಯಾಯಾಲಯವು ಅಸಿಂಧು ಎಂದು ಘೋಷಿಸಬಹುದು.

ಕಂಗನಾ ರಣಾವತ್ ಅವರು 74 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು ಬಿಜೆಪಿಯ ಕಂಗನಾ ರಣಾವತ್ 74 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಂಗನಾ ರಣಾವತ್ 5.37 ಲಕ್ಷ ಮತಗಳನ್ನು ಪಡೆದರೆ, ವಿಕ್ರಮಾದಿತ್ಯ ಸಿಂಗ್ ಸುಮಾರು 4.62 ಲಕ್ಷ ಮತಗಳನ್ನು ಪಡೆದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ