AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆ ಮೇಲೆ ಅತ್ಯಾಚಾರ, ಬಿಜೆಪಿ ಮೇಯರ್​​ ವಿರುದ್ಧ ದೂರು

ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬಳು ಇಂದೋರ್​ನ ಬಿಜೆಪಿ ಮೇಯರ್ ವಿರುದ್ಧ ದೂರು ದಾಖಲಿಸಿದ್ದಾರೆ. 32 ವರ್ಷ ವಯಸ್ಸಿನ ಮಹಿಳೆ ದ್ವಾರಕಾಪುರಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಶಾನು ಅಲಿಯಾಸ್ ನಿತಿಶ್ ಶರ್ಮಾ ಎಂಬಾತ ತನ್ನ ಮೇಲೆ 2023ರ ಮೇ 10 ರಿಂದ 2024ರ ಏಪ್ರಿಲ್ 16ವರೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆ ಮೇಲೆ ಅತ್ಯಾಚಾರ, ಬಿಜೆಪಿ ಮೇಯರ್​​ ವಿರುದ್ಧ ದೂರು
ಶಾನು ಶರ್ಮಾ Image Credit source: Amarujala.com
ನಯನಾ ರಾಜೀವ್
|

Updated on: Jul 25, 2024 | 11:01 AM

Share

ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬಳು ಇಂದೋರ್​ನ ಬಿಜೆಪಿ ಮೇಯರ್ ವಿರುದ್ಧ ದೂರು ದಾಖಲಿಸಿದ್ದಾರೆ. 32 ವರ್ಷ ವಯಸ್ಸಿನ ಮಹಿಳೆ ದ್ವಾರಕಾಪುರಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಶಾನು ಅಲಿಯಾಸ್ ನಿತಿಶ್ ಶರ್ಮಾ ಎಂಬಾತ ತನ್ನ ಮೇಲೆ 2023ರ ಮೇ 10 ರಿಂದ 2024ರ ಏಪ್ರಿಲ್ 16ವರೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಬ್ಯಾಂಕ್‌ನಲ್ಲಿ 1 ಲಕ್ಷ ರೂಪಾಯಿ ಸಾಲ ಹೊಂದಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಅದನ್ನು ಮರುಪಾವತಿಸಲು ಕೌನ್ಸಿಲರ್ ಸಾನು ಒಂದು ಲಕ್ಷ ರೂಪಾಯಿ ನೀಡಿದ್ದರು. ಇದಾದ ನಂತರ ಅವರು ನನ್ನ ಗೆಳೆಯನೊಬ್ಬನಿಂದ ಅಂತರ ಕಾಯ್ದುಕೊಳ್ಳುವಂತೆ ಕೇಳಿಕೊಂಡರು. ನಾನು ನಿರಾಕರಿಸಿದಾಗ ಅವರು ಒಂದು ಲಕ್ಷ ರೂಪಾಯಿ ವಾಪಸ್ ಕೇಳಿದ್ದರು.

ಇಂದೋರ್‌ನ ದ್ವಾರಕಾಪುರಿ (82) ವಾರ್ಡ್‌ನ ಬಿಜೆಪಿ ಕೌನ್ಸಿಲರ್ ಶಾನು ಶರ್ಮಾ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ. ಕೊರೊನಾ ಸಮಯದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಸಹಾಯಕ್ಕಾಗಿ ಕೌನ್ಸಿಲರ್ ಬಳಿ ಹೋಗಿದ್ದರು, ನಂತರ ಸಹಾಯದ ನೆಪದಲ್ಲಿ ದೈಹಿಕ ಸಂಬಂಧ ಬೆಳೆಸಿದ್ದರು. ಶಾನು ಕೂಡ ನನಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ನಂತರ ಅವರು ಸಹಾಯಕ್ಕಾಗಿ ನೀಡಿದ ಹಣವನ್ನು ಕೊಡುವಂತೆ ಪೀಡಿಸುತ್ತಿದ್ದರು.

ಮತ್ತಷ್ಟು ಓದಿ: ಲೇಡಿಸ್ ಪಿಜಿಯಲ್ಲಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಕೊಲೆಗಾರನ ಸುಳಿವು ಪತ್ತೆ, ಯಾರು ಗೊತ್ತಾ?

ನನ್ನ ಬಾಯ್‌ಫ್ರೆಂಡ್‌ನಿಂದ ದೂರ ಇರುವಂತೆ ಸಾನು ಒತ್ತಡ ಹಾಕಿದ್ದರು, ಇದಾದ ನಂತರ ಅವರು ನನಗೆ ಕಿರುಕುಳ ನೀಡಲು ಆರಂಭಿಸಿದ್ದರಿಂದ ವಿರುದ್ಧ ದೂರು ದಾಖಲಿಸಬೇಕಾಯಿತು. ಮಂಗಳವಾರ ರಾತ್ರಿಯೇ ಮಹಿಳೆ ಪೊಲೀಸ್ ಠಾಣೆಗೆ ಬಂದಿದ್ದರು. ಕೌನ್ಸಿಲರ್ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಬಿಜೆಪಿ ಮುಖಂಡರು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಮೊದಲು ಮಹಿಳೆ ಪ್ರಕರಣ ದಾಖಲಿಸಿಕೊಳ್ಳದಂತೆ ಸಮಜಾಯಿಷಿ ನೀಡಿದರು.

ಭಾರತೀಯ ದಂಡಸಂಹಿತೆ ಸೆಕ್ಷನ್ 376, 376 (2) (ಎನ್) ಮತ್ತು 506ರ ಅನ್ವಯ ಎಫ್ಐಆರ್ ದಾಖಲಾಗಿದ್ದು, ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ರಾಜೇಶ್ ದಾಂದೋತಿಯಾ ಮಾಹಿತಿ ನೀಡಿದ್ದಾರೆ.

ಐವತ್ತು ಸಾವಿರ ರೂಪಾಯಿ ಕೊಟ್ಟೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದೆ, ಕೊಡಲು ನನ್ನ ಬಳಿ ಹಣ ಇರಲಿಲ್ಲ. ಒಂದು ದಿನ ಕೌನ್ಸಿಲರ್ ಹಣದ ಬದಲು ತನ್ನ ಜತೆಗೆ ಮಲಗು ಎಂದು ಕೇಳಿದ್ದರು, ವಿದುರ್ ನಗರದ ಮನೆಯೊಂದರಲ್ಲಿ ಅವರೊಂದಿಗಿದ್ದೆ,ಇದಾದ ನಂತರ ಆತನಿಗೆ ದ್ವಾರಕಾಪುರಿಯಲ್ಲಿರುವ ತನ್ನ ಕಚೇರಿಯೊಂದರಲ್ಲಿ ಕೆಲಸ ಕೊಟ್ಟ.

ಅಲ್ಲಿಯೂ ಹಲವು ಬಾರಿ ಸಂಬಂಧ ಹೊಂದಿದ್ದರು. ಬಳಿಕ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಸಾನು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ