ಖರ್ಗೆ ಜೀ ನಿರ್ಮಲಾ ನಿಮಗೆ “ಮಾತಾಜಿ ಅಲ್ಲ, ಮಗಳಂತೆ”: ಜಗದೀಪ್ ಧನಕರ್
ರಾಜ್ಯಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ, ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾತಾಜಿ ಎಂದು ಕರೆದಿದ್ದಾರೆ. ಖರ್ಗೆ ಮಾತಿನ ಮಧ್ಯೆ ಪ್ರವೇಶಿಸಿದ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಕ್ಷಮಿಸಿ ಖರ್ಗೆ ಜೀ ನಿಮಗೆ ನಿರ್ಮಲಾ ಮಾತಾಜಿ ಅಲ್ಲ, ಮಗಳಂತೆ ಎಂದು ಹೇಳಿದ್ದಾರೆ. ಈ ಮಾತು ಯಾಕೆ ಬಂತು? ಖರ್ಗೆ ಅವರ ಟೀಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ಏನು ? ಇಲ್ಲಿದೆ ನೋಡಿ
ದೆಹಲಿ, ಜು.25: ಕೇಂದ್ರ ಬಜೆಟ್ ಜುಲೈ 23ಕ್ಕೆ ಮಂಡನೆ ಆಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಂತರ ಪರ-ವಿರೋಧಗಳು ವ್ಯಕ್ತವಾಗಿತ್ತು, ನೆನ್ನೆ ( ಜುಲೈ 24) ರಾಜ್ಯಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆದಿದೆ. ಈ ವೇಳೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾತಾಜಿ ಎಂದು ಕರೆದಿದ್ದಾರೆ. ಈ ವೇಳೆ ಮಧ್ಯೆಪ್ರವೇಶಿಸಿದ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಖರ್ಗೆ ಜೀ ಅವರು ನಿಮಗೆ ಮಾತಾಜಿ ಅಲ್ಲ, ಮಗಳು ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಬಜೆಟ್ ಬಗ್ಗೆ ಟೀಕೆ ಮಾಡುತ್ತಿದ್ದ ವೇಳೆ ಖರ್ಗೆ ಅವರು ಈ ಮಾತನ್ನು ಹೇಳಿದ್ದಾರೆ. ನಿಮ್ಮ ಬಜೆಟ್ನಲ್ಲಿ ಆಂಧ್ರ-ಬಿಹಾರ ಬಿಟ್ಟ ಮತ್ತೆಲ್ಲ ರಾಜ್ಯಗಳ ಪ್ಲೆಟ್ ಖಾಲಿಯಾಗಿದೆ. ಈ ರೀತಿಯ ಬಜೆಟ್ನ್ನು ನಾನು ಎಂದು ನೋಡಿಲ್ಲ ಎಂದರು. ಈ ಬಜೆಟ್ ನಿಮ್ಮ ಮಿತ್ರಪಕ್ಷವನ್ನು ಖುಷಿಪಡಿಸಲು ಹಾಗೂ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಾಡಿದ್ದೀರಾ, ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಮಾತಾಜಿ ಅಲ್ಲ, ಮಗಳು ಖರ್ಗೆ ಜೀ;
ಖರ್ಗೆ ಅವರೇ ನಿಮ್ಮ ಮಾತಿಗೆ ಪ್ರತಿಕ್ರಿಯೆ ನೀಡಲಿ ಸಚಿವರಿಗೆ ಅವಕಾಶ ನೀಡಿ ಎಂದು ಸಭಾಪತಿ ಧನಕರ್ ಅವರು ಹೇಳಿದಾಗ, ಹೌದು ಮಾತಾಜಿಗೆ ಮಾತನಾಡಲು ಅವಕಾಶ ನೀಡುವೇ, ಮಾತಾಜಿ ಮಾತನಾಡುವುದರಲ್ಲಿ ನಿಪುಣರು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಧನಕರ್ ಖರ್ಗೆ ಅವರೇ ನಿರ್ಮಲಾ ನಿಮಗೆ ಮಾತಾಜಿ ಅಲ್ಲ, ಮಗಳು ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿಯವರೇ, ನಿಮ್ಮನ್ನು ಸೋಲಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬೇಡಿ: ಸ್ಟಾಲಿನ್
ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಖರ್ಗೆ ಅವರ ಮಾತಿಗೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ. ಈ ವಿಚಾರವಾಗಿ ಕಾಂಗ್ರೆಸ್ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ. ಪ್ರತಿ ಬಜೆಟ್ನಲ್ಲೂ ಎಲ್ಲ ರಾಜ್ಯದ ಹೆಸರನ್ನು ಸೂಚಿಸಲು ಸಾಧ್ಯವಿಲ್ಲ ಎಂದರು. ಉದಾಹರಣೆ ಮೂಲಕ ವಿವರಿಸಿದ ಸಚಿವರು, ಈಗ ಮಹಾರಾಷ್ಟ್ರದ ಹೆಸರನ್ನು ಸೂಚಿಸಿಲ್ಲ, ಆದರೆ ಅಲ್ಲಿ ಹೊಸ ಬಂದರು ಯೋಜನೆ ನೀಡಲಾಗಿದೆ. ಬಜೆಟ್ ಭಾಷಣದಲ್ಲಿ ರಾಜ್ಯಗಳನ್ನು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ರಾಜ್ಯಗಳಿಗೆ ಏನು ನೀಡಿಲ್ಲ ಎಂದಲ್ಲ, ಜನರಿಗೆ ನಮ್ಮ ರಾಜ್ಯಗಳಿಗೆ ಕೇಂದ್ರ ಏನು ನೀಡಿಲ್ಲ ಎಂಬ ಭಾವನೆಯನ್ನು ಕಾಂಗ್ರೆಸ್ ಮೂಡಿಸುತ್ತಿದೆ ಎಂದು ಆರೋಪಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:32 am, Thu, 25 July 24