ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಭಾರತದ ಸಂವಿಧಾನವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನಮಿಸಿದ ಪ್ರಧಾನಿ ಮೋದಿ
ಎಲ್ಲರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಭಾರತದ ಸಂವಿಧಾನವನ್ನು ಕೈಯಲ್ಲಿ ಎತ್ತಿ ನಮಿಸಿ, ಹಣೆಗೆ ಹಚ್ಚಿಕೊಂಡು ಗೌರವ ಸಲ್ಲಿಸಿದರು. ನಂತರ ಮಾತಾಡಿದ ನಡ್ಡಾ ಹಾಜರಿದ್ದ ಸದಸ್ಯರಿಗೆ ವಂದನೆ ಹೇಳುತ್ತಾ, ದೇಶದ ಅಭಿವೃದ್ಧಿ ಕೆಲಸಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದರು.
ದೆಹಲಿ: ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ನೇತೃತ್ವಲ್ಲಿ ಎನ್ ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಗಳಾಗಿ ಸಂಸತ್ತಿಗೆ ಆಯ್ಕೆಯಾಗಿರುವ ನಾಯಕರ ಸಭೆ ನಡೆಯಿತು. ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಮತ್ತು ಧಾರವಾಡ ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಪ್ರಲ್ಹಾದ್ ಜೋಶಿಯವರೊಂದಿಗೆ ಸೆಂಟ್ರಲ್ ಹಾಲ್ ಪ್ರವೇಶಿಸುತ್ತಿರುವುದನ್ನು ನೋಡಬಹುದು. ಪ್ರಧಾನಿ ಮೋದಿ ಕಾಣುತ್ತಿದ್ದಂತೆಯೇ ಹಾಲ್ ನಲ್ಲಿದ್ದ ಸದಸ್ಯರೆಲ್ಲ ಎದ್ದುನಿಂತು ಚಪ್ಪಾಳೆ ಮೂಲಕ ಅವರನ್ನು ಸ್ವಾಗತಿಸಿದರು. ಪ್ರಧಾನಿ ಎಲ್ಲರನ್ನೂ ವಂದಿಸಿ ಅಭಿನಂದಿಸಿದರು. ನಿರೂಪಕರೊಬ್ಬರು ಧ್ವನಿವರ್ಧಕದಲ್ಲಿ ಸ್ವಾಗತ್ ಹೈ ಭೈ ಸ್ವಾಗತ್ ಹೈ ಅಂತ ಹೇಳುತ್ತಿರುವುದು ಕೇಳಿಸುತ್ತದೆ. ಎಲ್ಲರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಭಾರತದ ಸಂವಿಧಾನವನ್ನು ಕೈಯಲ್ಲಿ ಎತ್ತಿ ನಮಿಸಿ, ಹಣೆಗೆ ಹಚ್ಚಿಕೊಂಡು ಗೌರವ ಸಲ್ಲಿಸಿದರು. ನಂತರ ಮಾತಾಡಿದ ನಡ್ಡಾ ಹಾಜರಿದ್ದ ಸದಸ್ಯರಿಗೆ ವಂದನೆ ಹೇಳುತ್ತಾ, ದೇಶದ ಅಭಿವೃದ್ಧಿ ಕೆಲಸಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತ್ತೊಮ್ಮೆ ಎನ್ ಡಿಎ ಸರ್ಕಾರ ರಚಿಸಲು ಸದಸ್ಯ ಪಕ್ಷಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ