ಇವರೇನು ಮನುಷ್ಯರೋ, ರಾಕ್ಷಸರೋ: ಸಣ್ಣ ವಾಗ್ವಾದ, ಕಾನೂನು ವಿದ್ಯಾರ್ಥಿಯ ಹೊಟ್ಟೆ ಕೊಯ್ದು, ಕೈ ಬೆರಳುಗಳ ಕತ್ತರಿಸಿದ ಮೆಡಿಕಲ್ ಶಾಪ್ ಮಾಲೀಕ

ಇವರೇನು ಮನುಷ್ಯರೋ ಅಥವಾ ರಾಕ್ಷಸರೋ ನಡೆದಿದ್ದು ಸಣ್ಣ ವಾಗ್ವಾದ ಆಗಿದ್ದು ಮಾರಣಾಂತಿಕ ಹಲ್ಲೆ. ಮೆಡಿಕಲ್ ಶಾಪ್​ನಲ್ಲಿ ಔಷಧದ ಬೆಲೆಗೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿ ಹಾಗೂ ಔಷಧಂಗಡಿ ಮಾಲೀಕನ ಜತೆ ವಾಗ್ವಾದ ನಡೆದಿದೆ. ಶಾಪ್ ಮಾಲೀಕ ಕೋಪಗೊಂಡು ವಿದ್ಯಾರ್ಥಿಯ ಹೊಟ್ಟೆ ಹಾಗೂ ಕೈಬೆರಳುಗಳನ್ನು ಕತ್ತರಿಸಿರುವ ಭಯಾನಕ ಘಟನೆ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ ಅಭಿಜೀತ್ ಸಿಂಗ್ ಚಾಂಡೆಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರೇನು ಮನುಷ್ಯರೋ, ರಾಕ್ಷಸರೋ: ಸಣ್ಣ ವಾಗ್ವಾದ, ಕಾನೂನು ವಿದ್ಯಾರ್ಥಿಯ ಹೊಟ್ಟೆ ಕೊಯ್ದು, ಕೈ ಬೆರಳುಗಳ ಕತ್ತರಿಸಿದ ಮೆಡಿಕಲ್ ಶಾಪ್ ಮಾಲೀಕ
ವಿದ್ಯಾರ್ಥಿ

Updated on: Oct 27, 2025 | 7:38 AM

ಕಾನ್ಪುರ, ಅಕ್ಟೋಬರ್ 27: ಇವರೇನು ಮನುಷ್ಯರೋ ಅಥವಾ ರಾಕ್ಷಸರೋ ನಡೆದಿದ್ದು ಸಣ್ಣ ವಾಗ್ವಾದ ಆಗಿದ್ದು ಮಾರಣಾಂತಿಕ ಹಲ್ಲೆ. ಮೆಡಿಕಲ್ ಶಾಪ್​ನಲ್ಲಿ ಔಷಧದ ಬೆಲೆಗೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿ(Student) ಹಾಗೂ ಔಷಧಂಗಡಿ ಮಾಲೀಕನ ಜತೆ ವಾಗ್ವಾದ ನಡೆದಿದೆ. ಶಾಪ್ ಮಾಲೀಕ ಕೋಪಗೊಂಡು ವಿದ್ಯಾರ್ಥಿಯ ಹೊಟ್ಟೆ ಹಾಗೂ ಕೈಬೆರಳುಗಳನ್ನು ಕತ್ತರಿಸಿರುವ ಭಯಾನಕ ಘಟನೆ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ ಅಭಿಜೀತ್ ಸಿಂಗ್ ಚಾಂಡೆಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಯ ತಲೆಗೆ 14 ಹೊಲಿಗೆಗಳನ್ನು ಹಾಕಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಔಷಧಿಯ ಬೆಲೆಯ ಬಗ್ಗೆ ಆರಂಭವಾದ ವಾಗ್ವಾದವು, ಹಿಂಸಾತ್ಮಕ ರೂ ತಾಳಿತ್ತು. ಕಾನೂನು ವಿದ್ಯಾರ್ಥಿ ಮತ್ತು ವೈದ್ಯಕೀಯ ಅಂಗಡಿಯಲ್ಲಿ ಕೆಲಸ ಮಾಡುವ ಅಮರ್ ಸಿಂಗ್ ನಡುವಿನ ಪೂರ್ಣ ಪ್ರಮಾಣದ ಜಗಳಕ್ಕೆ ಕಾರಣವಾಯಿತು. ಅಮರ್ ಸಿಂಗ್ ಅವರ ಸಹೋದರ ವಿಜಯ್ ಸಿಂಗ್ ಮತ್ತು ಪ್ರಿನ್ಸ್ ರಾಜ್ ಶ್ರೀವಾಸ್ತವ ಮತ್ತು ನಿಖಿಲ್ ಎಂಬುವವರು ಅವರೊಂದಿಗೆ ಸೇರಿಕೊಂಡರು.

ನಾಲ್ವರು ವಿದ್ಯಾರ್ಥಿಯ ತಲೆಯ ಮೇಲೆ ಹಲ್ಲೆ ನಡೆಸಿದ್ದು, ಮುಖದಲ್ಲಿ ರಕ್ತ ಸೋರುತ್ತಿರುವಂತೆ ಆತ ನೆಲಕ್ಕೆ ಬಿದ್ದಿದ್ದಾನೆ. ನಂತರ ದಾಳಿಕೋರರು ವಿದ್ಯಾರ್ಥಿಯ ಹೊಟ್ಟೆಗೆ ಹೊಡೆದು, ಹರಿತವಾದ ವಸ್ತುವಿನಿಂದ ಹೊಟ್ಟೆಯನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಚಿತ್ರದುರ್ಗ: ಅಜ್ಜಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಮುಖ್ಯ ಶಿಕ್ಷಕ; ವಿಡಿಯೋ ವೈರಲ್​​

ದಾಳಿಯಲ್ಲಿ ಗಾಯಗೊಂಡ ನಂತರ, ಅಭಿಜೀತ್ ಕೂಗುತ್ತಾ ತನ್ನ ಮನೆಯ ಕಡೆಗೆ ಓಡಿದ್ದಾನೆ, ಆದರೆ ದಾಳಿಕೋರರು ಅವನನ್ನು ಮತ್ತೆ ಹಿಡಿದು ಅವನ ಒಂದು ಕೈಯ ಎರಡು ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿಜೀತ್ ನ ಕಿರುಚಾಟ ಕೇಳಿ ಜನರು ಆತನನ್ನು ರಕ್ಷಿಸಲು ಓಡಿ ಬಂದರು. ಈ ಹಂತದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us