ಜಾರ್ಖಂಡ್​: ದೇವಸ್ಥಾನದೊಳಗೆ ಕಳವು ಮಾಡಲು ಬಂದು ನಿದ್ರೆಗೆ ಜಾರಿದ ಕಳ್ಳ

ಬೆಲೆಬಾಳುವ ವಸ್ತುಗಳನ್ನು ಕದಿಯುವ ಉದ್ದೇಶದಿಂದ ರಾತ್ರಿ ವೇಳೆ ದೇವಸ್ಥಾನಕ್ಕೆ ನುಗ್ಗಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನಿದ್ರೆಗೆ ಜಾರಿದ್ದ ಪೊಲೀಸರು ಕದ್ದ ವಸ್ತುಗಳ ಜತೆ ಆತನನ್ನು ಬಂಧಿಸಿದ್ದಾರೆ. ಈ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಬೆಳಗ್ಗೆ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಳ್ಳನನ್ನು ಎಚ್ಚರಗೊಳಿಸಿ, ಕದ್ದ ವಸ್ತುಗಳ ಜೊತೆಗೆ ವಶಕ್ಕೆ ಪಡೆದರು. ಪಶ್ಚಿಮ ಸಿಂಗ್‌ಭೂಮ್‌ನ ಮಾರುಕಟ್ಟೆ ಪ್ರದೇಶದಲ್ಲಿರುವ ಕಾಳಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ವೀರ್ ನಾಯಕ್ ಎಂದು ಗುರುತಿಸಲಾಗಿದ್ದು, ಕಳ್ಳತನದ ಉದ್ದೇಶದಿಂದ ದೇವಸ್ಥಾನದ ಹಿಂಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಜಾರ್ಖಂಡ್​: ದೇವಸ್ಥಾನದೊಳಗೆ ಕಳವು ಮಾಡಲು ಬಂದು ನಿದ್ರೆಗೆ ಜಾರಿದ ಕಳ್ಳ
ಜಾರ್ಖಂಡ್

Updated on: Jul 16, 2025 | 7:51 AM

ಜಾರ್ಖಂಡ್, ಜುಲೈ 16: ಜಾರ್ಖಂಡ್​ನ ಕಾಳಿ ದೇವಸ್ಥಾನ(Temple)ದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದೇವಸ್ಥಾನದೊಳಗೆ ಕಳವು ಮಾಡಲು ಬಂದ ಕಳ್ಳ ನಿದ್ರೆಗೆ ಜಾರಿದ್ದಾನೆ. ಬೆಳಗ್ಗೆಯವರೆಗೂ ಆತನಿಗೆ ಎಚ್ಚರವೇ ಆಗಿರಲಿಲ್ಲ, ಕದ್ದ ವಸ್ತುಗಳನ್ನು ಪಕ್ಕದಲ್ಲಿಟ್ಟುಕೊಂಡು ಮಲಗಿದ್ದ ಎನ್ನಲಾಗಿದೆ. ಬೆಳಗ್ಗೆ ಜನರಿಂದ ಮಾಹಿತಿ ಪಡೆದ ಬರ ಜಮಡಾ ಪೊಲೀಸರು ಸ್ಥಳಕ್ಕೆ ತಲುಪಿ ಕಳ್ಳನನ್ನು ಎಬ್ಬಿಸಿ ಕದ್ದ ಮಾಲುಗಳೊಂದಿಗೆ ವಶಕ್ಕೆ ಪಡೆದಿದ್ದಾರೆ.

ಕಳ್ಳನನ್ನು ವೀರ್ ನಾಯಕ್ ಎಂದು ಗುರುತಿಸಲಾಗಿದೆ. ಬರಜಮ್ಡಾ ಒಪಿಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ, ಆತನನ್ನು ನ್ಯಾಯಾಲಯಕ್ಕೆ ಕರೆತರಲಾಯಿತು, ಬಳಿಕ ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಸೋಮವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಹೆಚ್ಚು ಮದ್ಯ ಸೇವಿಸಿದ್ದಾಗಿ ಆರೋಪಿ ವೀರ್ ನಾಯಕ್ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಕಾಳಿ ದೇವಸ್ಥಾನದ ಮುಂಭಾಗದ ಗೋಡೆಯನ್ನು ಹತ್ತಿ ಬಾಗಿಲಿನ ಬೀಗ ಮುರಿದು ದೇವಸ್ಥಾನದೊಳಗೆ ಪ್ರವೇಶಿಸಿದ್ದಾನೆ.

ದೇವಾಲಯದ ಒಳಗಿನ ಕಾಳಿ ಮಾತೆಯ ವಿಗ್ರಹದ ಮೇಲೆ ಅಲಂಕರಿಸಿದ್ದ ಆಭರಣಗಳು ಮತ್ತು ಪೂಜಾ ತಾಳಿ, ಲೋಟ, ಗಂಟೆ, ಅಲಂಕಾರ ಸಾಮಗ್ರಿಗಳು ಇತ್ಯಾದಿಗಳನ್ನು ಚೀಲದಲ್ಲಿ ತುಂಬಿಸಿ ಓಡಿಹೋಗಲು ಅವನು ಸಿದ್ಧತೆ ನಡೆಸುತ್ತಿದ್ದನು. ನಂತರ ಅವನಿಗೆ ನಿದ್ರೆ ಬರಲು ಪ್ರಾರಂಭಿಸಿತು ಮತ್ತು ಕುಡಿದ ಮತ್ತಿನಲ್ಲಿ ಅವನು ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ.

ಮಂಗಳವಾರ ಬೆಳಿಗ್ಗೆ ಜನರು ದೇವಸ್ಥಾನದ ಬಾಗಿಲನ್ನು ನೋಡಿದಾಗ, ದೇವಸ್ಥಾನದ ಒಳಗೆ ಒಬ್ಬ ವ್ಯಕ್ತಿ ನಿದ್ರಿಸುತ್ತಿರುವುದನ್ನು ನೋಡಿದರು. ಅನುಮಾನಗೊಂಡು, ಚೀಲವನ್ನು ತೆರೆದಾಗ, ಅದರಲ್ಲಿ ದೇವಸ್ಥಾನದ ವಸ್ತುಗಳಿರುವುದು ಕಂಡುಬಂದಿತ್ತು. ಅವರು ತಕ್ಷಣ ಬರಜಮ್ಡಾ ಒಪಿ ಉಸ್ತುವಾರಿ ಬಾಲೇಶ್ವರ್ ಒರಾನ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆದರು.

ಮತ್ತಷ್ಟು ಓದಿ: ಗದಗಿನಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್: ರಾತ್ರೋರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿ

ಕಳ್ಳತನ ಮಾಡಲು ದೇವಸ್ಥಾನ ಪ್ರವೇಶಿಸಿದ ಕಳ್ಳ ಗಾಢ ನಿದ್ರೆ ಜಾರಿರುವುದು ಆ ಕಾಳಿಮಾತೆಯಿಂದಲೇ , ಇದರಿಂದಾಗಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವುದು ಸುಲಭವಾಯಿತು ಎಂದು ಓಪಿ ಉಸ್ತುವಾರಿ ಹೇಳಿದರು.ಘಟನೆ ನಡೆಯುವ ಮೊದಲು, ಸಂಜೆ ಆರು ಗಂಟೆಯ ಸುಮಾರಿಗೆ, ವೀರ್ ನಾಯಕ್ ನೋವಮುಂಡಿ ಡಿಬಿಸಿ ಕಾಳಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿ ಓಡಾಡುತ್ತಿದ್ದರು ಎಂದು ಜನರು ತಿಳಿಸಿದ್ದಾರೆ.

ನಾಯಕ್ ಗರ್ಭಗುಡಿಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ದೇವರ ಕಿರೀಟ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆ. ಆದರೆ, ಕದ್ದ ವಸ್ತುಗಳೊಂದಿಗೆ ತಪ್ಪಿಸಿಕೊಳ್ಳುವ ಬದಲು, ದೇವಾಲಯದೊಳಗೆ ನಿದ್ರೆಗೆ ಜಾರಿ ಸಿಕ್ಕಿಬಿದ್ದಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ