ಈ ಬಾರಿಯ (2022ನೇ ಸಾಲಿನ) ಪ್ರತಿಷ್ಠಿತ ಪಿಂಕ್ ಲೇಡಿ ಇಂಟರ್ನ್ಯಾಶನಲ್ ಫುಡ್ ಫೋಟೋ ಸ್ಪರ್ಧೆಯಲ್ಲಿ ಭಾರತದ ಛಾಯಾಗ್ರಾಹಕಿ ದೇಬ್ದತ್ತಾ ಚಕ್ರವರ್ತಿ ಗೆದ್ದಿದ್ದಾರೆ. ದೇಬದತ್ತಾ ಅವರು ಕಾಶ್ಮೀರದಲ್ಲಿ ತೆಗೆದ ಕಬಾಬ್ ತಯಾರಕನ ಫೋಟೋಕ್ಕೆ ಈ ಬಾರಿ ಪ್ರಶಸ್ತಿ ಬಂದಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಖಯ್ಯಮ್ ಚೌಕ್ನಲ್ಲಿ, ರಸ್ತೆಬದಿಯ ಕಬಾಬ್ ವ್ಯಾಪಾರಿಯೊಬ್ಬನ ಫೋಟೋ ಇದು. ವ್ಯಾಪಾರಿ ಕಬಾಬ್ ತಯಾರಿಸುತ್ತಿದ್ದರೆ, ದಟ್ಟವಾದ ಹೊಗೆ ಆತನ ಸುತ್ತಲೂ ಹರಡಿದೆ. ವ್ಯಾಪಾರಿಯ ಮುಖ- ಕಬಾಬ್ ಕಾಣಿಸುತ್ತಿದೆ. ಅದೊಂತರ ಮೋಡಗಳ ಮಧ್ಯೆ ಕುಳಿತು ಕಬಾಬ್ ತಯಾರಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಫೋಟೋಕ್ಕೆ ಕೆಬಾಬಿಯಾನಾ ಎಂದು ಹೆಸರು ದೇಬದತ್ತಾ ಹೆಸರು ಕೊಟ್ಟಿದ್ದಾರೆ.
ಪಿಂಕಿ ಲೇಡಿ ಫುಡ್ ಫೋಟೋಗ್ರಾಫರ್ ಆಫ್ ದಿ ಇಯರ್ನ ಸಂಸ್ಥಾಪಕಿ ಮತ್ತು ನಿರ್ದೇಶಕಿಯಾರ ಕ್ಯಾರೋಲಿನ್ ಕೆನ್ಯನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಾರಿ ಗೆದ್ದ ಫೋಟೋ ಅತ್ಯಂತ ಸುಂದರವಾಗಿ ಸೆರೆ ಹಿಡಿಯಲ್ಪಟ್ಟಿದೆ. ಕಬಾಬ್ ತಯಾರಕನ ಮುಖದಲ್ಲಿ ತಾನು ತಯಾರಿಸುತ್ತಿರುವ ಆಹಾರವನ್ನು ಹಂಚಿಕೊಳ್ಳುವ ಭಾವವಿದೆ. ಆತನನ್ನು ಹೊಗೆ ಆಲಿಂಗಿಸಿದೆ ಮತ್ತು ಸಿದ್ಧವಾದ ಆಹಾರದಿಂದ ಬಂಗಾರದ ಬಣ್ಣದ ಬೆಳಕು ಬರುತ್ತಿದೆ ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲ, ಕಬಾಬ್ ಹುರಿಯುವಾಗ ಅದರ ಕಿಡಿಗಳು ಹಾರುತ್ತಿವೆ. ಆ ಕಿಡಿಗಳ ಮೂಲಕವೇ ನಾವದರ ಸುವಾಸನೆಯನ್ನು ಆಘ್ರಾಣಿಸಬಹುದು ಎನ್ನಿಸುತ್ತದೆ. ಈ ಫೋಟೋ ತುಂಬ ಸೌಮ್ಯ ಸ್ವರೂಪವನ್ನು ಹೊಂದಿದ್ದರೂ, ನಮ್ಮ ಆತ್ಮಕ್ಕೆ ಅತ್ಯಂತ ಆಳವಾಗಿ ತಲುಪುತ್ತದೆ ಎಂದು ಹೇಳಿದ್ದಾರೆ.
Overall Winner
And finally, huge congratulations to Debdatta Chakraborty, Overall Winner of the 2022 @FoodPhotoAward Competition with Kebabiyana.An amazing winning image! #FoodPhotoAwards22 pic.twitter.com/eQ0eQTsRqQ
— Pink Lady® Food Photographer of the Year (@FoodPhotoAward) April 26, 2022
ಅಂದಹಾಗೇ, ಈ ಪಿಂಕ್ ಲೇಡಿ ಫೋಟೋಗ್ರಾಫರ್ ಆಫ್ ದಿ ಇಯರ್ ಎಂಬ ಜಾಗತಿಕ ಮಟ್ಟದ ಫೋಟೋ ಸ್ಪರ್ಧೆ ಮೊಟ್ಟಮೊದಲು ಶುರುವಾಗಿದ್ದು 2011ರಲ್ಲಿ. ಇದು ಆಹಾರ ಫೋಟೋಗ್ರಫಿ (ಚಿತ್ರ) ಸ್ಪರ್ಧೆ. ಅಂದರೆ ಇಲ್ಲಿ ಸ್ಪರ್ಧೆಗೆ ಬರುವುದು ಆಹಾರ, ತಿನಿಸುಗಳಿಗೆ ಸಂಬಂಧಪಟ್ಟ ಚಿತ್ರಗಳು. ಈ ಬಾರಿಯೂ ಸಹ ಸುಮಾರು 60 ದೇಶಗಳಿಂದ ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಈ ಸ್ಪರ್ಧೆಗೆ ಕಳಿಸಲಾಗಿತ್ತು. ವಿವಿಧ ವಿಭಾಗಗಳಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಈ ಕಾರ್ಯಕ್ರಮವನ್ನು ಪಿಂಕ್ ಲೇಡಿ ಫೋಟೋಗ್ರಾಫರ್ ಯೂಟ್ಯೂಬ್ನಲ್ಲಿ ಲೈವ್ ಆಗಿ ಪ್ರಸಾರ ಮಾಡಲಾಗಿದೆ. ಜಡ್ಜ್ ಆಗಿ ಭಾಗವಹಿಸಿದ್ದ ರೆಸ್ಟೋರೆಂಟ್ವೊಂದರ ಮಾಲೀಕರಾದ ಮೋನಿಕಾ ಗ್ಯಾಲೆಟ್ಟಿ ಪ್ರಶಸ್ತಿ ಗೆದ್ದವರ ಹೆಸರನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಅಜಯ್ ದೇವಗನ್ ಟ್ವೀಟ್ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?
Published On - 5:11 pm, Thu, 28 April 22