Kedarnath Yatra: ಕೇದಾರನಾಥ ಯಾತ್ರೆ ಆರಂಭಕ್ಕೂ ಮುನ್ನ ಅವಘಡ, ಅಧಿಕಾರಿಯ ಕತ್ತು ಸೀಳಿದ ಹೆಲಿಕಾಪ್ಟರ್ ರೋಟರ್ ಬ್ಲೇಡ್

ಉತ್ತರಾಖಂಡದ ಕೇದಾರನಾಥ  ಯಾತ್ರೆ ಆರಂಭವಾಗುವ ಮುನ್ನವೇ ಭಾರೀ ಅವಘಡವೊಂದು ಸಂಭವಿಸಿದೆ. ಹೆಲಿಕಾಪ್ಟರ್ ಫ್ಯಾನ್ ಅಧಿಕಾರಿಯೊಬ್ಬರ ಕತ್ತು ಸೀಳಿರುವ ಘಟನೆ ವರದಿಯಾಗಿದೆ.

Kedarnath Yatra: ಕೇದಾರನಾಥ ಯಾತ್ರೆ ಆರಂಭಕ್ಕೂ ಮುನ್ನ ಅವಘಡ, ಅಧಿಕಾರಿಯ ಕತ್ತು ಸೀಳಿದ ಹೆಲಿಕಾಪ್ಟರ್ ರೋಟರ್ ಬ್ಲೇಡ್
ಹೆಲಿಕಾಪ್ಟರ್
Image Credit source: PTI

Updated on: Apr 24, 2023 | 9:14 AM

ಉತ್ತರಾಖಂಡದ ಕೇದಾರನಾಥ  ಯಾತ್ರೆ ಆರಂಭವಾಗುವ ಮುನ್ನವೇ ಭಾರೀ ಅವಘಡವೊಂದು ಸಂಭವಿಸಿದೆ. ಹೆಲಿಕಾಪ್ಟರ್ ಫ್ಯಾನ್ ಅಧಿಕಾರಿಯೊಬ್ಬರ ಕತ್ತು ಸೀಳಿರುವ ಘಟನೆ ವರದಿಯಾಗಿದೆ. ಮೃತರ ಹೆಸರು ಅಮಿತ್ ಸೈನಿ. ಅಮಿತ್ ಅವರು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಹಣಕಾಸು ನಿಯಂತ್ರಕರಾಗಿದ್ದರು. ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಯದಲ್ಲಿ, ಅಮಿತ್ ಟೈಲ್ ರೋಟರ್ (ಹಿಂಭಾಗದ ಫ್ಯಾನ್) ಗೆ ಡಿಕ್ಕಿ ಹೊಡೆದಿದ್ದರಿಂದ ಅವರ ಕುತ್ತಿಗೆ ಕೊಯ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೊರೆತ ಮಾಹಿತಿ ಪ್ರಕಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯುಕಾಡಾದ ಹಣಕಾಸು ನಿಯಂತ್ರಕ ಅಮಿತ್ ಸೈನಿ ಅವರು ಕೇದಾರನಾಥ ಧಾಮದ ಪರಿಶೀಲನೆಗೆ ಆಗಮಿಸಿದ್ದರು, ಆದರೆ ಖಾಸಗಿ ವಿಮಾನಯಾನ ಕಂಪನಿಯ ಹೆಲಿಕಾಪ್ಟರ್‌ನಿಂದ ಕೆಳಗಿಳಿಯುವಾಗ ಫ್ಯಾನ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಪ್ರಯಾಣದ ವ್ಯವಸ್ಥೆ ಪರಿಶೀಲಿಸಲು ತೆರಳಿದ್ದ ವೇಳೆ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳ ವ್ಯಾಪ್ತಿಯಲ್ಲಿ ಅಧಿಕಾರಿ ಬಂದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ರುದ್ರಪ್ರಯಾಗ ಎಸ್‌ಪಿ ವಿಶಾಖ ಅಶೋಕ್ ತಿಳಿಸಿದ್ದಾರೆ.

ಮತ್ತಷ್ಟು ಓದಿ:Char Dham Yatra: ಕೇದಾರನಾಥ ಯಾತ್ರಾರ್ಥಿಗಳಿಗೆ ಮಳೆ, ಹಿಮಪಾತದ ಎಚ್ಚರಿಕೆ ನೀಡಿದ ಉತ್ತರಾಖಂಡ ಸರ್ಕಾರ

ಹೆಲಿಪ್ಯಾಡ್‌ನಲ್ಲಿ ಅಪಘಾತದ ಸಮಯದಲ್ಲಿ ಉತ್ತರಾಖಂಡ ಸಿವಿಲ್ ಏವಿಯೇಷನ್‌ನ ಸಿಇಒ ಕೂಡ ಇದ್ದರು. ಹೆಲಿಕಾಪ್ಟರ್‌ನ ಹಿಂಬದಿಯ ಬ್ಲೇಡ್‌ಗೆ ತಗುಲಿ ಅಮಿತ್‌ ಅವರ ಕುತ್ತಿಗೆ ಕೊಯ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.

ಅವರು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಹೆಲಿಕಾಪ್ಟರ್‌ನ ಟೈಲ್ ರೋಟರ್ ಬ್ಲೇಡ್‌ ಅವರ ಕುತ್ತಿಗೆಗೆ ತಗುಲಿತ್ತು.
ಏಪ್ರಿಲ್ 22 ರಂದು ಗಂಗೋತ್ರಿ-ಯಮುನೋತ್ರಿಯ ಪೋರ್ಟಲ್‌ಗಳನ್ನು ತೆರೆಯುವುದರೊಂದಿಗೆ, ಉತ್ತರಾಖಂಡದಲ್ಲಿ cಆರ್​ ಧಾಮ್ ಯಾತ್ರೆ ಪ್ರಾರಂಭವಾಗಿದೆ.

ಕೇದಾರನಾಥ ಧಾಮದ ಬಾಗಿಲುಗಳು ಏಪ್ರಿಲ್ 25 ರಂದು ಮತ್ತು ಬದರಿನಾಥ ಧಾಮದ ಬಾಗಿಲುಗಳು ಏಪ್ರಿಲ್ 27 ರಂದು ತೆರೆಯಲಿವೆ. ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಪ್ರಕಾರ, 16 ಲಕ್ಷ ಭಕ್ತರು ಚಾರ್ ಧಾಮ್ ಯಾತ್ರೆಗೆ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಚಾರ್ ಧಾಮ್ ಯಾತ್ರೆಗೆ ನೋಂದಾಯಿಸಿಕೊಳ್ಳುವ ಯಾತ್ರಾರ್ಥಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ