Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ಮದುವೆ ಹಾಲ್​ನಿಂದ ಕ್ರೀಡಾಂಗಣದವರೆಗೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಪೂರೈಕೆಗೆ ಸ್ಟಾಲಿನ್ ಸರ್ಕಾರ ಅನುಮತಿ

ತಮಿಳುನಾಡು ಸರ್ಕಾರವು ಕ್ರೀಡಾಂಗಣ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಪೂರೈಕೆಗೆ ಅನುಮತಿ ನೀಡಿದೆ.

Tamil Nadu: ಮದುವೆ ಹಾಲ್​ನಿಂದ ಕ್ರೀಡಾಂಗಣದವರೆಗೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಪೂರೈಕೆಗೆ ಸ್ಟಾಲಿನ್ ಸರ್ಕಾರ ಅನುಮತಿ
ಮದ್ಯ
Follow us
ನಯನಾ ರಾಜೀವ್
|

Updated on:Apr 24, 2023 | 10:12 AM

ತಮಿಳುನಾಡು ಸರ್ಕಾರವು ಕ್ರೀಡಾಂಗಣ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಪೂರೈಕೆಗೆ ಅನುಮತಿ ನೀಡಿದೆ. ತಮಿಳುನಾಡು ಸರ್ಕಾರವು ರಾಜ್ಯದಲ್ಲಿನ ಕಾನ್ಫರೆನ್ಸ್ ಹಾಲ್‌ಗಳು, ಕನ್ವೆನ್ಷನ್ ಸೆಂಟರ್‌ಗಳು, ಮದುವೆ ಹಾಲ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳು, ಸ್ಟೇಡಿಯಂಗಳು ಮತ್ತು ಮನೆಯ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಪೂರೈಸಲು ವಿಶೇಷ ಪರವಾನಗಿಯನ್ನು ನೀಡುವ ವಿಧಾನವನ್ನು ಜಾರಿಗೆ ತಂದಿದೆ. ತಮಿಳುನಾಡು ಸರ್ಕಾರದ ಗೆಜೆಟ್‌ನಲ್ಲಿ ಅಧಿಸೂಚನೆಯನ್ನು ನೀಡಲಾಗಿದೆ.

ಈ ಅಧಿಸೂಚನೆಯಲ್ಲಿ ತಮಿಳುನಾಡು ಸರ್ಕಾರವು ವಿಶೇಷ ಅನುಮತಿಯೊಂದಿಗೆ ಮದುವೆ ಮಂಟಪಗಳು ಮತ್ತು ಕ್ರೀಡಾ ಮೈದಾನಗಳಲ್ಲಿ ಮದ್ಯವನ್ನು ಬಡಿಸಬಹುದು ಎಂದು ಸೂಚನೆ ನೀಡಿದೆ.

ಮತ್ತಷ್ಟು ಓದಿ: Bihar: ನಕಲಿ ಮದ್ಯ ಸೇವನೆ, ಬಿಹಾರದಲ್ಲಿ 22 ಮಂದಿ ಸಾವು

ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರು ಈ ಪರವಾನಗಿಯನ್ನು ನೀಡಬಹುದು ಇದು ಕೆಲಕಾಲ ಮಾತ್ರ ಮಾನ್ಯವಾಗಿರುತ್ತದೆ. ಈ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಜನರು  ಕಾರ್ಯಕ್ರಮಕ್ಕೆ  7 ದಿನಗಳ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಅರ್ಜಿಯು ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರಿಗೆ ಹೋಗುತ್ತದೆ.

ಈ ವರ್ಷದ ಜನವರಿಯಲ್ಲಿ 21 ವರ್ಷದೊಳಗಿನವರಿಗೆ ಮದ್ಯ ಮಾರಾಟ ಮಾಡುತ್ತಿರುವ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರ ಇದಕ್ಕೆ ಪರವಾನಗಿ ನೀಡುವಂತೆ ಸೂಚಿಸಿತ್ತು. ಜತೆಗೆ ಮದ್ಯದಂಗಡಿಗಳು ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ಮಾತ್ರ ತೆರೆದಿರಬೇಕು ಎಂದು ಹೇಳಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:55 am, Mon, 24 April 23