ಕೇರಳ: ಹಲ್ಲಿನ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಸಾವು

|

Updated on: Nov 08, 2023 | 7:55 AM

ಕೇರಳದ ತ್ರಿಶೂರ್ ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹಲ್ಲಿನ ರೂಟ್​ ಕೆನಾಲ್​ ಚಿಕಿತ್ಸೆಗೆ ಒಳಪಟ್ಟ 4 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ವೈದ್ಯಕೀಯ ನಿರ್ಲಕ್ಷ್ಯದಿಂದ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಕುನ್ನಂಕುಲಂನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ.

ಕೇರಳ: ಹಲ್ಲಿನ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಸಾವು
ರೂಟ್​ ಕೆನಾಲ್-ಸಾಂದರ್ಭಿಕ ಚಿತ್ರ
Image Credit source: Pandit Clinic
Follow us on

ಕೇರಳದ ತ್ರಿಶೂರ್ ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹಲ್ಲಿನ ರೂಟ್​ ಕೆನಾಲ್​ ಚಿಕಿತ್ಸೆಗೆ ಒಳಪಟ್ಟ 4 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ವೈದ್ಯಕೀಯ ನಿರ್ಲಕ್ಷ್ಯದಿಂದ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಕುನ್ನಂಕುಲಂನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ.

ಕಾರ್ಯವಿಧಾನಕ್ಕೂ ಮುನ್ನ ನಾಲ್ಕು ವರ್ಷದ ಬಾಲಕನಿಗೆ ಅರಿವಳಿಕೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಗುವಿಗೆ ಪ್ರಜ್ಞೆ ಬಂದಾಗ ತೀವ್ರ ಅಸ್ವಸ್ಥತೆಯನ್ನು ಅನುಭವಿಸಿದೆ, ರಕ್ತದೊತ್ತಡ ಕಡಿಮೆಯಾಗಿತ್ತು, ಬಳಿಕ ಪ್ರಾಣಪಕ್ಷಿ ಹಾರಿಹೋಗಿದೆ.ಪೋಷಕರ ದೂರಿನ ಮೇರೆಗೆ ಈ ಪ್ರಕರಣವನ್ನು ಅಸಹಜ ಸಾವೆಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆ
ದೆಹಲಿಯ ಏಮ್ಸ್​ ಆಸ್ಪತ್ರೆಯ ವೈದ್ಯರು ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿಯನ್ನು ಹೊರತೆಗೆದಿರುವ ಘಟನೆ ನಡೆದಿದೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ವೈದ್ಯರು ಈ ವಿಶಿಷ್ಟ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 7 ವರ್ಷದ ಮಗುವಿನ ಎಡ ಶ್ವಾಸಕೋಶದಲ್ಲಿ ಅಂಟಿಕೊಂಡಿದ್ದ ಸೂಜಿಯನ್ನು ಹೊರತೆಗೆದಿದ್ದಾರೆ.

ಮತ್ತಷ್ಟು ಓದಿ: ದೆಹಲಿ: ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿ ಹೊರ ತೆಗೆದ ಏಮ್ಸ್​ ವೈದ್ಯರು

ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ಪ್ರಕಾರ, ಮಗುವಿನ ಶ್ವಾಸಕೋಶದಲ್ಲಿ 4 ಸೆಂ.ಮೀ ಉದ್ದದ ಸೂಜಿ ಅಂಟಿಕೊಂಡಿತ್ತು, ಇದನ್ನು ಸಂಕೀರ್ಣ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗಿದೆ.

ಬಾಲಕ ಪದೇ ಪದೇ ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದ, ನಿರಂತರವಾಗಿ ಕೆಮ್ಮು ಬರುತ್ತಿತ್ತು. ವೈದ್ಯರು ಮಗುವಿನ ವಿಕರಣ ಪರೀಕ್ಷೆಯನ್ನು ನಡೆಸಿದಾಗ ಮಗುವಿನ ಎಡ ಶ್ವಾಸಕೋಶದಲ್ಲಿ ಹೊಲಿಗೆ ಯಂತ್ರದ ಸೂಜಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಆದರೆ ಅದನ್ನು ತೆಗೆಯುವುದು ಸುಲಭವಾಗಿರಲಿಲ್ಲ, ತುಂಬಾ ಆಳದಲ್ಲಿ ಸೂಚಿ ಸಿಲುಕಿಕೊಂಡಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ