AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿ ಹೊರ ತೆಗೆದ ಏಮ್ಸ್​ ವೈದ್ಯರು

ದೆಹಲಿಯ ಏಮ್ಸ್​ ಆಸ್ಪತ್ರೆಯ ವೈದ್ಯರು ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿಯನ್ನು ಹೊರತೆಗೆದಿರುವ ಘಟನೆ ನಡೆದಿದೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ವೈದ್ಯರು ಈ ವಿಶಿಷ್ಟ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 7 ವರ್ಷದ ಮಗುವಿನ ಎಡ ಶ್ವಾಸಕೋಶದಲ್ಲಿ ಅಂಟಿಕೊಂಡಿದ್ದ ಸೂಜಿಯನ್ನು ಹೊರತೆಗೆದಿದ್ದಾರೆ.

ದೆಹಲಿ: ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿ ಹೊರ ತೆಗೆದ ಏಮ್ಸ್​ ವೈದ್ಯರು
ಸೂಜಿ
ನಯನಾ ರಾಜೀವ್
|

Updated on:Nov 05, 2023 | 10:36 AM

Share

ದೆಹಲಿಯ ಏಮ್ಸ್​ ಆಸ್ಪತ್ರೆಯ ವೈದ್ಯರು ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿಯನ್ನು ಹೊರತೆಗೆದಿರುವ ಘಟನೆ ನಡೆದಿದೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ವೈದ್ಯರು ಈ ವಿಶಿಷ್ಟ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 7 ವರ್ಷದ ಮಗುವಿನ ಎಡ ಶ್ವಾಸಕೋಶದಲ್ಲಿ ಅಂಟಿಕೊಂಡಿದ್ದ ಸೂಜಿಯನ್ನು ಹೊರತೆಗೆದಿದ್ದಾರೆ.

ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ಪ್ರಕಾರ, ಮಗುವಿನ ಶ್ವಾಸಕೋಶದಲ್ಲಿ 4 ಸೆಂ.ಮೀ ಉದ್ದದ ಸೂಜಿ ಅಂಟಿಕೊಂಡಿತ್ತು, ಇದನ್ನು ಸಂಕೀರ್ಣ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗಿದೆ.

ಬಾಲಕ ಪದೇ ಪದೇ ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದ, ನಿರಂತರವಾಗಿ ಕೆಮ್ಮು ಬರುತ್ತಿತ್ತು. ವೈದ್ಯರು ಮಗುವಿನ ವಿಕರಣ ಪರೀಕ್ಷೆಯನ್ನು ನಡೆಸಿದಾಗ ಮಗುವಿನ ಎಡ ಶ್ವಾಸಕೋಶದಲ್ಲಿ ಹೊಲಿಗೆ ಯಂತ್ರದ ಸೂಜಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಆದರೆ ಅದನ್ನು ತೆಗೆಯುವುದು ಸುಲಭವಾಗಿರಲಿಲ್ಲ, ತುಂಬಾ ಆಳದಲ್ಲಿ ಸೂಚಿ ಸಿಲುಕಿಕೊಂಡಿತ್ತು.

ಡಾ.ವಿಶೇಶ್ ಜೈನ್ ಮತ್ತು ಡಾ.ದೇವೇಂದ್ರ ಕುಮಾರ್ ಯಾದವ್ ಅವರು ಎಲ್ಲಾ ಪರೀಕ್ಷೆಗಳನ್ನು ನಡೆಸಿದ ನಂತರ ಮಗುವಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಚಾಂದಿನಿ ಚೌಕ್‌ನಿಂದ 4 ಎಂಎಂ ಅಗಲ ಮತ್ತು 1.5 ಎಂಎಂ ದಪ್ಪದ ಅಯಸ್ಕಾಂತವನ್ನು ತರಿಸಿಕೊಂಡರು.

ಮತ್ತಷ್ಟು ಓದಿ: Video: ಶಸ್ತ್ರಚಿಕಿತ್ಸೆ ವೇಳೆ ಪಿಯಾನೋ ಮೂಲಕ ಹನುಮಾನ್ ಚಾಲೀಸಾ ನುಡಿಸಿದ ಯುವಕ

ಮಗುವಿನ ಶ್ವಾಸನಾಳ ಅಥವಾ ಉಸಿರಾಟದ ಪೈಪ್‌ಗೆ ಹಾನಿಯಾಗದಂತೆ ಸೂಜಿಯ ಸ್ಥಳಕ್ಕೆ ಅಯಸ್ಕಾಂತವನ್ನು ಹೇಗೆ ತಲುಪಿಸುವುದು ಎಂಬುದು ಸವಾಲಾಗಿತ್ತು. ಶಸ್ತ್ರಚಿಕಿತ್ಸೆಗೆ ಮುನ್ನ ಆಯಸ್ಕಾಂತಗಳನ್ನು ಕ್ರಿಮಿನಾಶಕಗೊಳಿಸಲಾಯಿತು, ಇದರಿಂದ ಮಗುವಿಗೆ ಯಾವುದೇ ಸೋಂಕು ಬರುವುದಿಲ್ಲ. ನಂತರ ತಂಡವು ಶ್ವಾಸಕೋಶದಲ್ಲಿ ಸೂಜಿಯನ್ನು ಪತ್ತೆಹಚ್ಚಲು ಶ್ವಾಸನಾಳದ ಎಂಡೋಸ್ಕೋಪಿಯನ್ನು ನಡೆಸಿತು.

ಇದರ ನಂತರ ಆಯಸ್ಕಾಂತವನ್ನು ಬಾಯಿಯ ಮೂಲಕ ಶ್ವಾಸಕೋಶಕ್ಕೆ ತಲುಪಿಸಲಾಯಿತು. ಸೂಜಿಯು ಅಯಸ್ಕಾಂತಕ್ಕೆ ಅಂಟಿಕೊಂಡಿತು ಮತ್ತು ಶ್ವಾಸಕೋಶದಿಂದ ಹೊರತೆಗೆಯಲಾಯಿತು.

ಸೂಜಿ ಹೊರಬಂದ ತಕ್ಷಣ ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಈಗ ಮಗು ಆರೋಗ್ಯವಾಗಿದೆ. ಬಾಲಕ ಸೂಜಿ ನುಂಗಿದ್ದು ಅವನ ತಾಯಿಗೂ ಗೊತ್ತಿರಲಿಲ್ಲ. ಗುರುವಾರ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಶುಕ್ರವಾರ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಶನಿವಾರ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಬಾಲಕ ಸ್ಥಿತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:35 am, Sun, 5 November 23