Deepavali 2023: ದೇಶಾದ್ಯಂತ ಪಟಾಕಿ ನಿಷೇಧಿಸಿ ಸುಪ್ರೀಂಕೋರ್ಟ್ ತೀರ್ಪು, ಹಸಿರು ಪಟಾಕಿಗೆ ಮಾತ್ರ ಅವಕಾಶ

2018ರ ಪಟಾಕಿ ನಿಷೇಧದ ಆದೇಶ ಇಡೀ ದೇಶಕ್ಕೆ ಅನ್ವಯವಾಗುತ್ತೆ. ಬೇರಿಯಂ ಸೇರಿ ನಿಷೇಧಿತ ರಾಸಾಯನಿಕ ಬಳಸಿರುವ ಪಟಾಕಿ ನಿಷೇಧಿಸಲಾಗಿದೆ. ಹಸಿರು ಪಟಾಕಿ ಬಳಕೆಗೆ ಮಾತ್ರ ಅನುಮತಿ ಇದೆ ಎಂದು ಪಟಾಕಿ ನಿಷೇಧದ ಬಗ್ಗೆ ಮತ್ತೆ ಸುಪ್ರೀಂಕೋರ್ಟ್​ ಸ್ಪಷ್ಟನೆ ನೀಡಿದೆ. ದೀಪಾವಳಿ ಹಬ್ಬ, ಇತರೆ ಹಬ್ಬ, ಕಾರ್ಯಕ್ರಮಗಳಿಗೂ ಈ ನಿಯಮ ಅನ್ವಯ.

Deepavali 2023: ದೇಶಾದ್ಯಂತ ಪಟಾಕಿ ನಿಷೇಧಿಸಿ ಸುಪ್ರೀಂಕೋರ್ಟ್ ತೀರ್ಪು, ಹಸಿರು ಪಟಾಕಿಗೆ ಮಾತ್ರ ಅವಕಾಶ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Nov 08, 2023 | 7:09 AM

ದೆಹಲಿ, ನ.08: ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಸುಪ್ರೀಂಕೋರ್ಟ್ (Supreme Court) ಮಹತ್ವದ ತೀಪು ಹೊರಡಿಸಿದೆ. 2018ರ ಪಟಾಕಿ ನಿಷೇಧದ ಆದೇಶ ಕೇವಲ ದೆಹಲಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅನ್ವಯವಾಗುತ್ತೆ ಎಂದು ಪಟಾಕಿ (Firecrackers) ನಿಷೇಧದ ಬಗ್ಗೆ ಮತ್ತೆ ಸುಪ್ರೀಂಕೋರ್ಟ್​ ಸ್ಪಷ್ಟನೆ ನೀಡಿದೆ. ಬೇರಿಯಂ ಸೇರಿ ನಿಷೇಧಿತ ರಾಸಾಯನಿಕ ಬಳಸಿರುವ ಪಟಾಕಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಸಿರು ಪಟಾಕಿಗಳ ಬಳಕೆಗೆ ಮಾತ್ರ ಅನುಮತಿ ಇದೆ ಎಂದಿದೆ. ದೀಪಾವಳಿ ಹಬ್ಬ, ಇತರೆ ಹಬ್ಬ, ಕಾರ್ಯಕ್ರಮಗಳಿಗೂ ಈ ನಿಯಮ ಅನ್ವಯವಾಗುತ್ತೆ ಎಂದಿದೆ.

ದೇಶದಲ್ಲಿ ನಿಷೇಧಿತ ರಾಸಾಯನಿಕಗಳು ಮತ್ತು ಬೇರಿಯಂ ಲವಣಗಳಿರುವ ಪಟಾಕಿ ಮಾರಾಟ ಮಾಡುವುದನ್ನು, ಖರೀದಿಸುವುದನ್ನು ಮತ್ತು ಬಳಕೆ ಮಾಡುವುದನ್ನು ನಿಷೇಧಿಸಬೇಕು. 2018ರ ಆದೇಶವನ್ನು ರಾಜಸ್ಥಾನದಲ್ಲೂ ಜಾರಿ ಮಾಡಬೇಕು ಎಂದು ರಾಜಸ್ಥಾನದ ವ್ಯಕ್ತಿ ಸೇರಿ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಅರ್ಜಿ ವಿಚಾರಣೆ ನಡೆಸಿ ಪಟಾಕಿ ಬಳಕೆ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ. 2018ರ ಪಟಾಕಿ ನಿಷೇಧದ ಆದೇಶ ಇಡೀ ದೇಶಕ್ಕೆ ಅನ್ವಯ ಎಂದು ಸ್ಪಷ್ಟನೆ ನೀಡಿದೆ.

ನಾವು ನೀಡಿದ್ದ ಹಿಂದಿನ ಆದೇಶದಲ್ಲಿ, ನಾವು ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ಸ್ಥಳೀಯ ಸರ್ಕಾರಕ್ಕೆ ಬಿಟ್ಟಿದ್ದೆವು. ಆಸ್ಪತ್ರೆಗಳಂತಹ ಆರೋಗ್ಯ ಸೂಕ್ಷ್ಮ ಸ್ಥಳಗಳಲ್ಲಿ ಪಟಾಕಿ ಸಿಡಿಸದಂತೆ ಹಾಗೂ ಪಟಾಕಿ ಸಿಡಿಸಲು ಸಮಯ ಮಿತಿಯನ್ನು ನಿಗದಿಪಡಿಸುವಂತೆ ತಿಳಿಸಿದ್ದೆವು. ಎನ್‌ಸಿಆರ್‌ಗೆ ಒಳಪಡುವ ರಾಜಸ್ಥಾನದ ಪ್ರದೇಶಗಳಿಗೂ ದೆಹಲಿ-ಎನ್‌ಸಿಆರ್ ನಿಯಮಗಳು ಅನ್ವಯಿಸುತ್ತವೆ. ಅಂದರೆ ಅಲ್ಲಿಯೂ ಪಟಾಕಿ ಸಿಡಿಸುವುದಕ್ಕೆ ನಿಷೇಧವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಇದನ್ನೂ ಓದಿ: Deepavali 2023: ಈ ಬಾರಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿ

ಇದೇ ವೇಳೆ ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯವನ್ನು ಸುಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸದ್ಯ ಬೇರಿಯಂ, ಕೆಲ ನಿಷೇಧಿತ ಕೆಮಿಕಲ್ ಪಟಾಕಿ ಬಳಕೆ, ಮಾರಾಟ ನಿಷೇಧಿಸಿದ್ದು ಹಸಿರು ಪಟಾಕಿ ಮಾರಾಟ, ಬಳಕೆಗೆ ಮಾತ್ರ ಅನುಮತಿ ನೀಡಿದೆ. ವಾಯುಮಾಲಿನ್ಯ, ಶಬ್ದ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ನಿಷೇಧಿಸಿದ್ದು ಘನತ್ಯಾಜ್ಯ ಉತ್ಪತ್ತಿ ಮಾಡುವ ಪಟಾಕಿ ಬಳಕೆ, ಮಾರಾಟ ನಿಷೇಧಿಸಲಾಗಿದೆ.

ಇನ್ನು ದೀಪಾವಳಿಗೂ ಮುನ್ನ ನಿಷೇಧಿತ ರಾಸಾಯನಿಕಗಳನ್ನು ಬಳಸಿರುವ ಪಟಾಕಿ ಸಿಡಿಸದಂತೆ 2021ರಲ್ಲಿ ಸುಪ್ರೀಂ ಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿತ್ತು. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವಿಲ್ಲ ಮತ್ತು ಬೇರಿಯಂ ಲವಣಗಳನ್ನು ಹೊಂದಿರುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ. 2018 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಅನುಸರಿಸಿ ಹಸಿರು ಪಟಾಕಿಗಳನ್ನು ಅನುಮತಿಸಲಾಗಿದೆ. 2018ರಲ್ಲಿ ನ್ಯಾಯಾಲಯವು ಪಟಾಕಿ ಸಿಡಿಸಲು ಸಮಯವನ್ನು ನಿಗದಿಪಡಿಸಿತ್ತು. ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ರಾತ್ರಿ 11.55ರಿಂದ, 12.30ರವರೆಗಿನ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿತ್ತು.

ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:06 am, Wed, 8 November 23

ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ