ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸೇರಿ ಐವರು ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಚೆರುಕುನ್ ಪುನ್ನಚೇರಿಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಮೃತರನ್ನು ಪದ್ಮಕುಮಾರ್ (59), ಪುತ್ತೂರು ಕರಿವೆಳ್ಳೂರು ನಿವಾಸಿ ಕೃಷ್ಣನ್ (65), ಮಗಳು ಅಜಿತಾ (35), ಚೂರಿಕಾಟ್ ಕಮ್ದಮೇಟ್‌ನ ಪತಿ ಸುಧಾಕರನ್ (49), ಅಜಿತಾ ಅವರ ಸಹೋದರನ ಮಗ ಆಕಾಶ್(9) ಎಂದು ಗುರುತಿಸಲಾಗಿದೆ.
ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಮೃತಪಟ್ಟ ಐವರು ಕಾರು ಪ್ರಯಾಣಿಕರು. ಅವರೆಲ್ಲರೂ ಅಪಘಾತಕ್ಕೊಳಗಾದ ತಕ್ಷಣವೇ ಸಾವನ್ನಪ್ಪಿದರು. ಮೃತ ದೇಹಗಳನ್ನು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದೆ.
ಮತ್ತಷ್ಟು ಓದಿ: Telangana: ಕಾರು-ಟ್ರಕ್ ನಡುವೆ ಅಪಘಾತ, 6 ಮಂದಿ ಸಾವು, ನಾಲ್ವರಿಗೆ ಗಾಯ
ಕಾರನ್ನು ಒಡೆದು ಶವಗಳನ್ನು ಹೊರತೆಗೆಯಲಾಯಿತು, ಮೃತ ಐವರು ಕಾಸರಗೋಡಿನವರು ಎನ್ನಲಾಗಿದೆ. ಪದ್ಮಕುಮಾರ್ ಕಾರು ಚಲಾಯಿಸುತ್ತಿದ್ದಾಗ ರಾತ್ರಿ 10.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾರು ತಲಶ್ಶೇರಿ ಕಡೆಯಿಂದ ಕಾಸರಗೋಡು ಕಡೆಗೆ ಹೋಗುತ್ತಿತ್ತು, ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸಹಾಯದಿಂದ ಕಾರಿನೊಳಗೆ ಸಿಲುಕಿದ್ದವರನ್ನು ಹೊರ ತೆಗೆಯಲಾಯಿತು. ಕಾರಿನ ಮುಂಭಾಗ ಲಾರಿಯ ಕೆಳಗೆ ಇತ್ತು.
ಸಿಎಗೆ ಪ್ರವೇಶ ಪಡೆದ ಮಗ ಸೌರವ್ನನ್ನು ಹಾಸ್ಟೆಲ್ಗೆ ಬಿಟ್ಟು ಸುಧಾಕರನ್ ವಾಪಸಾಗುತ್ತಿದ್ದರು. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಮೋಟಾರು ವಾಹನ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ