ಭಾರತ ಸೂಪರ್ ಪವರ್ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ, ಸಂಸತ್ತಿನಲ್ಲಿ ಗುಡುಗಿದ ಪಾಕ್ ನಾಯಕ
Maulana Fazal Ur Rehman: ನೀವು ಒಮ್ಮೆ ಭಾರತವನ್ನು ನೋಡಿ ಅದು ಸೂಪರ್ ಪವರ್ ರಾಷ್ಟ್ರ ಆಗುತ್ತಿದೆ. ಅದರ ಮಾತು ಎಲ್ಲರೂ ಕೇಳುತ್ತಿದ್ದಾರೆ. ಆದರೆ ನಾವು ಮಾತ್ರ ಭಿಕ್ಷೆ ಬೇಡುತ್ತಿದ್ದೇವೆ ಎಂದು ಭಾರತವನ್ನು ಪ್ರಶಂಸಿದ ಪಾಕ್ ನಾಯಕ ಮೌಲಾನಾ ಫಜಲ್ ಉರ್ ರೆಹಮಾನ್. ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್ (ಜೆಯುಐ-ಎಫ್) ಮುಖ್ಯಸ್ಥ ರೆಹಮಾನ್ ಪಾಕ್ ಸಂಸತ್ತಿನಲ್ಲಿ ತಮ್ಮ ದೇಶದ ಸರ್ಕಾರ ಮಾಡುತ್ತಿರುವ ಕೆಲಸವನ್ನು ವಿರೋಧಿಸಿ, ಭಾರತದ ಸುಧಾರಣೆಯನ್ನು ಶ್ಲಾಘಿಸಿದರು.
ಪಾಕಿಸ್ತಾನದ ನಾಯಕರು ಇತ್ತೀಚೆಗೆ ಭಾರತವನ್ನು ನೋಡುವ ರೀತಿ ಬದಲಾದಂತಿದೆ. ಪ್ರತಿದಿನ ಭಾರತವನ್ನು ದೂಷಿಸುತ್ತಿದ್ದ ಪಾಕ್ ಇದೀಗ ಭಾರತದ ಬಗ್ಗೆ ಮೃದು ಧೋರಣೆ ತೋರುತ್ತಿದೆ. ಭಾರತವನ್ನು ಪಾಕ್ ಶ್ಲಾಘಿಸುತ್ತಿರುವುದು ಅಚ್ಚರಿಯೇ ಸರಿ. ಪಾಕಿಸ್ತಾನದ ಪ್ರಮುಖ ನಾಯಕ ಮೌಲಾನಾ ಫಜಲ್ ಉರ್ ರೆಹಮಾನ್ ಪಾಕಿಸ್ತಾನದ ಸಂಸತ್ತಿನಲ್ಲಿ ಭಾರತದ ಸಾಧನೆ ಬಗ್ಗೆ ಹೇಳಿದ್ದಾರೆ. ಭಾರತವು ಜಾಗತಿಕ ಸೂಪರ್ ಪವರ್ ಆಗುತ್ತಿದೆ. ಪಾಕಿಸ್ತಾನವು ತನ್ನನ್ನು ವಿನಾಶದಿಂದ ರಕ್ಷಿಸುವಂತೆ ಜಗತ್ತನ್ನು ಬೇಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಪಾಕ್ ಸಂಸತ್ತಿನಲ್ಲಿ ರೆಹಮಾನ್ ಪಾಕಿಸ್ತಾನಿ ಸೇನೆಯ ವಿರುದ್ಧವೂ ವಾಗ್ದಾಳಿ ನಡೆಸಿದರು. ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್ (ಜೆಯುಐ-ಎಫ್) ಮುಖ್ಯಸ್ಥ ರೆಹಮಾನ್ ಪಾಕ್ ಸಂಸತ್ತಿನಲ್ಲಿ ತಮ್ಮ ದೇಶದ ಸರ್ಕಾರ ಮಾಡುತ್ತಿರುವ ಕೆಲಸವನ್ನು ವಿರೋಧಿಸಿ, ಭಾರತದ ಸುಧಾರಣೆಯನ್ನು ಶ್ಲಾಘಿಸಿದರು. 2018ರಿಂದ ಪಾಕ್ ಚುನಾವಣೆಯಲ್ಲಿ ಒಂದಲ್ಲ ಒಂದು ಗೊಂದಲ ಇದೆ. 2018ರ ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದ್ದರೆ ಈಗಿನ ಚುನಾವಣೆಯಲ್ಲಿ ಯಾಕೆ ರಿಗ್ಗಿಂಗ್ ಇರಲಿಲ್ಲ? ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಆಡಳಿತ ಒಕ್ಕೂಟವು ಸಂಸತ್ತಿನಲ್ಲಿ ಬಹುಮತವನ್ನು ಹೊಂದಿದ್ದರೆ ಅವರಿಗೆ ಸರ್ಕಾರ ಮಾಡಲು ಬಿಡಬೇಕಿತ್ತು, ಯಾಕೆ? ಬಿಟ್ಟಿಲ್ಲ ಎಂದು ಅವರು ಸಂಸತ್ತಿನಲ್ಲಿ ಗುಡುಗಿದರು.
#BREAKING: Top Pakistani Politician Maulana Fazal Ur Rehman inside Pakistan Parliament says while India is inching closer to become a Global Superpower, Pakistan is begging before the world to save it from devastation. Rehman also takes an indirect dig at the Pakistan Army. pic.twitter.com/c1euemAtVM
— Aditya Raj Kaul (@AdityaRajKaul) April 29, 2024
ತಮ್ಮ ಭಾಷಣದಲ್ಲಿ ಭಾರತದ ಬಗ್ಗೆ ಹಾಡಿ ಹೊಗಳಿದ್ದಾರೆ. ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿ. ಎರಡೂ ದೇಶಗಳು ಒಂದೇ ದಿನದಲ್ಲಿ ಸ್ವಾತಂತ್ರ್ಯ ಪಡೆದಿವೆ, ಆದರೆ ಇಂದು ಅವರು (ಭಾರತ) ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ನಾವು ದಿವಾಳಿತನದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬೇಡಿಕೊಳ್ಳುತ್ತಿದ್ದೇವೆ. ನಿರ್ಧಾರಗಳನ್ನು ಬೇರೆಯವರು ತೆಗೆದುಕೊಳ್ಳುತ್ತಾರೆ ಆದರೆ ಸಮಸ್ಯೆಗಳಿಗೆ ರಾಜಕಾರಣಿಗಳು ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ‘ಮೋದಿಯಿಂದಾಗಿ ಭಾರತೀಯ ಹುಡುಗಿಯನ್ನು ಮದ್ವೆ ಮಾಡಿಕೊಳ್ಳಲಾಗಲಿಲ್ಲ’: ಪಾಕ್ ಇಸ್ಲಾಂ ಮುಖಂಡ ಅಳಲು
ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿಯ (ಸಿಐಐ) ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ಇಸ್ಲಾಮಿಕ್ ತತ್ವಗಳನ್ನು ಕಾಪಾಡಿಕೊಳ್ಳುವ ಮಹತ್ವ ಬಗ್ಗೆ ಅವರು ಒತ್ತಿ ಹೇಳಿದರು. ನಾವು ಇಸ್ಲಾಂ ಹೆಸರಿನಲ್ಲಿ ದೇಶವನ್ನು ಪಡೆದುಕೊಂಡಿದ್ದೇವೆ, ಆದರೆ ಇಂದು ನಾವು ಜಾತ್ಯತೀತ ರಾಷ್ಟ್ರವಾಗಿ ಮಾರ್ಪಟ್ಟಿದ್ದೇವೆ. 1973 ರಿಂದ ಸಿಐಐನ ಒಂದೇ ಒಂದು ಶಿಫಾರಸು ಜಾರಿಗೆ ಬಂದಿಲ್ಲ. ನಾವು ಇಸ್ಲಾಮಿಕ್ ದೇಶವಾಗುವುದು ಹೇಗೆ? CCI ಕಾನೂನುಗಳ ಇಸ್ಲಾಮೀಕರಣದಲ್ಲಿ ಸಹಾಯ ಮಾಡಲು ಸ್ಥಾಪಿಸಲಾದ ಸಾಂವಿಧಾನಿಕ ಸಂಸ್ಥೆಯಾಗಿದೆ. . ದಿವಾಳಿತನ ತಪ್ಪಿಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಭಿಕ್ಷೆ ಬೇಡುತ್ತಿದೆ ಎಂದೂ ಅವರು ಹೇಳಿದ್ದಾರೆ. ಇದೀಗ ಇವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Tue, 30 April 24