‘ಮೋದಿಯಿಂದಾಗಿ ಭಾರತೀಯ ಹುಡುಗಿಯನ್ನು ಮದ್ವೆ ಮಾಡಿಕೊಳ್ಳಲಾಗಲಿಲ್ಲ’: ಪಾಕ್ ಇಸ್ಲಾಂ ಮುಖಂಡ ಅಳಲು

ಇದು ತುಂಬಾ ಹಳೆಯ ಘಟನೆ ಆಗಿದ್ದು, ಪ್ರಧಾನಿ ಮೋದಿ ಅವರು 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದರು. ಆಗ ನಾನು ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲಲ್ಲ ಎಂದು ಯೋಚಿಸುತ್ತಿದ್ದೆ ಆದರೆ ಅವರು ಮತ್ತೆ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಹೀಗಾಗಿ ನನ್ನ ಮದುವೆ ಆಗದಿರಲು ಪ್ರಮುಖ ಕಾರಣ ಪ್ರಧಾನಿ ಮೋದಿ ಎಂದು ಅವರು ಹೇಳಿಕೊಂಡಿದ್ದಾರೆ.

'ಮೋದಿಯಿಂದಾಗಿ ಭಾರತೀಯ ಹುಡುಗಿಯನ್ನು ಮದ್ವೆ ಮಾಡಿಕೊಳ್ಳಲಾಗಲಿಲ್ಲ': ಪಾಕ್ ಇಸ್ಲಾಂ ಮುಖಂಡ ಅಳಲು
ಪ್ರಧಾನಿ ಮೋದಿ, ಮುಫ್ತಿ ತಾರಿಕ್ ಮಸೂದ್
Follow us
|

Updated on: Apr 29, 2024 | 8:15 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾರಣದಿಂದಾಗಿ ಭಾರತೀಯ ಹುಡುಗಿಯನ್ನು ನಾನು ಮದುವೆಯಾಗಲು ಸಾಧ್ಯವಾಗಲಿಲ್ಲ. ಮೋದಿಯವರಿಂದಾಗಿ ನನ್ನೆಲ್ಲ ಕನಸುಗಳು ಭಗ್ನಗೊಂಡಿವೆ ಎಂದು ಪಾಕಿಸ್ತಾನದ ಇಸ್ಲಾಮಿಕ್ ವಿದ್ವಾಂಸ ಮುಫ್ತಿ ತಾರಿಕ್ ಮಸೂದ್​ (Mufti Tariq Masood) ಹೇಳಿದ್ದಾರೆ. ಸದ್ಯ ಮುಫ್ತಿ ತಾರಿಕ್ ಮಸೂದ್ ಹೇಳಿಕೆಯ ವಿಡಿಯೋ ಸೋಶಿಯಲ್​ ಮೀಡಿಯಾ ಸಾಕಷ್ಟು ವೈರಲ್​ ಆಗುತ್ತಿದೆ. 2014 ರಲ್ಲಿ ಪ್ರಧಾನಿ ಮೋದಿ ಗೆದ್ದರು. ಆ ಮೂಲಕ ನನಗೆ ಭಾರತಕ್ಕೆ ಹೋಗಲು ವೀಸಾ ಸಿಗಲಿಲ್ಲ. ನಾನು 5 ವರ್ಷಗಳ ಕಾಲ ಕಾದುಕುಳಿತೆ, ಆದರೆ ನಂತರ 2019 ರಲ್ಲಿ ಕೂಡ ಮೋದಿ ಮತ್ತೆ ಗೆದ್ದರು. ಹಿಗಾಗಿ ನನ್ನ ಕನಸುಗಳು ಛಿದ್ರವಾದವು ಎಂದು ಹೇಳಿದ್ದಾರೆ.

ಇದು ತುಂಬಾ ಹಳೆಯ ಘಟನೆ ಆಗಿದ್ದು, ಪ್ರಧಾನಿ ಮೋದಿ ಅವರು 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದರು. ಆಗ ನಾನು ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲಲ್ಲ ಎಂದು ಯೋಚಿಸುತ್ತಿದ್ದೆ ಆದರೆ ಅವರು ಮತ್ತೆ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಹೀಗಾಗಿ ನನ್ನ ಮದುವೆ ಆಗದಿರಲು ಪ್ರಮುಖ ಕಾರಣ ಪ್ರಧಾನಿ ಮೋದಿ ಎಂದು ಅವರು ಹೇಳಿಕೊಂಡಿದ್ದಾರೆ.

ಮುಫ್ತಿ ತಾರಿಕ್ ಮಸೂದ್ ವೈರಲ್​ ವಿಡಿಯೋ

ಪ್ರಧಾನಿ ಮೋದಿ ಅವರು ಈಗಾಗಲೇ ಎರಡು ಭಾರಿ ಗೆಲ್ಲುವ ಮೂಲಕ ನಾನು 10 ವರ್ಷ ಕಾಯ್ದಿದ್ದೇನೆ. ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನಿಲ್ಲಿ ಕಾಯುತ್ತಾ ಕೂರಬೇಕಾಗುತ್ತದೆ ಎಂದಿದ್ದಾರೆ.

ಮುಫ್ತಿ ತಾರಿಕ್ ಮಸೂದ್ ಯಾರೀತ?

ಮುಫ್ತಿ ತಾರಿಕ್ ಮಸೂದ್ ಓರ್ವ ಪಾಕಿಸ್ತಾನದ ಇಸ್ಲಾಮಿಕ್ ವಿದ್ವಾಂಸ. ಜೊತೆಗೆ ಪುರುಷರು ಬಹು ಪತ್ನಿತ್ವವನ್ನು ಹೊಂದಬೇಕು ಎಂಬ ಕಲ್ಪನೆಯನ್ನು ಸಹ ಬೆಂಬಲಿಸುತ್ತಾರೆ. ಈಗಾಗಲೇ ಮುಫ್ತಿ ತಾರಿಕ್ ಮಸೂದ್​ ಸ್ವತಃ ತಾನು ನಾಲ್ಕು ಮದುವೆ ಮಾಡಿಕೊಂಡಿದ್ದು, 16 ಮಕ್ಕಳನ್ನು ಹೊಂದಿದ್ದಾರೆ. ತನ್ನ ಪಾಕಿಸ್ತಾನದ ಅನುಯಾಯಿಗಳಿಗೂ ಮುಫ್ತಿ ತಾರಿಕ್ ಮಸೂದ್ ಹೆಚ್ಚು ಹೆಚ್ಚು ಮದುವೆ ಮತ್ತು ಮಕ್ಕಳನ್ನು ಹೊಂದುವ ಸಲಹೆ ನೀಡುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಖಲಿಸ್ತಾನ್ ಜಿಂದಾಬಾದ್ ಘೋಷಣೆ ಮಧ್ಯೆ, ಸಿಖ್ಖರಿಗೆ ಸ್ವಾತಂತ್ರ್ಯ ರಕ್ಷಣೆಯ ಭರವಸೆ ಕೊಟ್ಟ ಕೆನಡಾ ಪ್ರಧಾನಿ

ಪಾಕಿಸ್ತಾನಿ ಯೂಟ್ಯೂಬರ್​ಗೆ ಮುಫ್ತಿ ತಾರಿಕ್ ಮಸೂದ್ ನೀಡಿದ ಸಂದರ್ಶನದಲ್ಲಿ ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದು, ನಾಲ್ಕು ಪತ್ನಿಯರು ಮತ್ತು 16 ಮಕ್ಕಳು ಎಲ್ಲರೂ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಾರೆ.  ಆದರೆ ದಾಂಪತ್ಯ ಜೀವನ ಹೇಗಿದೆ ಎಂಬ ಯೂಟ್ಯೂಬರ್​ನ ಪ್ರಶ್ನೆಗೆ ಉತ್ತರಿಸಿದ್ದು, ತಮ್ಮ ಮೊದಲ ಹೆಂಡತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯ ನಾವು ಜಗಳದಲ್ಲಿ ಕಳೆದಿರುವುದಾಗಿ ಹೇಳಿಕೊಂಡಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ